Friday, July 11, 2025
Google search engine

Homeರಾಜ್ಯ20ಗಂಟೆ ತಡವಾಗಿ ಹೊರಟ ಏರ್ ಇಂಡಿಯಾ ವಿಮಾನ: ಮೂರ್ಛೆ ಹೋದ ಪ್ರಯಾಣಿಕರು

20ಗಂಟೆ ತಡವಾಗಿ ಹೊರಟ ಏರ್ ಇಂಡಿಯಾ ವಿಮಾನ: ಮೂರ್ಛೆ ಹೋದ ಪ್ರಯಾಣಿಕರು

ದೆಹಲಿ: ಸ್ಯಾನ್ ಫ್ರಾನ್ಸಿಸ್ಕೋಗೆ ಏರ್ ಇಂಡಿಯಾ ವಿಮಾನ ೨೦ ಗಂಟೆಗಳು ತಡವಾಗಿ ಹೊರಟ ಪರಿಣಾಮ ಪ್ರಯಾಣಿಕರು ಎಸಿ ಇಲ್ಲದೆ ವಿಮಾನದೊಳಗೆ ಕಾಯುತ್ತಿರುವಾಗ ಕೆಲವು ಮಂದಿ ಮೂರ್ಛೆ ತಪ್ಪಿ ಬಿದ್ದಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಎಸಿ ಇಲ್ಲದೆ ಪ್ರಯಾಣಿಕರು ಪರದಾಡುತ್ತಿರುವ ಫೋಟೊವನ್ನು ಪತ್ರಕರ್ತರೊಬ್ಬರು ಪೋಸ್ಟ್ ಮಾಡಿದ್ದಾರೆ. ಹವಾ ನಿಯಂತ್ರಣವಿಲ್ಲದೆ ಹಲವರು ಪರದಾಡಿದರು. ಈ ವೇಳೆ ಕೆಲವರು ಪ್ರಜ್ಞೆ ತಪ್ಪಿ ಬಿದ್ದಿದ್ದರು. ನಂತರ ಪ್ರಯಾಣಿಕರಿಗೆ ವಿಮಾನದಿಂದ ಅವರಿಗೆ ಕೆಳಗಿಳಿಯುವಂತೆ ಸೂಚಿಸಲಾಯಿತು ಎಂದು ಬರೆದುಕೊಂಡಿದ್ದಾರೆ.

ದೆಹಲಿಯಲ್ಲಿ ಉಷ್ಣಾಂಶ ದಾಖಲೆಯ ಮಟ್ಟಕ್ಕೆ ಏರಿದೆ. ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ ೫೨.೯ ಡಿಗ್ರಿ ಸೆಲ್ಶಿಯಸ್ ತಾಪಮಾನ ಕಂಡು ಬಂದಿತ್ತು. ಇದಲ್ಲದೆ ಬಿಹಾರದಲ್ಲಿ ಹೀಟ್ಸ್ಟ್ರೋಕ್ನಿಂದ ೧೯ ಮಂದಿ ಸಾವನ್ನಪ್ಪಿದ್ದಾರೆ.

RELATED ARTICLES
- Advertisment -
Google search engine

Most Popular