Friday, August 22, 2025
Google search engine

Homeಸ್ಥಳೀಯಆದಿಕರ್ಮಯೋಗಿ ಅಭಿಯಾನ ಕಾರ್ಯಾಗಾರ ಯಶಸ್ವಿ : ಬಿ.ಎಸ್. ಪ್ರಭಾ ಅರಸ್

ಆದಿಕರ್ಮಯೋಗಿ ಅಭಿಯಾನ ಕಾರ್ಯಾಗಾರ ಯಶಸ್ವಿ : ಬಿ.ಎಸ್. ಪ್ರಭಾ ಅರಸ್

ಮೈಸೂರು : ಆದಿ ಕರ್ಮಯೋಗಿ ಅಭಿಯಾನ ಒಂದು ನಿರಂತರ ಅಭಿಯಾನವಾಗಿದ್ದು ೩ ದಿನಗಳ ಕಾಲ ನಡೆದ ಈ ಕಾರ್ಯಾಗಾರ ಯಶಸ್ವಿಯಾಗಿದೆ ಎಂದು ಕರ್ನಾಟಕ ರಾಜ್ಯ ಬುಡಕಟ್ಟು ಸಂಸ್ಥೆಯ ಉಪನಿರ್ದೇಶಕಿ ಬಿ.ಎಸ್. ಪ್ರಭಾ ಅರಸ್ ತಿಳಿಸಿದರು.

ನಗರದ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಗ್ರಾಮೀಣ ಅಭಿವೃದ್ಧಿ ಇಲಾಖೆ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ಶಿಕ್ಷಣ ಇಲಾಖೆ ಆರೋಗ್ಯ ಮತ್ತು ಕುಟುಂಬಕಲ್ಯಾಣ ಇಲಾಖೆಯ ತಾಲ್ಲೂಕು ಮಟ್ಟದ ಮಾಸ್ಟರ್‌ತರಬೇತಿದಾರರಿಗೆ ಹಮ್ಮಿಕೊಂಡಿದ್ದ, ೩ ದಿನಗಳ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಯಾವುದೇ ಹೊಸಯೋಜನೆ ಬಂದರೂ ಸಹ ಅದರ ಅನುಷ್ಠಾನದ ಸಂಬಂಧ ಆದಿಕರ್ಮಯೋಗಿಗಳಾಗಿ ತರಬೇತಿ ಹೊಂದಿರುವ ವಿವಿಧ ಇಲಾಖೆಯ ಅಧಿಕಾರಿಗಳು ಯೋಜನೆಯ ಯಶಸ್ವಿಗೆ ಶ್ರಮಿಸುವುದು ಹಾಗೂ ಸ್ಪಂದನಾಶೀಲ ಆಡಳಿತದತ್ತ ಕಾರ್ಯನಿರ್ವಹಿಸಬೇಕು ಆದ್ದರಿಂದ ನಿಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇದ್ದು, ಮುಂದೆ ಗ್ರಾಮ ಪಂಚಾಯಿತಿಗಳಿಗೆ ಹೋಗಿ ಕೆಲಸ ಮಾಡಬೇಕಾಗುತ್ತದೆ ಎಂದರು.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಎಂ.ಕೆ. ಮಲ್ಲೇಶ್ ಮಾತನಾಡಿ ಧರ್ತಿ ಆಭಾ ಜನಜಾತೀಯ ಉತ್ಕರ್ಷ ಗ್ರಾಮ ಅಭಿಯಾನ ಕಾರ್ಯಕ್ರಮದಡಿ ವಿವಿಧ ಇಲಾಖೆಗಳ ಮೂಲಕ ಗ್ರಾಮಮಟ್ಟದ ತಳಹಂತಕ್ಕೆ ಸರ್ಕಾರದ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ವಿಕಸಿತ ಭಾರತ ನಿರ್ಮಾಣ ಮಾಡುವ ಗುರಿಯನ್ನು ಆದಿಕರ್ಮಯೋಗಿ ಹೊಂದಿದು, ಪರಸ್ಪರ ಹೊಂದಾಣಿಕೆಯಿಂದ ಸೌಹಾರ್ಧಯುತವಾಗಿ ಎಲ್ಲರೂ ಸಾರ್ವಜನಿಕರ ಕೆಲಸ ಮಾಡೋಣ. ಈ ಕಾರ್ಯಾಗಾರದಿಂದ ನಾವೆಲ್ಲರೂ ಒತ್ತಡಗಳಿಮದ ಮುಕ್ತರಾಗಿದ್ದೇವೆ ಈ ಕಾರ್ಯಾಗಾರ ಯಶಸ್ವಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ತಾಲ್ಲೂಕು ಕಲ್ಯಾಣಾಧಿಕಾರಿಗಳಾದ ಅರುಣ್‌ಪ್ರಭು, ಜಿ.ಆರ್. ಮಹೇಶ್, ಕೋಮಲ, ಪದ್ಮಾವತಿ ಚಿಲ್ಲಾಳ್, ಅಕ್ಕಮಹಾದೇವಿ, ಚಂದ್ರಶೇಖರ್, ರಘುನಾಥ್, ಅಭಿಷೇಕ್, ಮಹೇಂದ್ರ, ಸೋಮಯ್ಯ, ಲೆಕ್ಕಾಧಿಕಾರಿ ಬಿ.ಆರ್. ಭವ್ಯಾ ಹಾಜರಿದ್ದರು.

RELATED ARTICLES
- Advertisment -
Google search engine

Most Popular