Wednesday, May 21, 2025
Google search engine

Homeಅಪರಾಧ4 ವರ್ಷದ ಮಗುವಿನ ಮೇಲೆ ಲೈಂಗಿಕ ಕಿರುಕುಳ ಆರೋಪ: ಮಾಲಿವುಡ್‌ ನಟನ ಮೇಲೆ ಪೋಕ್ಸೋ ಕೇಸ್...

4 ವರ್ಷದ ಮಗುವಿನ ಮೇಲೆ ಲೈಂಗಿಕ ಕಿರುಕುಳ ಆರೋಪ: ಮಾಲಿವುಡ್‌ ನಟನ ಮೇಲೆ ಪೋಕ್ಸೋ ಕೇಸ್ ದಾಖಲು

ಕೊಚ್ಚಿ: 4 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮಾಲಿವುಡ್‌ ನಟರೊಬ್ಬರ ಮೇಲೆ ಕೇಸ್‌ ದಾಖಲಾಗಿದೆ.

ಕೇರಳದ ಕೋಝಿಕ್ಕೋಡ್‌ನಲ್ಲಿ 4 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ನಟ ಕೂಟಿಕಲ್ ಜಯಚಂದ್ರನ್ ವಿರುದ್ಧ ಕೇಳಿಬಂದಿದ್ದು, ಇದೀಗ ಸ್ಥಳೀಯ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮಗುವಿನ ತಾಯಿ ನೀಡಿದ ದೂರಿನ ಆಧಾರದ ಮೇಲೆ ಕಸಬಾ ಪೊಲೀಸರು ಜಯಚಂದ್ರನನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ ಕಾಯ್ದೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ತಮ್ಮ ಕುಟುಂಬದೊಳಗಿರುವ ವಿವಾದದ ಲಾಭ ಪಡೆದು ನಟ ತನ್ನ ನಾಲ್ಕು ವರ್ಷದ ಮಗಳಿಗೆ ಕಿರುಕುಳ  ನೀಡಿದ್ದಾರೆ ಎಂದು ಮಗುವಿನ ತಾಯಿ ದೂರಿನಲ್ಲಿ ಹೇಳಿದ್ದಾರೆ.

ದೂರಿನನ್ವಯ ಕಸಬಾ ಪೊಲೀಸರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ನಿರ್ದೇಶನದಂತೆ ದೂರುದಾರರ ಮನೆಗೆ ಭೇಟಿ ನೀಡಿ ಮಗುವಿನ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಸದ್ಯ ಈ ಬಗ್ಗೆ ನಟ ಜಯಚಂದ್ರನ್‌ ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ. ಪೊಲೀಸರು ದೂರು ದಾಖಲಿಸಿದ್ದು, ಇನ್ನಷ್ಟೇ ಕ್ರಮಕೈಗೊಳ್ಳಬೇಕಿದೆ.

ಪೊಲೀಸರು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.

ಮಾಲಿವುಡ್‌ ನಟನಾಗಿ ಕಾಲಿಡುವ ಮುನ್ನ ಮಿಮಿಕ್ರಿ ಆರ್ಟಿಸ್ಟ್‌ ಆಗಿ ಗುರುತಿಸಿಕೊಂಡಿದ್ದರು. ಕಿರುತೆರೆಯಲ್ಲೂ ಕಾಣಿಸಿಕೊಂಡಿದ್ದ ಅವರು, ʼದೃಶ್ಯಂʼ ಸಿನಿಮಾ ಸೇರಿದಂತೆ  ʼನಜಾನ್‌ʼ,ಓರು ಸೆಕೆಂಡ್‌ ಕ್ಲಾಸ್ ಯಾತ್ರಾ, ʼಲಕ್ಷ್ಯಮ್ʼ, ʼನಾರದನ್ʼ, ʼಮೈಬಾಸ್‌ʼ, ʼಡಿಟೆಕ್ಟಿವ್ʼ ಸೇರಿದಂತೆ ಹಲವಾರು ಸಿನಿಮಾದಲ್ಲಿ ನಟಿಸಿದ್ದಾರೆ.

RELATED ARTICLES
- Advertisment -
Google search engine

Most Popular