Wednesday, August 13, 2025
Google search engine

Homeಅಪರಾಧಬೆಳಗಾವಿಯಲ್ಲಿ ಸಚಿವೆ ಹೆಬ್ಬಾಳ್ಕರ್ ಹೆಸರು ಬಳಸಿದ ವಂಚನೆ ಆರೋಪ: ಬೆಂಬಲಿಗನ ವಿರುದ್ಧ ಖಾಸಗಿ ದೂರು

ಬೆಳಗಾವಿಯಲ್ಲಿ ಸಚಿವೆ ಹೆಬ್ಬಾಳ್ಕರ್ ಹೆಸರು ಬಳಸಿದ ವಂಚನೆ ಆರೋಪ: ಬೆಂಬಲಿಗನ ವಿರುದ್ಧ ಖಾಸಗಿ ದೂರು

ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೆಸರಿನಲ್ಲಿ 16 ಜನರಿಗೆ ವಂಚನೆ ಮಾಡಲಾಗಿದೆ. ಬೆಂಬಲಿಗ ಮಂಜುನಾಥ್ ವಿರುದ್ಧ ವಂಚನೆ ಆರೋಪವನ್ನು ಸಾಮಾಜಿಕ ಹೋರಾಟಗಾರ ಜಯಂತ್ ತಿನೇಕರ್ ಮಾಡಿದ್ದಾರೆ. ಅಲ್ಲದೇ ಪೊಲೀಸರು ದೂರು ಸ್ವೀಕರಿಸದ ಹಿನ್ನಲೆಯಲ್ಲಿ ಗಂದಿಗವಾಡದ ಕಾವ್ಯಾ ಯಳ್ಳೂರರಿಂದ ಕೋರ್ಟ್ ನಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ.

ಇಂದು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ 16 ಜನರಿಗೆ ವಂಚನೆ ಮಾಡಲಾಗಿದೆ. 34 ಲಕ್ಷಕ್ಕೂ ಅಧಿಕ ಹಣ ಪಡೆದು ವಂಚನೆ ಮಾಡಿದ್ದಾರೆ. ಸಾಮಾಜಿಕ ಹೋರಾಟಗಾರ ಜಯಂತ್ ತಿನೇಕರ್ ಎಂಬುವರು ಆರೋಪಿಸಿದ್ದಾರೆ.

ರಾಜ್ಯಪಾಲರ ಆದೇಶ ಎಂದು ನಕಲಿ ಪತ್ರಗಳನ್ನು ನೀಡಿ ವಂಚನೆ ಮಾಡಿದ್ದಾರೆ. ಹೆಬ್ಬಾಳ್ಕರ್ ನಕಲಿ ಸಹಿ ಮಾಡಿದ ಆದೇಶ ಪ್ರತಿ ವಿತರಿಸಿದ್ದಾರೆ. ಬೆಳಗಾವಿ, ಬೈಲಹೊಂಗಲ, ಖಾನಾಪುರ ಸೇರಿ ಹಲವೆಡೆ ವಂಚನೆ ಮಾಡಿದ್ದಾರೆ ಎಂದಿದ್ದಾರೆ.

16 ಜನರಿಂದ 34 ಲಕ್ಷಕ್ಕೂ ಹೆಚ್ಚು ಹಣ ಪಡೆದು ವಂಚನೆ ಮಾಡಲಾಗಿದೆ. ಇದರಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಪಿಎ ಸಂಗನಗೌಡ ಹೆಸರು ಕೂಡ ತಳುಕು ಹಾಕಿಕೊಂಡಿದೆ. ನಾವು ಕೊಟ್ಟ ದೂರು ಪೊಲೀಸರು ಸ್ವೀಕರಿಸಿಕೊಳ್ಳುತ್ತಿಲ್ಲ ಎಂಬುದಾಗಿ ಆರೋಪಿಸಿ ಗಂದಿಗವಾಡದ ಕಾವ್ಯಾ ಯಳ್ಳೂರರಿಂದ ಕೋರ್ಟ್ ಗೆ ದೂರು ನೀಡಲಾಗಿದೆ ಎಂದು ಹೇಳಿದರು.

ವಂಚನೆ ಕುರಿತು ನಾವು ಕೋರ್ಟ್ ನಲ್ಲಿ ಕೇಸ್ ಹಾಕಿದ್ದೇವೆ. ಕಿತ್ತೂರು ಠಾಣಾ ವ್ಯಾಪ್ತಿಗೆ ಈ ಘಟನೆ ಬರದಿದ್ದರೂ ಕಿರುಕುಳ. ಕಿತ್ತೂರು ಪೊಲೀಸರಿಂದ ನಿರಂತರ ಕಿರಿಕಿರಿ ಎಂದು ಆರೋಪಿಸಲಾಗಿದೆ. ರಾಜ್ಯಪಾಲರು, ಸಿಎಂ, ಗೃಹ ಸಚಿವರಿಗೂ ದೂರು ನೀಡಿದ್ದೇವೆ ಎಂದು ಬೆಳಗಾವಿಯಲ್ಲಿ ಹೋರಾಟಗಾರ ಜಯಂತ್ ತಿನೇಕರ್ ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular