Sunday, July 6, 2025
Google search engine

HomeUncategorizedರಾಷ್ಟ್ರೀಯಏರ್ ಇಂಡಿಯಾ ದುರಂತ: ಅಹಮದಾಬಾದ್‌ ಗೆ ಪ್ರಧಾನಿ ಮೋದಿ ಭೇಟಿ

ಏರ್ ಇಂಡಿಯಾ ದುರಂತ: ಅಹಮದಾಬಾದ್‌ ಗೆ ಪ್ರಧಾನಿ ಮೋದಿ ಭೇಟಿ

ಅಹಮದಾಬಾದ್:‌ ಅಹಮದಾಬಾದ್‌ನಲ್ಲಿರುವ ಏರ್ ಇಂಡಿಯಾ ವಿಮಾನ ಪತನವು ದೇಶದ ಇತಿಹಾಸದಲ್ಲೇ ಅತ್ಯಂತ ಭೀಕರ ದುರಂತಗಳಲ್ಲಿ ಒಂದಾಗಿ ಗುರುತಿಸಲಾಗಿದೆ. ಲಂಡನ್‌ಗೆ ಹೊರಟಿದ್ದ ಬೋಯಿಂಗ್ 787-8 ಡ್ರೀಮ್‌ಲೈನರ್‌ ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡು, ಮೆಡಿಕಲ್ ಕಾಲೇಜು ಕಂಪೌಂಡ್‌ಗೆ ಬಡಿದಿದೆ. ಈ ಭೀಕರ ಪತನದಲ್ಲಿ 265 ಮಂದಿ ದುರ್ಮರಣ ಹೊಂದಿದ್ದು, ಓರ್ವ ಮಾತ್ರ ಪವಾಡದ ರೀತಿಯಲ್ಲಿ ಬದುಕುಳಿದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಜೂನ್ 13ರಂದು ಬೆಳಗ್ಗೆ 9 ಗಂಟೆಗೆ ಅಹಮದಾಬಾದ್‌ಗೆ ಆಗಮಿಸಿ ಅಪಘಾತದ ಸ್ಥಳ ಪರಿಶೀಲಿಸಿದರು. ಅವರು ಗಾಯಾಳುಗಳನ್ನು ನೋಡಲು ಸಿವಿಲ್ ಆಸ್ಪತ್ರೆಗೂ ಭೇಟಿ ನೀಡಿದರು. ನಾಗರಿಕ ವಿಮಾನಯಾನ ಸಚಿವ ರಾಮ್ ಎಂ ನಾಯ್ಡು ಮತ್ತು ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.

ದುರಂತದ ನಂತರ ಪ್ರಧಾನಿ ಸೇರಿದಂತೆ ಗೃಹ ಸಚಿವ ಅಮಿತ್ ಶಾ, ಸಚಿವ ಕಿಂಜರಪ್ಪು, ಮತ್ತು ಹಲವು ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು. ದುರಂತದಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ ಬ್ರಿಟನ್‌, ಪೋರ್ಚುಗಲ್‌ ಮತ್ತು ಕೆನಡಾ ಪ್ರಜೆಗಳು ಸಹ ಅಸುನೀಗಿದ್ದಾರೆ. ಸರ್ಕಾರದ ಮಟ್ಟದಲ್ಲಿ ಸೂಕ್ತ ನೆರವಿನ ಕ್ರಮ ಕೈಗೊಳ್ಳಲಾಗಿದೆ.

RELATED ARTICLES
- Advertisment -
Google search engine

Most Popular