Sunday, April 19, 2026
Google search engine

Homeರಾಜ್ಯಸುದ್ದಿಜಾಲನಾಳೆ ಅಕ್ಷಯ ತೃತೀಯ: ಚಿನ್ನ-ಬೆಳ್ಳಿ ಖರೀದಿಗೆ ಮುಗಿಬಿದ್ದ ಗ್ರಾಹಕರು

ನಾಳೆ ಅಕ್ಷಯ ತೃತೀಯ: ಚಿನ್ನ-ಬೆಳ್ಳಿ ಖರೀದಿಗೆ ಮುಗಿಬಿದ್ದ ಗ್ರಾಹಕರು

ಬೆಂಗಳೂರು: ನಮ್ಮ ಸಂಸ್ಕೃತಿಯಲ್ಲಿ ಅಕ್ಷಯ ತೃತೀಯವನ್ನ ಅತ್ಯಂತ ಪವಿತ್ರವಾದ ದಿನ ಎಂದು ಪರಿಗಣಿಸಲಾಗುತ್ತದೆ. ಈ ದಿನ ಚಿನ್ನ-ಬೆಳ್ಳಿ ಖರೀದಿಸಿದರೆ ಭವಿಷ್ಯದಲ್ಲಿ ಸಮೃದ್ಧಿ ಮತ್ತು ಲಾಭ ದೊರೆಯುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿ ನಾಳೆ ಅಕ್ಷಯ ತೃತೀಯ ಇರುವ ಸಲುವಾಗಿ ಇಂದು ಮತ್ತು ನಾಳೆ ಚಿನ್ನ ಖರೀದಿಸಲು ಆಭರಣ ಪ್ರಿಯರು ಮುಗಿಬಿದ್ದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮಧ್ಯ ಪ್ರಾಚ್ಯ ಯುದ್ದ ಜೊತೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ನ ಹೇಳಿಕೆಗಳು ವಾಣಿಜ್ಯದ ಮೇಲೆ ಅತೀ ಹೆಚ್ಚು ಪ್ರಭಾವ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಮಾರುಕಟ್ಟೆಯಲ್ಲಿ ಸತತ ಏರಿಳಿತ ಕಂಡುಬರುತ್ತಿದೆ.

ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆಯನ್ನ ನೋಡುವುದಾದರೆ, ಬೆಂಗಳೂರಿನಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿಯ ದರಗಳು ಹೀಗಿವೆ
24 ಕ್ಯಾರೆಟ್‌ ಚಿನ್ನ: 1 ಗ್ರಾಮ್‌ಗೆ 15,578, 10 ಗ್ರಾಮ್‌ಗೆ ₹1,55,780.
22 ಕ್ಯಾರೆಟ್‌ ಚಿನ್ನ : 1 ಗ್ರಾಮ್‌ಗೆ 14,280 , 10 ಗ್ರಾಮ್‌ಗೆ 1,42,800.

ಇಂದಿನ ಬೆಳ್ಳಿ ದರ:

1 ಗ್ರಾಂ ಬೆಳ್ಳಿಯ ಬೆಲೆ ₹275 ಹಾಗೂ ಒಂದು ಕೆಜಿ ಬೆಳ್ಳಿಯ ಬೆಲೆ ₹2,75,000 ಆಗಿದೆ.

ಗ್ರಾಹಕರಿಗೆ ವಿಶೇಷ ಆಫರ್
ಅಕ್ಷಯ ತೃತೀಯದ ಪ್ರಯುಕ್ತ ಆಭರಣದ ಅಂಗಡಿಯಲ್ಲಿ ಮೇಕಿಂಗ್ ಚಾರ್ಜ್‌ಗಳಲ್ಲಿ ಗಮನಾರ್ಹ ವ್ಯತ್ಯಾಸವಿದ್ದು, ಗ್ರಾಹಕರನ್ನು ಸೆಳೆಯಲು ವಿಶೇಷ ಆಫರ್‌ಗಳನ್ನು ನೀಡಲಾಗುತ್ತಿದೆ. ಚಿನ್ನದ ಶುದ್ಧತೆ ಖಚಿತಪಡಿಸಿಕೊಳ್ಳಲು ಯಾವಾಗಲೂ ಬಿಐಎಸ್ ಹಾಲ್ ಮಾರ್ಕ್ ಗಮನಿಸುವುದು ಸೂಕ್ತ.

RELATED ARTICLES
- Advertisment -
Google search engine

Most Popular