Thursday, May 22, 2025
Google search engine

Homeಸ್ಥಳೀಯತಿರುಪತಿ ಲಡ್ಡುವಿನಲ್ಲಿ ಹಂದಿ, ದನದ ಕೊಬ್ಬು ಹಾಕುವ ಕುಕೃತ್ಯವನ್ನು ಒಬ್ಬ ಕ್ರೈಸ್ತ ಮಾಡಿದ್ದಾನೆ: ಪ್ರತಾಪ್ ಸಿಂಹ...

ತಿರುಪತಿ ಲಡ್ಡುವಿನಲ್ಲಿ ಹಂದಿ, ದನದ ಕೊಬ್ಬು ಹಾಕುವ ಕುಕೃತ್ಯವನ್ನು ಒಬ್ಬ ಕ್ರೈಸ್ತ ಮಾಡಿದ್ದಾನೆ: ಪ್ರತಾಪ್ ಸಿಂಹ ಕಿಡಿ

ಮೈಸೂರು: ತಿರುಪತಿ ಲಡ್ಡುವಿನಲ್ಲಿ ಹಂದಿ, ದನದ ಕೊಬ್ಬು ಮತ್ತು ಮೀನಿನ ಎಣ್ಣೆ ಹಾಕುವಂತಹ ಕುಕೃತ್ಯ ಮಾಡಿ ಹಿಂದೂಗಳ ನಂಬಿಕೆ ಹೊಡೆಯುವ ಕೆಲಸವನ್ನು ಜಗನ್ ಮೋಹನ್ ರೆಡ್ಡಿ ಎಂಬ ಕ್ರೈಸ್ತ ಮಾಡಿದ್ದಾನೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದರು.

ತಿರುಪತಿ ಲಡ್ಡು ವಿವಾದ ಕುರಿತು ಮಾತನಾಡಿದ ಅವರು, ಜಮ್ಮು-ಕಾಶ್ಮೀರ ಒಂದು ರಾಜ್ಯ ಮುಸಲ್ಮಾನರ ಕೈಗೆ ಹೋದ ಕೂಡಲೇ ಅಲ್ಲಿರುವಂತಹ ಕಾಶ್ಮೀರಿ ಪಂಡಿತರನ್ನು ಸಾರಾಸಗಟಾಗಿ ಆಚೆ ದಬ್ಬಿದರು. ಆಂಧ್ರಪ್ರದೇಶ ರಾಜ್ಯ ಕ್ರೈಸ್ತನ ಕೈಗೆ ಸಿಕ್ಕಿತು. ತಿರುಪತಿ ತಿಮ್ಮಪ್ಪನ ಲಡ್ಡುವಿನಲ್ಲಿ ಹಂದಿ, ದನದ ಕೊಬ್ಬು ಮತ್ತು ಮೀನಿನ ಎಣ್ಣೆ ಹಾಕುವಂತಹ ಕುಕೃತ್ಯ ಮಾಡಿ ಹಿಂದೂಗಳ ನಂಬಿಕೆ ಹೊಡೆಯುವ ಕೆಲಸವನ್ನು ಜಗನ್ ಮೋಹನ್ ರೆಡ್ಡಿ ಎಂಬ ಕ್ರೈಸ್ತ ಮಾಡಿದ್ದಾನೆ. ಇನ್ನಾದರೂ ಹಿಂದೂ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಮುಸಲ್ಮಾನರ ಸಂಖ್ಯಾ ಬಾಹುಳ್ಯ ಮತ್ತು ಕ್ರೈಸ್ತರ ಮತಾಂತರದ ಬಗ್ಗೆ ಹಿಂದೂಗಳು ಅರ್ಥ ಮಾಡಿಕೊಳ್ಳಬೇಕು. ಮುಸಲ್ಮಾನರು ಮತ್ತು ಕ್ರೈಸ್ತರ ಕೈಗೆ ಹೀಗೆಯೇ ಒಂದೊಂದು ರಾಜ್ಯಗಳು ಹೋಗುತ್ತಿದ್ದರೆ, ಮುಂದೊಂದು ದಿನ ಭಾರತದಿಂದ ಹಿಂದೂಗಳೇ ಪಲಾಯನ ಮಾಡುವಂತಹ ಪರಿಸ್ಥಿತಿ ಸೃಷ್ಟಿಯಾಗುತ್ತದೆ ಎಂಬುದನ್ನು ತಿರುಪತಿ ತಿಮ್ಮಪ್ಪನ ಲಡ್ಡು ಘಟನೆಯಿಂದ ನೀವು ಅರಿಯಬೇಕು ಎಂದು ಹೇಳಿದರು.

RELATED ARTICLES
- Advertisment -
Google search engine

Most Popular