ಕ್ಷುಲ್ಲಕ ಕಾರಣಕ್ಕೆ ಇಬ್ಬರು ವ್ಯಕ್ತಿಗಳು ನಡು ರಸ್ತೆಯಲ್ಲಿ ಕಲ್ಲು ಹಿಡಿದು ಹೊಡೆದಾಡಿಕೊಂಡ ಘಟನೆ ಮಂಗಳೂರು ನಗರದ ಕಾರ್ ಸ್ಟ್ರೀಟ್ ನಲ್ಲಿ ನಡೆದಿದೆ.
ರಸ್ತೆಯಲ್ಲಿ ಹೊರಳಾಡಿಕೊಂಡು ಇಬ್ಬರೂ ಹೊಡೆದಾಟ ಮಾಡಿದ್ದಾರೆ. ಎರಡು ದಿನಗಳ ಹಿಂದೆ ಘಟನೆ ನಡೆದಿದ್ದು ರಸ್ತೆ ಬದಿ ಮೂಡೆ ಮಾರಾಟಕ್ಕೆ ಇಟ್ಟಿದ್ದನ್ನು ಒಬ್ಬಾತ ಅಪರಿಚಿತ ತುಳಿದುಕೊಂಡು ಹೋಗಿದ್ದಾನೆ. ಇದನ್ನು ಆಕ್ಷೇಪಿಸಿದ ಸ್ಥಳೀಯರೊಬ್ಬರ ಮೇಲೆ ಅಪರಿಚಿತ ವ್ಯಕ್ತಿ ಅಲ್ಲಿಯೇ ನೆಲದಲ್ಲಿದ್ದ ಕಲ್ಲನ್ನು ಎತ್ತಿ ಹಲ್ಲೆ ನಡೆಸಿದ್ದಾನೆ. ಸ್ಥಳೀಯ ವ್ಯಕ್ತಿಯ ತಲೆಯಲ್ಲಿ ರಕ್ತ ಸೋರುತ್ತಿದ್ದರೂ ಯಾರೋ ಒಬ್ಬ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಾನೆ. ಎರಡು ದಿನಗಳ ನಂತರ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.



