ಬೆಂಗಳೂರು : ತನಗೆ ಲೈಂಗಿಕ ಕಿರುಕುಳ ನೀಡಿರುವುದಲ್ಲದೇ ಹಣಕಾಸು ವಂಚನೆ ಎಸೆಗಿದ್ದಾನೆಂದು ನಟಿಯೊಬ್ಬರು ನೀಡಿರುವ ದೂರಿನ ಆಧಾರದ ಮೇರೆಗೆ ಕನ್ನಡ ಚಿತ್ರರಂಗದ ನಟ, ನಿರ್ದೇಶಕ ಹೇಮಂತ್ ಅವರನ್ನು ರಾಜಾಜಿ ನಗರ ಪೊಲೀಸರು ಬಂಧಿಸಿದ್ದಾರೆ. ರಿಚ್ಚಿ ಎಂಬ ಸಿನಿಮಾದಲ್ಲಿ ತನಗೆ ಅವಕಾಶ ನೀಡಿ ವಂಚಿಸಿದ್ದಾನೆ. ಆತ ನೀಡಿದ್ದ ಚೆಕ್ ಬೌನ್ಸ್ ಆಗಿದೆ ಎಂದು ನಟಿ ದೂರು ನೀಡಿದ್ದರು.
ನಟಿ ನೀಡಿರುವ ದೂರಿನಲ್ಲಿ, ಸಿನಿಮಾ ಚಿತ್ರೀಕರಣಕ್ಕೂ ಮುನ್ನ ತನಗೆ 2 ಲಕ್ಷ ರೂ. ಸಂಭಾವನೆ ಕೊಡುವುದಾಗಿ ಹೇಮಂತ್ ವಾಗ್ದಾನ ಮಾಡಿದ್ದ. ಆದರೆ ಅಶ್ಲೀಲ ಬಟ್ಟೆ ತೊಟ್ಟು ನಟಿಸಬೇಕು ಎಂದು ಕರಾರು ಹಾಕಲು ಶುರು ಮಾಡಿದ್ದ. ಚಿತ್ರೀಕರಣಕ್ಕೆಂದು ಮುಂಬೈಗೆ ತೆರಳಿದಾಗ ತನ್ನೊಡನೆ ಅಸಭ್ಯವಾಗಿ ವರ್ತಿಸಿದ್ದ. ಆತನ ಲೈಂಗಿಕ ಬಯಕೆಗೆ ತಾನು ಸೊಪ್ಪು ಹಾಕಿರಲಿಲ್ಲ. ಅದಕ್ಕೆ ಕೆರಳಿದ್ದ ಹೇಮಂತ್ ರೌಡಿಗಳನ್ನು ಛೂ ಬಿಟ್ಟು ತನಗೆ ಬೆದರಿಕೆ ಹಾಕಿಸಿದ್ದ ಎಂದು ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೇ ಸೆನ್ಸಾರ್ ಮಂಡಳಿಗೆ ನೀಡುವ ಮುನ್ನವೇ ಸಿನಿಮಾದ ಅಶ್ಲೀಲ ದೃಶ್ಯಗಳನ್ನು ಇಂಟರ್ನೆಟ್ ನಲ್ಲಿ ಹರಿಬಿಟ್ಟು ವೈರಲ್ ಮಾಡಿದ್ದಾನೆಂದು ದೂರಿನಲ್ಲಿ ಹೇಳಲಾಗಿದೆ.
ನಟಿ ನೀಡಿದ ದೂರನ್ನು ಆಧರಿಸಿ ಪೊಲೀಸರು ಕ್ರಮ ಕೈಗೊಂಡಿದ್ದು ನಟ, ನಿರ್ದೇಶಕ ಹೇಮಂತ್ ನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಪಡೆದಿದ್ದಾರೆ.