ಎಡತೊರೆ ಮಹೇಶ್
ಎಚ್.ಡಿ.ಕೋಟೆ : ಅನ್ನದಾಸೋಹದ ಜೊತೆ, ಜ್ಞಾನದಾಸೋಹವನ್ನು ಮಾಡಬೇಕು ಆ ಮೂಲಕ ಸುಶಿಕ್ಷಿತ ಸಮಾಜ ನಿರ್ಮಾಣವಾಗಬೇಕು ಎಂದು ದಡದಹಳ್ಳಿ ಷಡಕ್ಷರಿ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಬಾಪೂಜಿ ವೃತ್ತದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಯುವಘಟಕ ವತಿಯಿಂದ ಸೋಮವಾರ ದಾಸೋಹದಿನದ ಅಂಗವಾಗಿ ಸಿದ್ದಗಂಗಾ ಮಠದ ಶಿವಕುಮಾರಸ್ವಾಮೀಜಿ ಮತ್ತು ಜ್ಞಾನ ಯೋಗಾಶ್ರಮ ಮಠದ ಸಿದ್ದೇಶ್ವರ ಸ್ವಾಮೀಜಿಯವರ ಪುಣ್ಯಸ್ಮರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಕೃತಿಯನ್ನು ನಾಶಮಾಡಿ ಮನುಷ್ಯ ಮನುಷ್ಯ ಮಾತ್ರ ಬದುಕು ಕಟ್ಟಿಕೊಳ್ಳುವುದು ಧರ್ಮವಲ್ಲ, ಪ್ರಕೃತಿಯೊಂದಿಗೆ ಸಹಬಾಳ್ವೆ ಮಾಡಬೇಕು, ಪ್ರಕೃತಿಯಿಲ್ಲದೆ ಏನೂ ಇಲ್ಲ ಎಂದರು.
ತನ್ನತಾನು ಅರಿಯಬೇಕು, ಇಷ್ಟಲಿಂಗ ಪೂಜೆ ಮೂಲಕ ಎಲ್ಲಾ ಶಕ್ತಿಗಳನ್ನು ಪಡೆದುಕೊಂಡು ಉತ್ತಮ ಸಂದೇಶವನ್ನು ಸಾರಿದವರು ಶಿವಕುಮಾರಸ್ವಾಮೀಜಿ, ಅರನ್ನು ನಾವೆಲ್ಲ ನಡೆದಾಡುವ ದೇವರು ಎಂದು ಕರೆಯುತ್ತಿದ್ದೆವು ಎಂದರು.
ನನ್ನ ಅವದಿ ಮುಗಿದಿದೆ ಆಸ್ಪತ್ರೆಗೆ ದಾಖಲಿಸಬಾರದು ಎಂದರೂ ಸಹ ಅವರನ್ನು ಭಕ್ತರು ಆಸ್ಪತ್ರೆಗೆ ದಾಖಲಿಸದರು, ಆಸ್ಪತ್ರೆಯಲ್ಲಿದ್ದರೂ ಇಷ್ಟಲಿಂಗ ಪೂಜೆಯನ್ನು ನಿಲ್ಲಿಸಲಿಲ್ಲ, ಸರ್ವವ್ಯಾಪಿಯಾದ ಇಷ್ಟಲಿಂಗವನ್ನು ಪೂಜಿಸಿದರೆ, ವಿಶ್ವಪೂಜೆ ಮಾಡಿದಂತೆ ಆಗತ್ತದೆ ಎಂದರು. ಈ ಪೂಜೆಯನ್ನು ಅನುಸರಿಸಿದವರು ವೀರಶೈವ ಲಿಂಗಾಯಿತರಾಗುತ್ತಾರೆ ಆ ಮೂಲಕ ದಯೆ ಇರುವ ಧರ್ಮ ಅನುಸರಿಸಿದಂತಾಗುತ್ತದೆ ಎಂದರು.
ಪಡವಲು ವಿರಕ್ತಮಠದ ಮಹದೇವಸ್ವಾಮೀಜಿ, ಹಂಚೀಪುರದ ಚನ್ನಬಸವ ಸ್ವಾಮೀಜಿ, ಮಾದಾಪುರ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಯುವಘಟಕ ಅಧ್ಯಕ್ಷ ನಂಜನಾಯ್ಕನಹಳ್ಳಿ ಎನ್.ಎಸ್.ಗುರುಸ್ವಾಮಿ, ಪ್ರಧಾನ ಕಾರ್ಯದರ್ಶಿ ನಂದೀಶ್ ಆನಗಟ್ಟಿ, ಖಜಾಂಚಿ ಶಿವಕುಮಾರ್, ದಡದಹಳ್ಳಿ ಶಿವರಾಜಪ್ಪ, ಬಿ.ವಿ.ಬಸವರಾಜು, ಮುರಳಿ, ಸತೀಶ್ ಬಹದ್ದೂರ್, ಗಿರೀಶ್, ನಿರಂಜನ್, ಪ್ರಸನ್ನ, ಪೃಥ್ವಿ ಬಸವರಾಜಪ್ಪ, ಮಾದೇವಸ್ವಾಮಿ, ಗಿರೀಶ್ ಮೂರ್ತಿ, ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಮಹಾದೇವ, ಸ್ವಾಮಿ, ಲೋಕೇಶ್, ಕುಮಾರಸ್ವಾಮಿ, ಲೋಕೇಶ್, ವಿನೋದ್, ಮಂಜು, ಚೇತನ್, ಗಿರೀಶ್, ಗಿರೀಶ, ರಾಜೇಂದ್ರ, ಚಂದ್ರು, ನಂದೀಶ್, ಸೋಮಶೇಖರ್ ಇದ್ದರು.