Sunday, December 21, 2025
Google search engine

Homeಅಪರಾಧಪ್ರೀತಿಸಿ ಮದುವೆಯಾದ ಹೆಂಡತಿಗೆ ಚಟ್ಟ ಕಟ್ಟಿದ ಪಾಪಿ ಪೊಲೀಸಪ್ಪ.

ಪ್ರೀತಿಸಿ ಮದುವೆಯಾದ ಹೆಂಡತಿಗೆ ಚಟ್ಟ ಕಟ್ಟಿದ ಪಾಪಿ ಪೊಲೀಸಪ್ಪ.

ವರದಿ :ಸ್ಟೀಫನ್ ಜೇಮ್ಸ್

ಬೆಳಗಾವಿ: ಪ್ರೀತಿಸಿ ಮದುವೆಯಾಗಿದ್ದಾಕೆಯ ಜೊತೆಗೆ ಜೀವನ ನಡೆಸಬೇಕಿದ್ದ ಪೊಲೀಸಪ್ಪ ಕೊಲೆ ಮಾಡಿದ ಘಟ‌ನೆ ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ರಾಮಸೈಟ್ ದಲ್ಲಿ ನಡೆದಿದೆ.

ಮೂರು ದಿನದ ಹಿಂದೆ ಕೊಲೆಯಾಗಿದ್ದ ಬಸ್ ಕಂಡಕ್ಟರ್ ಕಾಶಮ್ಮ ನೆಲ್ಲಿಕಟ್ಟಿ ಗಂಡನಿಂದ ಕೊಲೆಯಾದ ದುರ್ದೈವಿ. ಪೊಲೀಸ್ ಪೇದೆಯಾಗಿರುವ ಆಕೆಯ ಗಂಡ ಸಂತೋಷ್ ಕಾಂಬಳೆ ಕೊಲೆ ಮಾಡಿದ್ದಾನೆ. ಕಳೆದ 13ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಕಾಶಮ್ಮ ಸಂತೋಷ. ಮದುವೆ ಬಳಿಕ ಹೆಂಡತಿ ಮೇಲೆ ಸಂಶಯ ಪಟ್ಟುಕೊಂಡು ಕಿರುಕುಳ ನೀಡುತ್ತಿದ್ದ. ಪತ್ನಿಗೆ ಟಾರ್ಚರ್ ನೀಡುವುದು ದೈಹಿಕ ಹಲ್ಲೆ ಮಾಡುತ್ತಿದ್ದ ಸಂತೋಷ್ ನ ಕಾಟಕ್ಕೆ ಬೇಸತ್ತು ಗಂಡನ ಸಹವಾಸ ಬಿಟ್ಟು ತವರು ಮನೆ ಸೇರಿದ್ದ ಕಾಶಮ್ಮ ಬಳಿಕ ಸವದತ್ತಿ ಡಿಪೋಗೆ ವರ್ಗಾವಣೆ ಮಾಡಿಸಿಕೊಂಡು ಬಂದಿದ್ದಳು. ಇದಾದ ಬಳಿಕ ವಿವಾಹ ವಿಚ್ಛೇದನಕ್ಕೆ ಬೈಲಹೊಂಗಲ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಿದರು.

ತವರು ಮನೆಯಲ್ಲೂ ಇರದೇ ಸವದತ್ತಿ ಪಟ್ಟಣದಲ್ಲಿ ಬಾಡಿಗೆ ಮನೆ‌ ಮಾಡಿಕೊಂಡಿದ್ದ ಕಾಶಮ್ಮ . ಏಪ್ರಿಲ್ 5, 2025ರಂದು ನ್ಯಾಯಾಲಯದಿಂದ ವಿಚ್ಚೇದನ ಕೂಡ ಪಡೆದಿದ್ದ ಕಾಶಮ್ಮ.
ಇದಾದ ಬಳಿಕವೂ ಹೆಂಡತಿಗೆ ಕರೆ ಮಾಡಿ ಬೈಯ್ಯವುದು ನಿಂದಿಸುತ್ತಿದ್ದ ಸಂತೋಷ ಅಕ್ಟೋಬರ್ 13ರಂದು ಸಂಜೆ ಎಂಟು ಗಂಟೆಗೆ ಕಾಶಮ್ಮನ ಬಳಿ ಹೋಗಿ ಗಲಾಟೆ ಮಾಡಿದ್ದಾನೆ. ಪತ್ನಿಯ ಕತ್ತು ಕೊಯ್ದು ಹೊಟ್ಟೆಗೆ ಇರಿದು ಮೂರು ಬಾರಿ ಕೊಚ್ಚಿ ಕೊಲೆ ಮಾಡಿ ಬಳಿಕ ಅಲ್ಲಿಂದ ಎಸ್ಕೇಪ್ ಆಗಿದ್ದ ಪಾಪಿ ಗಂಡ ಸಂತೋಷ್.

ಮೂರು ದಿನದ ಬಳಿಕ ದುರ್ವಾಸನೆ ಬಂದು ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕೊಲೆ ಕೇಸ್ ದಾಖಲಿಸಿಕೊಂಡು ಸವದತ್ತಿ ಪೊಲೀಸರು ತನಿಖೆ ನಡೆಸಿದ್ದಾರೆ. ಪರಾರಿಯಾದ ಆರೋಪಿ ಸಂತೋಷ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

RELATED ARTICLES
- Advertisment -
Google search engine

Most Popular