Saturday, June 14, 2025
Google search engine

HomeUncategorizedರಾಷ್ಟ್ರೀಯಏರ್ ಇಂಡಿಯಾ ವಿಮಾನ ಅಪಘಾತ: ಕನಸುಗಳೊಂದಿಗೆ ಹೊರಟ ಕುಟುಂಬದ ದಾರುಣ ಅಂತ್ಯ

ಏರ್ ಇಂಡಿಯಾ ವಿಮಾನ ಅಪಘಾತ: ಕನಸುಗಳೊಂದಿಗೆ ಹೊರಟ ಕುಟುಂಬದ ದಾರುಣ ಅಂತ್ಯ

ಗಾಂಧೀನಗರ: ಲಂಡನ್ನಲ್ಲಿ ಭವಿಷ್ಯದ ಕನಸು ಕಟ್ಟಿಕೊಂಡು ಹೊರಟಿದ್ದ ಪ್ರತೀಕ್ ಜೋಶಿ ಅವರ ಕುಟುಂಬ, ಅಹಮದಾಬಾದ್‌ನಲ್ಲಿ ಗುರುವಾರ ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ದಾರುಣ ಅಂತ್ಯ ಕಂಡಿದೆ. ವಿಮಾನ ಹಾರಾಟ ಆರಂಭಿಸುವ ಮುನ್ನ ತೆಗೆದ ಸೆಲ್ಫಿ ವೈರಲ್ ಆಗುತ್ತಿದ್ದು ಎಲ್ಲರಲ್ಲಿ ಕಣ್ಣೀರು ತರಿಸುತ್ತಿದೆ.

ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದ ಪ್ರತೀಕ್ ಕಳೆದ ಆರು ವರ್ಷಗಳಿಂದ ಲಂಡನ್ನಲ್ಲಿ ವಾಸವಾಗಿದ್ದು, ಪತ್ನಿ ಕೋಮಿ ವ್ಯಾಸ್ ಮತ್ತು ಮುದ್ದಾದ ಮೂರು ಮಕ್ಕಳನ್ನು ತನ್ನ ಜೊತೆಗೆ ತರಲು ಕಾಯುತ್ತಿದ್ದರು.

ಇದೀಗ ಎಲ್ಲರೂ ಲಂಡನ್ನಲ್ಲಿ ಹೊಸ ಜೀವನ ಶುರುಮಾಡಲು ಸಜ್ಜಾಗಿದ್ದರು. ಡಾ. ಕೋಮಿ ವ್ಯಾಸ್ ಕೆಲ ದಿನಗಳ ಹಿಂದಷ್ಟೇ ಉದ್ಯೋಗಕ್ಕೆ ರಾಜೀನಾಮೆ ನೀಡಿ ಹೊರಟಿದ್ದರು. ಬುಧವಾರ ಕುಟುಂಬದೊಡನೆ ಸೆಲ್ಫಿ ತೆಗೆದು ಸಂಬಂಧಿಕರಿಗೆ ಕಳಿಸಿದ್ದರು. ಆದರೆ ಗುರುವಾರ ವಿಮಾನ ಪತನಗೊಂಡು ಅವರ ಕನಸು ಚೂರಾಯಿತು.

241 ಮಂದಿ ಅಸುನೀಗಿದ ಭೀಕರ ದುರಂತದಲ್ಲಿ, ಈ ಐವರು ಕೂಡಾ ಸೇರಿದ್ದರು. ಹಾಸ್ಟೆಲ್‌ವೊಂದರ ಬಳಿ ವಿಮಾನ ಬಡಿದ ಪರಿಣಾಮ ಈ ಕುಟುಂಬ ದಾರುಣ ಅಂತ್ಯ ಕಂಡರು.

RELATED ARTICLES
- Advertisment -
Google search engine

Most Popular