Thursday, May 22, 2025
Google search engine

Homeರಾಜ್ಯಮೈಸೂರು ಸ್ಯಾಂಡಲ್ ಸೋಪ್‌ಗೆ ರಾಯಭಾರಿಯಾಗಿ ನಟಿ ತಮನ್ನಾ ನೇಮಕ

ಮೈಸೂರು ಸ್ಯಾಂಡಲ್ ಸೋಪ್‌ಗೆ ರಾಯಭಾರಿಯಾಗಿ ನಟಿ ತಮನ್ನಾ ನೇಮಕ

ಬೆಂಗಳೂರು: ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ಕರ್ನಾಟಕದ ಸರ್ಕಾರದ ಒಡೆತನದಲ್ಲಿರುವ ಮೈಸೂರು ಸ್ಯಾಂಡಲ್ ಸೋಪ್‌ಗೆ ಹೊಸ ರಾಯಭಾರಿಯಾಗಿ ನೇಮಕ ಮಾಡಲಾಗಿದೆ.

ಈ ಬ್ರ‍್ಯಾಂಡ್‌ಗೆ ಪ್ರಚಾರ ರಾಯಭಾರಿ ಆಗಿ ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರು ನೇಮಕವಾಗಿರುವುದು ವಿಶೇಷ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಪ್ರಾರಂಭವಾಗಿದ್ದು, ತಮನ್ನಾ ಬದಲು ಕನ್ನಡದ ನಟಿಯರನ್ನೇ ಆಯ್ಕೆ ಮಾಡಿಕೊಳ್ಳಬಹುದಿತ್ತಲ್ಲ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಮೈಸೂರು ಸ್ಯಾಂಡಲ್‌ಸೋಪ್ ತಮನ್ನಾ ಭಾಟಿಯಾ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ. ಎರಡು ವರ್ಷಗಳ ಕಾಲ ತಮನ್ನಾ ಜೊತೆ ಕರ್ನಾಟಕ ಸರ್ಕಾರ ಒಪ್ಪಂದ ಇರಲಿದೆ. ಇದಕ್ಕಾಗಿ ನಟಿಗೆ ಬರೋಬ್ಬರಿ 6.20 ಕೋಟಿ ರೂಪಾಯಿ ನೀಡಲಾಗಿದೆ ಎಂಬ ಸುತ್ತೋಲೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದೀಪಿಕಾ ಪಡುಕೋಣೆ ಅವರು ಕರ್ನಾಟಕದಿಂದ ಬಾಲಿವುಡ್‌ಗೆ ಹೋದವರು. ಕನ್ನಡದಲ್ಲಿ ಈ ರೀತಿ ಸಾಕಷ್ಟು ನಟಿಯರು ಇದ್ದಾರೆ. ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತು. ಕನ್ನಡದ ನಟಿಯರು ಸಿಗಲಿಲ್ಲವಾ? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

RELATED ARTICLES
- Advertisment -
Google search engine

Most Popular