Wednesday, May 13, 2026
Google search engine

Homeಸ್ಥಳೀಯಇಂಧನ ಉಳಿಸಿ ಹೇಳಿಕೆಗೆ ಮೋದಿ ವಿರುದ್ಧ ನಟ ಕಿಶೋರ್ ವಾಗ್ದಾಳಿ

ಇಂಧನ ಉಳಿಸಿ ಹೇಳಿಕೆಗೆ ಮೋದಿ ವಿರುದ್ಧ ನಟ ಕಿಶೋರ್ ವಾಗ್ದಾಳಿ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ದೇಶದ ಜನರು ಕಡಿಮೆ ಇಂಧನ ಬಳಕೆ ಮಾಡಬೇಕು, ಎಲೆಕ್ಟ್ರಿಕ್ ವಾಹನಗಳ ಬಳಕೆ ಜಾಸ್ತಿ ಮಾಡಬೇಕು ಮತ್ತು ಚಿನ್ನ ಖರೀದಿಸಬಾರದು ಎಂದು ಹೇಳಿದ್ದು, ಇದು ತೀವ್ರ ಚರ್ಚೆಗೆ ಕಾರಣವಾಗಿದೆ.

ಈ ಬಗ್ಗೆ ಫೇಸ್ ಬುಕ್ ನಲ್ಲಿ ಪ್ರತಿಕ್ರಿಯಿಸಿರುವ ಖ್ಯಾತ ಬಹುಭಾಷಾ ನಟ ಕಿಶೋರ್ ಅವರು, ಯಾರು ಇಲ್ಲಿ ಅತಿ ದೊಡ್ಡ ಮೂರ್ಖರು? ನಮ್ಮನ್ನು ಇಂಧನ ಉಳಿಸಿ, ಕಡಿಮೆ ಖರ್ಚು ಮಾಡಿ, ಅದೇ ದೇಶಭಕ್ತಿ ಎಂದು ಹೇಳಿದ ಮರುದಿನವೇ ವಾಹನಗಳ ದಂಡಿನೊಂದಿಗೆ ರೋಡ್ ಶೋನಲ್ಲಿ ಭಾಗವಹಿಸುವ ಇವನೋ???(ಗಲ್ಫ್ ಯುದ್ಧ ಪ್ರಾರಂಭವಾದ ನಂತರದ ಕಳೆದ ಕೆಲವು ತಿಂಗಳುಗಳಲ್ಲಿ ಅವನು ಮಾಡಿದ ಚುನಾವಣಾ ರ್ಯಾಲಿಗಳನ್ನು ಮರೆಯಬಾರದು) ಅಥವಾ ಇವನ ಮಾತನ್ನು ನಂಬಿ, ಮತ ಹಾಕಿ ಇವನನ್ನು ಅಧಿಕಾರದಲ್ಲಿಡುವ ಜನರೋ??? ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಿಡಿ ಕಾರಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಜಗತ್ತು ನಿರಂತರವಾಗಿ ಅಸ್ಥಿರ ಪರಿಸ್ಥಿತಿಗಳ ಮೂಲಕ ಹಾದುಹೋಗುತ್ತಿದೆ ಮತ್ತು ಪಶ್ಚಿಮ ಏಷ್ಯಾ ಸಂಘರ್ಷದಿಂದ ಸೃಷ್ಟಿಯಾದ ಸನ್ನಿವೇಶಗಳು ದಶಕದ ಪ್ರಮುಖ ಬಿಕ್ಕಟ್ಟುಗಳಲ್ಲಿ ಒಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹೇಳಿದ್ದಾರೆ.

ದೇಶದ ನಾಗರಿಕರು ವಿದೇಶಗಳಿಂದ ಬರುವ ಉತ್ಪನ್ನಗಳ ಮೇಲಿನ ವೆಚ್ಚವನ್ನು ಕಡಿಮೆ ಮಾಡುವಂತೆ ಮತ್ತೆ ಕರೆ ನೀಡಿದ ಪ್ರಧಾನಿ ಮೋದಿ, ‘ವೋಕಲ್ ಫಾರ್ ಲೋಕಲ್’ ಮಂತ್ರ ಅನುಸರಿಸಬೇಕು ಎಂದು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular