ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ದರ್ಶನ್ ಮತ್ತೆ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ. ಅದಕ್ಕೆ ಕಾರಣ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಈ ಕೇಸ್‌ನ ವಿಚಾರಣೆ. ಹೈಕೋರ್ಟ್ ನೀಡಿದ್ದ ಜಾಮೀನಿನ ಬಗ್ಗೆ ಸುಪ್ರೀಂ ಕೋರ್ಟ್ ಅಸಮಧಾನವನ್ನು ಹೊರ ಹಾಕಿತ್ತು.
ಈ ಬೆನ್ನಲ್ಲೇ ರಮ್ಯಾ ಅದನ್ನು ಬೆಂಬಲಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲಿಂದ ದರ್ಶನ್ ಫ್ಯಾನ್ಸ್ ರಮ್ಯಾರನ್ನು ಅಶ್ಲೀಲ ಪದಗಳಿಂದ ಟೀಕಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ದರ್ಶನ್ ಅಭಿಮಾನಿಗಳಿಂದ ಅಶ್ಲೀಲ ಮೆಸೇಜುಗಳು ಬರುತ್ತವೆ ಎಂದು ನಟಿ ರಮ್ಯಾ ಆರೋಪಿಸಿದ್ದರು. ದರ್ಶನ್ ಅಭಿಮಾನಿಗಳ ವಿರುದ್ಧ ನಟಿ ರಮ್ಯಾ ತೀವ್ರವಾಗಿ ಕಿಡಿ ಕಾರಿದ್ದಾರೆ.
ಇದೀಗ ನಟ ದರ್ಶನ್ ಅಭಿಮಾನಿಗಳಿಂದ ಅಶ್ಲೀಲ ಸಂದೇಶ ವಿಚಾರವಾಗಿ ಇಂದು ಸೈಬರ್ ಕ್ರೈಂ ಗೆ ನಟಿ ರಮ್ಯಾ ದೂರು ನೀಡಲಿದ್ದಾರೆ. ವಕೀಲರ ಜೊತೆ ಹೇಗೆ ಚರ್ಚಿಸಿ ಅದು ನೀಡುವ ಕುರಿತು ನಿರ್ಧರಿಸುತ್ತೇನೆ ಎಂದು ನಟಿ ರಮ್ಯಾ ತಿಳಿಸಿದ್ದಾರೆ. ವಕೀಲರ ಜೊತೆ ಚರ್ಚಿಸಿ ಯಾವ ರೀತಿ ದೂರು ಕೊಡಬೇಕು ಎಂದು ನಿರ್ಧರಿಸುತ್ತೇನೆ ಎಂದು ನಟಿ ರಮ್ಯಾ ತಿಳಿಸಿದ್ದಾರೆ.
ಇದೇ ವಿಚಾರವಾಗಿ ಗೃಹ ಸಚಿವ ಜಿ ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿ, ರಮ್ಯಾ ದೂರು ಕೊಡಲಿ ಆಮೇಲೆ ಕ್ರಮ ಕೈಗೊಳ್ಳುತ್ತೇವೆ ದೂರು ಕೊಟ್ಟರೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ. ಸೊಮೊಟೊ ಕೇಸ್ ದಾಖಲಿಸಲು ಅವಕಾಶ ಇದ್ದರೆ ಪರಿಶೀಲನೆ ಮಾಡುತ್ತಾರೆ ಆದರೆ ಮೊದಲು ರಮ್ಯಾ ದೂರು ಕೊಡಲಿ. ಯಾವುದು ಸೆನ್ಸೆಟಿವ್ ಆಗಿರುವಂತಹ ವಿಚಾರಗಳು ಇರುತ್ತೆ ಅವುಗಳನ್ನೆಲ್ಲ ಬ್ಲಾಕ್ ಮಾಡುತ್ತಾರೆ. ಅಥವಾ ಅವರು ದೂರು ನೀಡಿದರೆ ಅದರ ಮೇಲೆ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.