ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಅನ್ನ ದಾಸೋಹ, ಆರೋಗ್ಯ, ಶಿಕ್ಷಣ ಉದ್ಯೋಗ ಮತ್ತು ಜನ ಸೇವೆಯಿಂದ ಆದಿ ಚುಂಚನಗಿರಿ ಮಠ ಜಗತ್ತಿಗೆ ಮಾದರಿಯಾಗಿದೆ ಎಂದು ಮಾಜಿ ಸಚಿವ ಸಾರಾ ಮಹೇಶ್ ಹೇಳಿದರು. ಕೆ.ಆರ್.ನಗರ ಪಟ್ಟಣದ ಎಚ್. ಡಿ. ದೇವೇಗೌಡ ಸಮುದಾಯ ಭವನದಲ್ಲಿ ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ನಡೆದ ನಾಡು ಪ್ರಭು ಕೆಂಪೇಗೌಡರ 516ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶ್ರೀಮಠವು ವಿಶ್ವದ ಎಲ್ಲಾ ಮೂಲೆಗಳಲ್ಲಿಯೂ ಶಾಖಾ ಮಠ ತೆರೆಯುವ ಕೆಲಸ ಮಾಡುತ್ತಿರುವುದು ಒಕ್ಕಲಿಗ ಸಮಾಜ ಹೆಮ್ಮೆಪಡುವ ವಿಚಾರ ಎಂದರು.
ನಾಡಪ್ರಭು ಕೆಂಪೇಗೌಡರು ಸುಂದರ ಬೆಂಗಳೂರು ನಗರ ನಿರ್ಮಿಸುವ ಜತೆಗೆ ಸುತ್ತಮುತ್ತ ಕೆರೆ ಕಟ್ಟೆಗಳನ್ನು ಕಟ್ಟಿ ಅವುಗಳ ಜೀರ್ಣೋದ್ದಾರ ಮಾಡುವ ಮೂಲಕ ಜಲಕ್ರಾಂತಿ ಮಾಡಿದ್ದು ರೈತರು ಮತ್ತು ಜನರಿಗೆ ಕುಡಿಯುವ ನೀರು ಮತ್ತು ವ್ಯವಸಾಯಕ್ಕೆ ಅನೂಕೂಲ ಕಲ್ಪಿಸಿ ಜಾತ್ಯತೀತವಾಗಿ ಎಲ್ಲಾ ಸಮುದಾಯವನ್ನು ಸಂಘಟಿಸುವ ಕೆಲಸವನ್ನು ಮಾಡಿದ್ದರು ಎಂದು ಸ್ಮರಿಸಿದರು.
ಕೆಂಪೇಗೌಡರ ನಂತರ ಅವರ ನಂತರ ಕೆರೆ ಕಟ್ಟೆಗಳ ಅಭಿವೃದ್ಧಿಯೊಂದಿಗೆ ಕಾಲುವೆಗಳನ್ನು ತೆಗೆಸುವ ಮೂಲಕ ರೈತರಿಗೆ ಮತ್ತು ಜನರಿಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದ ನಾಯಕರಿದ್ದರೆ ಮಾಜಿ ಪ್ರಧಾನ ಮಂತ್ರಿಗಳಾದ ಎಚ್. ಡಿ. ದೇವೇಗೌಡ ಮತ್ತು ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಎಂದು ತಿಳಿಸಿದರು.
ಕೇಂದ್ರ ಸಚಿವರಾದ ಎಚ್. ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಕೆ. ಆರ್. ನಗರ ವಿಧಾನಸಭಾ ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ನೀಡುವ ಮೂಲಕ ನೀರಾವರಿ, ರಸ್ತೆ, ವಿದ್ಯುತ್ ಸೇರಿದಂತೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಹಾಕಾರ ನೀಡಿ ಏತ ನೀರಾವರಿ ಅನುಷ್ಠಾನ ಹಾಗೂ ಕೆರೆ ಕಟ್ಟೆಗಳ ಆಧುನೀಕರಣ ದೇವಾಲಯಗಳ ಅಭಿವೃದ್ಧಿ ಸಮುದಾಯ ಭವನಗಳ ನಿರ್ಮಾಣ ಮಾಡಲು ಸಹಕಾರ ನೀಡಿದರೆಂದು ಶ್ಲಾಘಿಸಿದರು.

ಮುಂಡಿಗನಹಳ್ಳಿ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ ಅನುಕೂಲಕ್ಕಾಗಿ 24 ಕೋಟಿಗಳ ಅನುದಾನವನ್ನು ತಂದು ಕೆರೆಗಳ ಹೂಳು ತೆಗೆಯುವುದರೊಂದಿಗೆ ಏತ ನೀರಾವರಿಯ ಮೂಲಕ ಕೆರೆಗೆ ನೀರು ತುಂಬಿಸಿ ಈ ಭಾಗದ ನಾಲ್ಕೈದು ಗ್ರಾಮಗಳಿಗೆ ಅನುಕೂಲವಾಗಲೆಂದು ಅನುದಾನವನ್ನು ಮೀಸಲಿಟ್ಟು ನಾನು ಶಾಸಕನಾಗಿದ್ದಾಗ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿತ್ತು ಆದರೆ ಈಗಿನ ಸರ್ಕಾರ ಹಾಗೂ ಶಾಸಕರು ಕಾಮಗಾರಿ ಸ್ಥಳಾಂತರ ಮಾಡಿಸುತ್ತಿದ್ದು ಈ ಬಗ್ಗೆ ಒಕ್ಕಲಿಗ ಸಮುದಾಯದ ಕಾಂಗ್ರೆಸ್ ಮುಖಂಡರು ಸೇರಿದಂತೆ ಆ ಗ್ರಾಮದ ಸುತ್ತಮುತ್ತಲಿನ ಜನರು ಪ್ರಶ್ನಿಸುವಂತೆ ತಿಳಿಸಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಡಾ. ನಿರ್ಮಲಾನಂದ ನಾಥ ಸ್ವಾಮೀಜಿ ಮಾತನಾಡಿ ಒಕ್ಕಲಿಗ ಸಮುದಾಯದ ಕೆಂಪೇಗೌಡರ ಸಾಧನೆ ಮತ್ತು ಸಮಾಜಮುಖಿ ಕೆಲಸಗಳು ವಿಶ್ವಕ್ಕೆ ಮಾದರಿಯಾಗಿದ್ದು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸ್ವಂತ ಭೂಮಿಯನ್ನೇ ನೀಡುವ ಮೂಲಕ ಬೆಂಗಳೂರು ನಗರ ನಿರ್ಮಾಣ ಮಾಡಿದ ಅವರ ಕೆಲಸ ಅಜರಾಮರ ಎಂದರು.
ನಾಡಪ್ರಭುಗಳ ನಂತರ ಮುಖ್ಯಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯ ಕೆ ಸಿ ರೆಡ್ಡಿ ರಾಜ್ಯದ ಅಭಿವೃದ್ಧಿಪರ ಕೆಲಸ ಮಾಡಿ ಜನ ಸಾಮಾನ್ಯರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಗಳಿಸಿದ್ದು ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋದ ಮಾಜಿ ಪ್ರಧಾನಮಂತ್ರಿಗಳಾದ ಎಚ್. ಡಿ. ದೇವೇಗೌಡ, ಮತ್ತು ದಿವಂಗತ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರುಗಳು ಜನ ಮೆಚ್ಚುವ ಕೆಲಸ ಮಾಡಿದರು ಎಂದರು.
ಈ ಸಂದರ್ಭದಲ್ಲಿ ಸಮುದಾಯ ಭವನದ ಮುಂದೆ ನೂತನವಾಗಿ ನಿರ್ಮಿಸಿರುವ ಗಣಪತಿ ದೇವಾಲಯ ಉದ್ಘಾಟಿಸಿ ಬಾಲಗಂಗಾದರನಾಥ ಶ್ರೀಗಳ ಕಂಚಿನ ಪುತ್ಥಳಿ ಅನಾವರಣ ಮಾಡಲಾಯಿತು.

ಮೈಸೂರು ಶಾಖಾ ಮಠದ ಸೋಮನಾಥ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ನವನಗರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ. ಎನ್. ಬಸಂತ್ ನಂಜಪ್ಪ, ಮೈಸೂರಿನ ಸುಯೋಗ ಆಸ್ಪತ್ರೆಯ ಅಧ್ಯಕ್ಷ ಡಾ.ಎಸ್. ಪಿ. ಯೋಗಣ್ಣ, ಜಿಲ್ಲಾ ಒಕ್ಕಲಿಗರ ಸಂಘದ ಮಾಜಿ ಉಪಾಧ್ಯಕ್ಷ ಎಸ್. ಪಿ.ತಮ್ಮಯ್ಯ, ತಾಲೂಕು ಸಂಘದ ಗೌರವಾಧ್ಯಕ್ಷ ಮಿರ್ಲೆಅಣ್ಣೇಗೌಡ, ಕಾರ್ಯಾಧ್ಯಕ್ಷ ಹೊಸಹಳ್ಳಿವೆಂಕಟೇಶ್, ಅಧ್ಯಕ್ಷ ಶಿವರಾಮು, ಉಪಾಧ್ಯಕ್ಷ ಎ.ಕುಚೇಲ, ಕಾರ್ಯದರ್ಶಿ ಸಿ. ಎಸ್.ರಾಮಲಿಂಗು, ನಿರ್ದೇಶಕರಾದ ಮಂಜುಗೌಡ, ರಾಧಾಕೃಷ್ಣ, ತಿಮ್ಮೇಗೌಡ, ಕಂಚಗಾರಕೊಪ್ಪಲು.ಕೆ.ಬಿ.ಪ್ರಕಾಶ್, ಸಂತೋಷ್ ಗೌಡ, ಕೇಶವ, ಎಸ್.ಆರ್.ಪ್ರಕಾಶ್ ಮಂಜುನಾಥ್, ಅನಿಲ್ ಗೌಡ, ಶಿವಪ್ಪ ಮಹೇಶ್ ನಂಜುಂಡೇಗೌಡ, ನರೇಂದ್ರ ಸಂಪತ್ ಕುಮಾರ್ ಅಣ್ಣಾಜಿ ಗೌಡ ಸುನಿತಾ ರವೀಂದ್ರ ಗೋಪಾಲ್ ಮೂರ್ತಿ ದೇವೇಂದ್ರ, ಒಕ್ಕಲಿಗ ಸಮಾಜದ ಮುಖಂಡರಾದ ಎ.ಟಿ.ಸೋಮಶೇಖರ್, ಕುಪ್ಪಳ್ಳಿ ಸೋಮು, ಎಸ್.ಟಿ.ಕೀರ್ತಿ, ಎಂ.ಎಸ್.ಹರಿಚಿದಂಬರ
ಶೃತಿಸುರೇಶ್, ಚಿಕ್ಕನಾಯಕನಹಳ್ಳಿಸುರೇಶ್, ಸ್ಟೇಷನ್ ರಮೇಶ್, ಜೆಲ್ಲಿರಾಜು,ಕೇಬಲ್ ಮಂಜು, ಕೆ.ಜಿ.ಸುಬ್ರಹ್ಮಣ್ಯ, ಶಂಭು, ಎ.ತಿಮ್ಮಪ್ಪ, ವಡ್ಡರವಿ, ಸಚಿನ್, ಡಿ.ಆರ್.ರಮೇಶ್, ಮಾಸ್ಟರ್ ಸಂಗರಶೆಟ್ಟಹಳ್ಳಿ ಸುರೇಶ್, ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಕರ್ತಾಳ್ ಸತೀಶ್, ಲಕ್ಕಿಕುಪ್ಪೆ ಶಂಕರೇಗೌಡ, ಮಧುಕುಮಾರ್, ಮುರುಳಿ,ರಾಘವೇಂದ್ರ, ಶಶಿಕಾಂತ್, ಮತ್ತಿತರರು ಇದ್ದರು.