ವರದಿ :ಸ್ಟೀಫನ್ ಜೇಮ್ಸ್.
ಮೇಯರ್ ಸ್ಥಾನ ಲಿಂಗಾಯತರಿಗೆ ಕೈತಪ್ಪಿದರೂ ವಿರೋಧಿಸದ ಸಮಾಜ.ಬೆಳಗಾವಿಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಈ ಬಾರಿ ಸಾಮಾನ್ಯ ಮಹಿಳೆಗೆ ಮೇಯರ್ ಆಗುವ ಅವಕಾಶ ಇತ್ತು. ಲಿಂಗಾಯತ ಸಮಾಜಕ್ಕೆ ಕೊಡುವ ಬದಲು ವ್ಯವಸ್ಥಿತವಾಗಿ ಸ್ಥಳೀಯ ಬಿಜೆಪಿ ನಾಯಕನ ಕುತಂತ್ರದಿಂದ ಬೇರೆ ಸಮಾಜಕ್ಕೆ ನೀಡಿದರೂ ಲಿಂಗಾಯತ ಸಮಾಜದವರು ವಿರೋಧ ವ್ಯಕ್ತಪಡಿಸದೆ ಇರುವುದು ದುರ್ದೈವದ ಸಂಗತಿ.
ಬೆಳಗಾವಿ ನಗರದಲ್ಲಿರುವ ಲಿಂಗಾಯತ ಸಮಾಜದವರಿಗೆ ಮೇಯರ್ ಸ್ಥಾನ ಕೈತಪ್ಪಿದರೂ ಬಿಜೆಪಿ ಕೋರ್ ಕಮಿಟಿಯಲ್ಲಿರುವ ಲಿಂಗಾಯತ ನಾಯಕರು ಇದನ್ನು ವಿರೋಧಿಸುವ ದೈರ್ಯ ಮಾಡದೆ ಇರುವುದು ಲಿಂಗಾಯತನರನ್ನು ತುಳಿಯುವವರಿಗೆ ದಾರಿ ಸುಗಮ ಮಾಡಿಕೊಡುತ್ತಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಬಂದಾಗಿನಿಂದ ಹಾಗೂ ಈ ಮೊದಲು ಬಿಜೆಪಿಯಲ್ಲಿ ಲಿಂಗಾಯತರನ್ನು ಕೇವಲ ಮತ ಬ್ಯಾಂಕ್ ಆಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ಸುಲಭವಾಗಿ ಲಿಂಗಾಯತರಿಗೆ ಸಿಗಬೇಕಿದ್ದ ಅಧಿಕಾರ ಬೇರೆ ಸಮಾಜದವರಿಗೆ ನೀಡಿದರೂ ಇದನ್ನು ವಿರೋಧಿಸುವ ತಾಖತ್ತು ಬೆಳಗಾವಿ ಲಿಂಗಾಯತ ಸಂಘಟನೆ ಹಾಗೂ ನಾಯಕರಿಗೆ ಇಲ್ಲದಿರುವುದು ರಾಜಕೀಯವಾಗಿ ಮತಷ್ಟು ಲಿಂಗಾಯತರು ತುಳಿತಕ್ಕೊಳಗಾಗುತ್ತಿರುವುದು ಲಿಂಗಾಯತರಿಲ್ಲಿಯೇ ಆಕ್ರೋಶದ ಮಾತುಗಳು ಕೇಳಿ ಬರುತ್ತಿವೆ.
ಲಿಂಗಾಯತ ಸಮಾಜದವರು ಕೇಲವ ಬಸವ ಜಯಂತಿಯಂದು ಸಮಾಜದಿಂದ ಪಟ್ಟಿ ಸಂಗ್ರಹಿಸಿ ಲಿಂಗಾಯತ ಬಸಮಾಜವನ್ನು ತುಳಿಯುತ್ತಿರುವ ನಾಯಕರಿಂದ ಬಸವೇಶ್ವರರ ಮೂರ್ತಿ ಭೂಮಿ ಪೂಜೆ ಮಾಡಿಸುವ ಸಂಪ್ರದಾಯ ಬೆಳೆಸಿರುವುದು ಲಿಂಗಾಯತ ಸಮಾಜದಲ್ಲಿನ ಕೆಲವರಿಗೆ ಇರುಸು ಮುರುಸು ಉಂಟಾಗಿದೆ



