Thursday, September 18, 2025
Google search engine

Homeರಾಜ್ಯಸುದ್ದಿಜಾಲಜಾತಿ ಗಣತಿಯಲ್ಲಿ ಒಕ್ಕಲಿಗರ ಸಕ್ರಿಯ ಭಾಗವಹಿಸುವಿಕೆ ಅಗತ್ಯ: ಹೊಸೂರು ಎ.ಕುಚೇಲ್

ಜಾತಿ ಗಣತಿಯಲ್ಲಿ ಒಕ್ಕಲಿಗರ ಸಕ್ರಿಯ ಭಾಗವಹಿಸುವಿಕೆ ಅಗತ್ಯ: ಹೊಸೂರು ಎ.ಕುಚೇಲ್

ವರದಿ : ವಿನಯ್ ದೊಡ್ಡಕೊಪ್ಪಲು

ಕೆ.ಅರ್.ನಗರ : ರಾಜ್ಯದಲ್ಲಿ ಸೆ. ೨೨ ರಿಂದ ಜಾತಿ ಗಣತಿ ಸಮೀಕ್ಷೆಯು ಆರಂಭಗೊಳ್ಳುವುದರಿಂದ ಒಕ್ಕಲಿಗರು ತಮ್ಮ ಈ ಸಮಿಕ್ಷಾ ಕಾರ್ಯದಿಂದ ಹಿಂದೆ ಉಳಿಯ ಬಾರದು ಎಂದು ಕೆ.ಅರ್.ನಗರ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಹೊಸೂರು.ಎ‌.ಕುಚೇಲ್ ಹೇಳಿದರು.

ಸಾಲಿಗ್ರಾಮ ತಾಲೂಕಿನ ಹೊಸೂರಿನ ಜಿ.ಕೆ.ಕನ್ವೆನ್ಷನ್ ಹಾಲ್ ನಲ್ಲಿ ನಡೆದ ಜಾತಿ ಗಣತಿ ಸಮಿಕ್ಷೆ ಜಾಗೃತಿ ಒಕ್ಕಲಿಗ ಸಮುದಾಯದ ಸಭೆಯಲ್ಲಿ ಮಾತನಾಡಿದ ಅವರು ಶೈಕ್ಷಣಿಕ, ಆರ್ಥಿಕ ಹಾಗೂ ಜಾತಿಗಣತಿ ಸಮೀಕ್ಷೆಯಲ್ಲಿ ಒಕ್ಕಲಿಗ ಜನಾಂಗಕ್ಕೆ ತುಂಬಾ ಮಹತ್ವವಾಗಿದ್ದು ಪ್ರತಿಯೊಬ್ಬ ಒಕ್ಕಲಿಗರು ಈ ಸಮೀಕ್ಷಾ ಕಾರ್ಯದಲ್ಲಿ ಪಾಲ್ಗೊಳ್ಳಲು ಬೇಕು ಎಂದು ಮನವಿ ಮಾಡಿದರು.

ಒಕ್ಕಲಿಗ ಸಮುದಾಯದಕ್ಕೆ ರಾಜಕೀಯವಾಗಿ, ಆರ್ಥಿಕವಾಗಿ ಜತಗೆ ಉದ್ಯೋಗ ,ಉನ್ನತ ಶಿಕ್ಷಣ , ಸೇರಿದಂತೆ ಹಿನ್ನಡೆ ಆಗುತ್ತಿದೆ. ಆದುದರಿಂದ ಜಾತಿ ಸಮೀಕ್ಷೆಯಲ್ಲಿ ಒಕ್ಕಲಿಗರು ತಮ್ಮ ಉಪಜಾತಿ ಸಹಿತ ಸಮೀಕ್ಷೆಯಲ್ಲಿ ಗುರುತಿಸಿಕೊಂಡು ಸರ್ಕಾರಿ ಸೌಲಭ್ಯಗಳನ್ನು ಪಡೆಯುವುದು ಅತ್ಯವಶ್ಯ ಎಂದರು.
ಒಕ್ಕಲಿಗರ ಸಂಘದ ಅಧ್ಯಕ್ಷ ಶಿವರಾಮ್ ನೇತೃತ್ವದಲ್ಲಿ ಸಾಲಿಗ್ರಾಮ ಮತ್ತು ಕೆ.ಅರ್.ನಗರ ತಾಲೂಕಿನ ವಿವಿಧ ಗ್ರಾಮಗಳಿಗೆ ಬೇಟಿ ನೀಡಿ ಒಕ್ಕಲಿಗ ಸಮುದಾಯವರಿಗೆ ಸಮೀಕ್ಷೆಯಿಂದ ಅಗುವ ಉಪಯೋಗದ ಕುರಿತು ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಕೆ.ಅರ್.ನಗರ ಒಕ್ಕಲಿಗರ ಸಂಘದ ಅಧ್ಯಕ್ಷ ಶಿವರಾಮ್,ಪ್ರಧಾನ ಕಾರ್ಯದರ್ಶಿ ರಾಮಲಿಂಗು, ನಿರ್ದೇಶಕ ರಾಧಕೃಷ್ಣ,ಎಚ್.ಡಿ.ಗೋಪಾಲ್, ಹೊಸೂರು ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಎಸ್.ಟಿ.ಕೀರ್ತಿ ಎಚ್‌.ಅರ್.ಮಹೇಶ್, ಎಚ್.ಅರ್.ಕೃಷ್ಣಮೂರ್ತಿ, ನಿರ್ದೇಶಕರಾದ ಶ್ರೀಧರ್, ವಿವೇಕಣ್ಣ, ಎಚ್.ಎನ್.ರಮೇಶ್, ಎಪಿಎಂಸಿ ಮಾಜಿ ಸದಸ್ಯ ಶಿವಸ್ವಾಮಿ, ಹಳಿಯೂರು ಗ್ರಾ.ಪಂ.ಮಾಜಿ ಉಪಾಧ್ಯಕ್ಷರಾದ ಬಡ್ಡೆಮಂಜಣ್ಣ, ಎಚ್ಡಿಕೆ ಭಾಸ್ಕರ್, ಮುಖಂಡರಾದ ಡೈರಿ ಮಾದು, ಎಚ್.ಅರ್.ಯಶವಂತ್, ಎಚ್.ಎಸ್.ರವಿ, ಬುಡ್ಡು ರಾಮಣ್ಣ, ಬಾಲಣ್ಣ,ಹರೀಶ್,ಚಂದ್ರಣ್ಣ, ಎಚ್.ಅರ್.ರಾಘವೇಂದ್ರ, ಗೋಪಿ, ವೆಂಕಟೇಶ್, ಸೋಮಶೇಖರ್, ಅಂಗಡಿಕುಮಾರ್, ಐ.ಪಿ.ವೆಂಕಟೇಶ್,ರಾಮೇಗೌಡ, ಬೆಣಗನಹಳ್ಳಿ ನಾಗೇಶ್ ಇದ್ದರು.

RELATED ARTICLES
- Advertisment -
Google search engine

Most Popular