Monday, March 2, 2026
Google search engine

Homeಅಪರಾಧಚಿನ್ನವನ್ನು ಪಾಲಿಶ್‌ ಮಾಡುವ ಹೆಸರಿನಲ್ಲಿ ವಂಚಿಸಿದ ಆರೋಪಿಯ ಬಂಧನ

ಚಿನ್ನವನ್ನು ಪಾಲಿಶ್‌ ಮಾಡುವ ಹೆಸರಿನಲ್ಲಿ ವಂಚಿಸಿದ ಆರೋಪಿಯ ಬಂಧನ

ಚಿನ್ನವನ್ನು ಪಾಲಿಶ್ ಮಾಡಿಕೊಡುವ ನೆಪದಲ್ಲಿ ವ್ಯಕ್ತಿಯೊಬ್ಬ ಮನೆಗೆ ಬಂದು ರಾಸಾಯನಿಕ ಬಳಸಿ ಚಿನ್ನವನ್ನು ಕರಗಿಸಿ ವಂಚನೆ ಮಾಡಿ ಪರಾರಿಯಾದ ಪ್ರಕರಣ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯ ವೇಣೂರು ಪೊಲೀಸರು ಮೂಡುಬಿದಿರೆ ತಾಲ್ಲೂಕಿನ ಗಂಟಾಲ್‌ಕಟ್ಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ವೇಣೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕು ಕಾಶಿಪಟ್ಣ ಗ್ರಾಮದ ಪಣಿಲಾಜೆ ಎಂಬಲ್ಲಿ, ದಿನಾಂಕ 10.02.2026 ರಂದು ಆರೋಪಿಯು ಸೇಲ್ಸ್‌ ಮ್ಯಾನ್‌ ರೂಪದಲ್ಲಿ, ಚಿನ್ನದ ಒಡವೆಗಳನ್ನು ತೊಳೆದು ಪಾಲಿಶ್ ಮಾಡಿಕೊಡುವುದಾಗಿ ನಂಬಿಸಿ, ಚಿನ್ನವನ್ನು ಪಡೆದುಕೊಂಡು ಅದನ್ನು ಯಾವುದೋ ದ್ರಾವಣ ಬಳಸಿ ಕರಗಿಸಿ ವಂಚಿಸಿದ ಘಟನೆಗೆ ಸಂಬಂಧಿಸಿ, ಅ.ಕ್ರ:13/2026, ಕಲಂ 318(4) ಬಿ.ಎನ್.‌ ಎಸ್.‌ 2023 ರಂತೆ ಪ್ರಕರಣ ದಾಖಲಾಗಿತ್ತು.‌ ತನಿಖೆ ನಡೆಸಿದ ವೇಣೂರು ಠಾಣಾ ಪೊಲೀಸರು, ಆರೋಪಿತನಾದ ಬಿಹಾರ ಸುಫೋಲ್‌ ಜಿಲ್ಲೆಯ ನಿವಾಸಿ ಚಂದನ್‌ ಕುಮಾರ್ (30) ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಯಿಂದ ಸುಮಾರು ರೂ 75,000 ಮೌಲ್ಯದ 7 ಗ್ರಾಂ ಚಿನ್ನಾಭರಣವನ್ನು ವಶಪಡಿಸಲಾಗಿದೆ. ಈ ಪ್ರಕರಣದಲ್ಲಿ ಆರೋಪಿತರ ಪತ್ತೆಗಾಗಿ ವೇಣೂರು ಪೊಲೀಸ್‌ ಠಾಣಾ ಪೊಲೀಸ್‌ ಉಪನಿರೀಕ್ಷಕರಾದ ಅಕ್ಷಯ್‌ ಡವಗಿ, ಓಮನ ಎನ್.‌ ರವರ ನೇತೃತ್ವದಲ್ಲಿ ಎ.ಎಸ್.‌ ಐ. ವೆಂಕಟೇಶ್‌ ನಾಯ್ಕ, ಎ.,ಎಸ್ ಐ ಬೆನ್ನಿಚ್ಚನ್‌, ಹೆಚ್.ಸಿ. 405 ಕೃಷ್ಣ, ಮಹೆಚ್.ಸಿ. 913 ಶ್ರೀಮತಿ ಕೇಶವತಿ, ಪಿ.ಸಿ. 2466 ಬಸವರಾಜ್‌, ಪಿ.ಸಿ. 434 ಮೋಹನ್‌ , ಪಿ.ಸಿ 604, ರಾಕೇಶ್ ರವರ ತಂಡ ಕಾರ್ಯಾಚರಣೆ ನಡೆಸಿರುತ್ತದೆ.

RELATED ARTICLES
- Advertisment -
Google search engine

Most Popular