Monday, June 9, 2025
Google search engine

Homeರಾಜ್ಯಸುದ್ದಿಜಾಲಸಂಭ್ರಮದ ಈದ್-ಉಲ್-ಫಿತರ್ ಆಚರಣೆ

ಸಂಭ್ರಮದ ಈದ್-ಉಲ್-ಫಿತರ್ ಆಚರಣೆ

ಯಳಂದೂರು: ತಾಲೂಕಿನಾದ್ಯಂತ ಗುರುವಾರ ಮುಸ್ಲಿಮರ ಪವಿತ್ರ ಹಬ್ಬವಾದ ರಂಜಾನ್ (ಈದ್-ಉಲ್_ಫಿತರ್) ಹಬ್ಬವನ್ನು ಸಂಭ್ರಮ ಸಡಗರಗಳಿಂದ ಆಚರಣೆ ಮಾಡಲಾಯಿತು.

ಪಟ್ಟಣದ ಜಾಮೀಯ ಮಸೀದಿ ಮುಂಭಾಗದಿಂದ ಬೆಳಿಗ್ಗೆ ೯.೩೦ ಕ್ಕೆ ಇಲ್ಲಿನ ಮುಸ್ಲಿಮರು ಒಂದೆಡೆ ಸೇರಿ ಮೆರವಣಿಗೆ ಮೂಲಕ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ೨೦೯ ರಲ್ಲಿ ಇರುವ ಈದ್ಗಾ ಮೈದಾನಕ್ಕೆ ಅಲ್ಲಾಹುನ ನಾಮಗಳನ್ನು ಹಾಡುತ್ತ ತೆರಳಿದರು. ಹೊಸ ಧಿರಿಸು, ಅತ್ತರಿನ ಸುವಾಸನೆಯೊಂದಿಗೆ, ಚಿಣ್ಣರು ಬಣ್ಣಬಣ್ಣದ ಬಟ್ಟೆಗಳನ್ನು ಧರಿಸಿ ಮೆರವಣಿಗೆಗೆ ಮತ್ತಷ್ಟು ಮೆರಗು ನೀಡಿದರು. ನಂತರ ಈದ್ಗಾ ಮೈದಾನದಲ್ಲಿ ಒಟ್ಟಾಗಿ ಸೇರಿ ವಿಶೇಷ ಪ್ರಾರ್ಥನೆ ನೆರವೇರಿಸಿದರು.

ಪವಿತ್ರ ಧರ್ಮಗ್ರಂಥವಾದ ಕುರಾನ್ ಭೂಮಿ ಮೇಲೆ ಬಂದ ಪವಿತ್ರ ಮಾಸ ಇದಾಗಿದ್ದು, ಒಂದು ತಿಂಗಳ ಕಾಲ ಉಪವಾಸ ವೃತವನ್ನು ಆಚರಿಸುವ ಮುಸ್ಲಿಮರು ಚಂದ್ರ ದರ್ಶನ ಪಡೆದು ನಂತರ ಹಬ್ಬ ಆಚರಿಸುವ ಧಾರ್ಮಿಕ ಹಿನ್ನೆಲೆ ಈ ಹಬ್ಬಕ್ಕಿದೆ. ಒಂದು ತಿಂಗಳ ಕಾಲ ಉಪವಾಸ ಇದ್ದು ಈ ಸಮಯದಲ್ಲಿ ಜಕಾತ್, ಫಿತ್ರ್ ಎಂದು ಕರೆಯಲ್ಪಡುವ ದಾನ, ಧರ್ಮಗಳನ್ನು ಮಾಡುತ್ತಾರೆ.

ಜಾಮೀಯ ಮಸೀದಿಯ ಧರ್ಮಗುರು ಅಬ್ರಾರ್ ಅಹಮ್ಮದ್ ಹಬ್ಬದ ಮಹತ್ವ ಇದರ ಆಚರಣೆ, ಉಪವಾಸದ ಮಹತ್ವ ಕುರಿತು ಪ್ರವಚನ ನೀಡಿದರು. ನಂತರ ವಿಶೇಷ ನಮಾಜ್‌ನ್ನು ನೆರವೇರಿಸಲಾಯಿತು. ಇದಾದ ಮೇಲೆ ದುವಾ (ಪ್ರಾರ್ಥನೆ) ನೆರವೇರಿಸಲಾಯಿತು. ನಂತರ ಮಕ್ಕಳೂ ಸೇರಿದಂತೆ ಪರಸ್ಪರರು ಆಲಂಗಿಸಿಕೊಳ್ಳುವ ಮೂಲಕ ಹಬ್ಬದ ಶುಭಾಶಯವನ್ನು ವಿನಿಮಯ ಮಾಡಿಕೊಂಡರು.


RELATED ARTICLES
- Advertisment -
Google search engine

Most Popular