Tuesday, May 20, 2025
Google search engine

Homeರಾಜ್ಯದಸರಾ ಚಲನಚಿತ್ರೋತ್ಸವ ಉದ್ಘಾಟಿಸಿದ ನಟಿ ಮಿಲನಾ ನಾಗರಾಜ್

ದಸರಾ ಚಲನಚಿತ್ರೋತ್ಸವ ಉದ್ಘಾಟಿಸಿದ ನಟಿ ಮಿಲನಾ ನಾಗರಾಜ್

ಮೈಸೂರು: ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ ಆಯೋಜಿಸಿದ್ದ ಚಲನಚಿತ್ರೋತ್ಸವ ಕಾರ್ಯಕ್ರಮವನ್ನು ಇಂದು ನಗರದ ಐನಾಕ್ಸ್ ಮಾಲ್ ನಲ್ಲಿ ಚಲನಚಿತ್ರ ನಟಿ ಮಿಲನಾ ನಾಗರಾಜ್ ರವರು ಕನ್ನಡದ ಖ್ಯಾತ ನಟರಾದ ಡಾ. ರಾಜಕುಮಾರ್ ಮತ್ತು ಖ್ಯಾತ ಹಾಸ್ಯ ನಟರಾದ ನರಸಿಂಹರಾಜು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನೆರವೇರಿಸಿದ್ದರು.

ಚಲನಚಿತ್ರೋತ್ಸವ ಉದ್ಘಾಟನೆಗೊಂಡ ಮೊದಲ ದಿನವೇ ಹೆಚ್ಚಿನ ಸಿನಿಮಾ ಪ್ರೇಕ್ಷಕರು ಪಾಲ್ಗೊಂಡು ಯಶಸ್ವಿಯಾಗಿ ಚಲನ ಚಿತ್ರೋತ್ಸವವನ್ನು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ದಸರಾ ಚಲನಚಿತ್ರೋತ್ಸವ ಸಮಿತಿಯ ಉಪ ವಿಶೇಷ ಅಧಿಕಾರಿಗಳು ಹಾಗೂ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕರಾದ ಎಂ. ಕೆ ಸವಿತಾ, ಕಾರ್ಯದಕ್ಷರು ಹಾಗೂ ವಿಶೇಷ ಭೂಸ್ವಾಧನಾಧಿಕಾರಿಗಳಾದ ವಿ. ಪ್ರಿಯ ದರ್ಶಿನಿ, ಕಾರ್ಯದರ್ಶಿಗಳು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಹರೀಶ್ ಟಿ ಕೆ ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular