ಛತ್ತೀಸ್‌ಗಢ: ಕೊರ್ಬಾ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಗೌರೆಲ್ಲಾ ಗ್ರಾಮದ ಭೇದ್ರಪಾಣಿಯ ನಿವಾಸಿ ೩೩ ವರ್ಷದ ಶಾಂತಿ ಬಾಯಿ ಮಾರಾವಿ ಅವರು ಶೂನ್ಯ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರುವ ಚುನಾವಣಾ ಅಭ್ಯರ್ಥಿಯಾಗಿದ್ದಾರೆ.
ಶಾಂತಿ ಬಾಯಿ ಮಾರಾವಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಅವರ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದ ಕಾರಣ ?ಜೀರೊ ಬ್ಯಾಲೆನ್ಸ್ ಎಂದೇ ಇಲ್ಲಿ ಖ್ಯಾತಿ ಪಡೆದಿದ್ದಾರೆ. ಜನರು ಅವರನ್ನು ಜೀರೊ ಬ್ಯಾಲೆನ್ಸ್ ಎಂದೇ ಕರೆಯುತ್ತಾರೆ. ಇದು ಶ್ರೀಮಂತರಿಂದ ಹಿಡಿದು ಕಡಿಮೆ ಆಸ್ತಿ ಹೊಂದಿರುವವರವರೆಗೆ ಯಾವುದೇ ಅರ್ಹ ನಾಗರಿಕರು ಲೋಕಸಭೆ ಅಥವಾ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂಬ ಭಾರತೀಯ ಪ್ರಜಾಪ್ರಭುತ್ವದ ಸೌಂದರ್ಯವನ್ನು ಎತ್ತಿ ತೋರಿಸುತ್ತದೆ.
ಬೈಗಾ ಸಮುದಾಯಕ್ಕೆ ಸೇರಿದ ಶಾಂತಿ ಯಾವುದೇ ರಾಜಕೀಯ ಪಕ್ಷಗಳು ತಮ್ಮ ಮಾತಿಗೆ ಕಿವಿಗೊಡಲಿಲ್ಲ ಎಂಬ ಬೇಸರದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದರು. ಪತಿ ರಾಮ್ ಕುಮಾರ್ ಪ್ರೋತ್ಸಾಹ ನೀಡಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ ಚುನಾವಣೆಗೆ ಸ್ಪರ್ಧಿಸಲು ಭದ್ರತಾ ಠೇವಣಿ ಮೊತ್ತ ೧೨,೫೦೦ ರೂಪಾಯಿ ಆಗಿದ್ದು ಅದನ್ನು ಹೊಂದಿಸಿಕೊಂಡು ಚುನಾವಣೆಯ ಕಣಕ್ಕೆ ಇಳಿದಿದ್ದಾರೆ.
ಕೃಷಿ ಕಾರ್ಮಿಕರಾಗಿ ನಾವು ಗಳಿಸಿದ ಉಳಿತಾಯದ ಜೊತೆಗೆ, ನಾವು ನಮ್ಮ ಸಮುದಾಯದವರಿಂದ ಆರ್ಥಿಕ ಬೆಂಬಲ ಪಡೆದುಕೊಂಡಿದ್ದೇವೆ. ಎಲ್ಲರ ಬೆಂಬಲ ಪಡೆದು ೧೨,೫೦೦ ರೂಪಾಯಿ ಒಟ್ಟುಗೂಡಿಸಿ ಭದ್ರತಾ ಠೇವಣಿ ನೀಡಿದೆವು ಎಂದು ಭದ್ರತಾ ಠೇವಣಿ ಹೇಳುತ್ತಾರೆ.