ವರದಿ: ವಿನಯ್ ದೊಡ್ಡಕೊಪ್ಪಲ
ಕೆ.ಆರ್.ನಗರ : ಮಾಜಿ ಶಾಸಕರು ಕಾಮಗಾರಿ ಪರಿಶೀಲನೆ ಮಾಡುತ್ತಿದ್ದಾರೆ ಒಳ್ಳೆಯ ಬೆಳವಣಿಗೆ ಆದರೆ ಕಳಪೆಕಾಮಗಾರಿ ಪರಿಶೀಲಿಸಿ ಸಮಯದಲ್ಲಿ ಅಧಿಕಾರಿ ಮತ್ತು ಗುತ್ತಿಗೆದಾರರನ್ನು ನಿಮ್ಮ ಬೆಂಬಲಿಗರ ಗುಂಪು ಕಟ್ಟಿಕೊಂಡು ಹೋಗಿ ಧಮಕಿಹಾಕುವುದು, ಬೆದರಿಸುವುದು ಗಮನಿಸಿದರೆ ಇದು ಬೇರೆ ಅರ್ಥ ಬರುತ್ತದೆ. ಎಲ್ಲೂ ಒಂದು ಕಡೆ ಮಾಮೂಲಿ ಅಥವಾ ರೋಲ್ ಕಾಲ್ ಮಾಡುವ ಅಥವಾ ಬೆಂಬಲಿಗರಿಗೆ ಅನುಕೂಲ ಮಾಡಿ ಕೊಡುವ ಇರಾದೆ ಎಂದು ತಾಲ್ಲೂಕು ಕಾಂಗ್ರೇಸ್ ವಕ್ತಾರ ಸಯ್ಯದ್ದ್ ಜಾಬೀರ್ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್ ಹಾಗೂ ಉದಯ್ ಶಂಕರ್ ಪತ್ರಕರ್ತರ ಭವನದಲ್ಲಿ ಕರೆಯಲಾಗಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಸಾ.ರಾ.ಮಹೇಶ್ ವಿರುದ್ಧ ಗಂಭೀರ ಆರೋಪ ಮಾಡಿದರು.
ನಿಮ್ಮ ಅಧಿಕಾರದಲ್ಲಿ ಕೆವಲ ಬೆರಳೆಣಿಕೆಯಷ್ಟು ಅಭಿವೃದ್ಧಿ ಮಾಡಿರುತ್ತೀರಿ ಅದರಲ್ಲಿ ಕೆಲವು ಅಂದರೆ ಸಾರ್ವಜನಿಕ ಆಸ್ಪತ್ರೆ, ಕೆಲವು ಸಣ್ಣಪುಟ್ಟ ಕಾಮಗಾರಿ ನಿಮ್ಮ ಬೆಂಬಲಿಗರು ಮಾಡಿದ್ದರಲ್ಲ ಅದು ಸಂಪೂರ್ಣ ಕಳಪೆ ಆಗಿದ್ದು ಆಗಿನ ಸಂದರ್ಭದಲ್ಲಿ ಕೆಲವು ಪತ್ರಿಕೆಗಳಲ್ಲಿ ವರದಿಯಾಗಿದ್ದರೂ ಅವತ್ತು ಇಲ್ಲದ ಕಾಳಜಿ ಇವತ್ತು ಮಾತ್ರ ಯಾಕೆ ಬಂತು ಎಂದು ಪರಿಗಣಿತವಾಗಿದೆ ಎಂದು ಪ್ರಶ್ನಿಸಿದರು.
ನಿಮ್ಮ ಅಧಿಕಾರದಲ್ಲಿ ಮಿನಿ ವಿಧಾನಸೌಧ ಕಾಮಗಾರಿ ಸಂಪೂರ್ಣ ಕಳಪೆ ಅಗಿದ್ದು ಮೇಲ್ಟಾವಣಿ ಕುಸಿದು ಬೀಳುತ್ತಿದ್ದು ಇವತ್ತು ಆರ್.ಸಿ.ಸಿ ಕಳಪೆ ಗುಣಮಟ್ಟದಿಂದ ಕೂಡಿದ್ದು ಮಳೆ ನೀರಿನ ಸೋರಿಕೆ ಮತ್ತು ಚಾವಣೆ ಕುಸಿತವಾಗುತ್ತಿದ್ದು ನೀವು ಅಧಿಕಾರದಲ್ಲಿದ್ದಾಗ ಸ್ಥಳ ಪರಿಶೀಲನೆ ಮಾಡಿದ್ದೀರ, ಗುತ್ತಿಗೆದಾರ ಮತ್ತು ಅಧಿಕರಿಗಳಿಗೆ ಪ್ರಶ್ನೆ ಮಾಡಿದ್ದೀರಾ ? ಹೋಗಲಿ ಈಗ ಅ ಸ್ಥಳಗಳಿಗೆ ಹೋಗಿ ಪರಿಶೀಲನೆ ಮಾಡಿದ್ದೀರಾ ಎಂದು ದೂರಿದರು.
ನಿಮ್ಮ ಅಧಿಕಾರದಲ್ಲಿ ಏನು ಅಭಿವೃದ್ಧಿ ಅಗಿದೆ ಎಂಬುದು ಒಂದು ಶ್ವೇತ ಪತ್ರ ಹೊರಡಿಸಿ ನಿಮ್ಮ 15 ವರ್ಷದ ಅಧಿಕಾರದಲ್ಲಿ ತಾಲ್ಲೂಕು ಸಂಪೂರ್ಣ ಬರಡು ಆಗಿತ್ತು ಅಭಿವೃದ್ಧಿ ಕಾಣದೆ ತಾಲ್ಲೂಕು ಸಂಪೂರ್ಣ ಹಾಳಾಗಿದ್ದು ನಮ್ಮ ಶಾಸಕರು ಅಭಿವೃದ್ಧಿ ಮಾಡುತ್ತಿದ್ದಾರೆ ಎಂದರು.
ನಿಮ್ಮ ಸಮುದಾಯ ವಾಸ ಮಾಡುವ ಗ್ರಾಮಗಳಿಗೆ ಸರಿಯಾದ ಸವಲತ್ತು ಮತ್ತು ರಸ್ತೆ ಸೇರಿದಂತೆ ಯಾವುದೇ ಅಭಿವೃದ್ಧಿ ಮಾಡದಿರುವುದು ಇದು ವಾಸ್ತವದ ಸಂಗತಿಯಾಗಿದೆ ಮೊದಲು ನೀವು ಆತ್ಮಾವಲೋಕನ ಮಾಡಿಕೊಳ್ಳಿ ನೀವು ನಿಮ್ಮ ಭಾಷಣದಲ್ಲಿ ನಾನು ಈ ತಾಲ್ಲೂಕಿನಲ್ಲಿ ಸಮಾಜ ಸೇವೆ ಮಾಡುತ್ತಿರುವುದು ನನ್ನ ಸ್ವಂತ ಸಂಪಾದನೆಯಲ್ಲಿ ಎಂದು ಹೇಳುತ್ತಿರುವುದು ಪ್ರತಿಯೊಬ್ಬರಿಗೂ ಗೊತ್ತು ನೀವು ಚುನಾವಣೆಯಲ್ಲಿ ಸೋತ ಮೇಲೆ ನಿಮ್ಮ ಸಮಾಜ ಸೇವೆ ನಿಲ್ಲಿಸಿದ್ದೀರಿ ಇದರಲ್ಲಿ ಗೋತ್ತಾಗುತ್ತದೆ ನೀವು ಎಷ್ಟು ಪ್ರಮಾಣಿಕರು ಎಂದರಲ್ಲದೆ ಇದರಲ್ಲಿಯೇ ಗೋತ್ತಾಗುತ್ತದೆ ನೀವು ಓಟಿಗಾಗಿ ಮಾತ್ರ ಸಮಾಜ ಸೇವೆಯ ಹೆಸರಿನಲ್ಲಿ ಮಾಡುತ್ತಿದ್ದ ಸೇವೆ ಎಂದು.
ಚುನಾವಣೆಯಲ್ಲಿ ಸೋತ ಮೇಲೆ ಸಮಾಜ ಸೇವೆಗಳನ್ನು ನಿಲ್ಲಿಸಿದ್ದೀರಾ ಹಾಗಾದರೆ ನಿಮ್ಮ ಸಂಪಾದನೆ ನಿಂತು ಹೋಗಿದಿಯಾ ಸ್ವಾಮಿ ಈಗ ಯಾಕೆ ಸಮಾಜ ಸೇವೆ ಮಾಡುತ್ತಿಲ್ಲ, ನೀವು ಶಾಸಕರಾಗಿದ್ದಾಗ ಮಂತ್ರಿಯಾಗಿದ್ದಾಗ ನಿಮ್ಮ ಸಮಾಜ ಸೇವೆಗೆ ಹಣವನ್ನು ಹಾಗೂ ಇನ್ನಿತರೆ ಸಹಾಯಗಳನ್ನು ಅಧಿಕಾರಿಗಳು ಹಾಗೂ ಗುತ್ತಿಗೆದಾರರು ನೀಡುತ್ತಿದ್ದರು ಎಂಬ ಅನುಮಾನ ಬರುತ್ತದೆ ಎಂದು ಪತ್ರಿಕೆ ಗೋಷ್ಠಿಯಲ್ಲಿ ಆರೋಪ ಮಾಡಿದರು.



