Tuesday, January 13, 2026
Google search engine

Homeಸ್ಥಳೀಯಅಂಬೇಡ್ಕರ್ ಭವನಗಳು ಜ್ಞಾನ ಕೇಂದ್ರಗಳಾಗಬೇಕು: ಶಾಸಕ ಡಿ.ರವಿಶಂಕರ್

ಅಂಬೇಡ್ಕರ್ ಭವನಗಳು ಜ್ಞಾನ ಕೇಂದ್ರಗಳಾಗಬೇಕು: ಶಾಸಕ ಡಿ.ರವಿಶಂಕರ್

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಹೆಸರಿನಲ್ಲಿ ನಿರ್ಮಾಣವಾದ ಸಮುದಾಯ ಭವನಗಳು ಜ್ಞಾನ ಸಂಪಾದನೆಯ ಕೇಂದ್ರಗಳಾಗಬೇಕು ಆಗ ಮಾತ್ರ ಸಮಾಜ ಪರಿವರ್ತನೆಯಾಗಿ ಸುಧಾರಣೆ ಆಗಲಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ತಾಲೂಕಿನ ಹೊಸ ಅಗ್ರಹಾರ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಹೋಬಳಿ ಮಟ್ಟದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು. ಬಾಬಾ ಸಾಹೇಬರು ನಮ್ಮೆಲ್ಲರಿಗೂ ಮನೆ ದೇವರಿದ್ದಂತೆ. ಅವರು ರಚಿಸಿಕೊಟ್ಟ ಸಂವಿಧಾನದಿಂದ ಇಂದು ನಾವೆಲ್ಲ ಇಂತಹ ಉನ್ನತ ಸ್ಥಾನಮಾನಗಳನ್ನು ಅಲಂಕರಿಸಿದ್ದೇವೆ ಎಂದರು.

ಸಂವಿಧಾನ ರಚನಾ ಸಮಿತಿಗೆ ನೇಮಕವಾದ ಹಲವರು ಬಿಟ್ಟು ಹೋದರು. ಆದರೂ ಕೂಡ ಛಲಬಿಡದೆ ವಿಶ್ವದ ಅನೇಕ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ. ಅನೇಕ ಧರ್ಮ, ಜಾತಿ, ಸಂಸ್ಕೃತಿ, ಇತಿಹಾಸವನ್ನು ಹೊಂದಿರುವ ನಮ್ಮ ಭಾರತ ದೇಶಕ್ಕೆ ಬಡವರು, ಶೋಷಿತರು, ಮಹಿಳೆಯರ ಪರವಾಗಿ ಸರ್ವರಿಗು ಸರ್ವಕಾಲಕ್ಕೂ ಸಲ್ಲುವ ಸಂವಿಧಾನವನ್ನು ರಚಿಸಿಕೊಟ್ಟ ಮಹಾತ್ಮ ಅಂಬೇಡ್ಕರ್ ಎಂದು ಗುಣಗಾನ ಮಾಡಿದರು.

ಬಾಬಾ ಸಾಹೇಬರ ಸಮಾನತೆಯ ತತ್ವದ ಸಂವಿಧಾನ ರಚನೆಯಿಂದ ಇಂದು ನಾವೆಲ್ಲ ನವ ಭಾರತವನ್ನು ಕಟ್ಟಲು ಸಾಧ್ಯವಾಗಿದೆ. ಇಲ್ಲವಾಗಿದ್ದರೆ ಹಿಂದೆ ಬ್ರಿಟಿಷರ ಕಾಲದಂತೆ ಗುಲಾಮಗಿರಿ ಪದ್ಧತಿ, ಜೀತ ಪದ್ಧತಿಯಿಂದ ಬದುಕಬೇಕಾಗಿತ್ತು. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಗುಣಮಟ್ಟದ ಉನ್ನತ ಶಿಕ್ಷಣವನ್ನು ಕೊಡಿಸುವ ಮೂಲಕ ಸಮಾಜದ ಪ್ರರಿವರ್ತನೆಯಾಗಬೇಕೆಂದು ಕಿವಿ ಮಾತು ಹೇಳಿದರು.

ನಾನು ಶಾಸಕನಾಗಿ ಇಲ್ಲಿ ನಿಂತು ಮಾತನಾಡಲು ಸಂವಿಧಾನವೇ ಕಾರಣವಾಗಿದ್ದು. ನನಗೆ ಮತ ನೀಡಿದ ಎಲ್ಲಾ ಜನತೆಯನ್ನು ಒಂದೇ ಎಂದು ಭಾವಿಸಿ ಅವರ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದು ನನ್ನ ಕರ್ತವ್ಯವಾಗಿದೆ. ಈಗ ಈ ಭವನಕ್ಕೆ 75 ಲಕ್ಷ ರೂಪಾಯಿಗಳು ಬಿಡುಗಡೆಯಾಗಿದೆ. ಇನ್ನೂ ಅಗತ್ಯವಿದ್ದಲ್ಲಿ ಹೆಚ್ಚಿನ ಅನುದಾನವನ್ನು ನೀಡಲಾಗುವುದು ಎಂದು ಹೇಳಿದರು.

ಈಗಾಗಲೇ ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್ ಸಮುದಾಯ ಭವನಕ್ಕೆ 1ಕೋಟಿ ರೂಪಾಯಿಗಳ ಅನುದಾನ ನೀಡಿದ್ದೇನೆ. ನಾಯಕ ಸಮುದಾಯದ ಎಲ್ಲಾ ಭವನಗಳಿಗೂ 3.70 ಕೋಟಿ ಅನುದಾನವನ್ನು ನೀಡಲಾಗಿದೆ. ಇಲ್ಲಿಯವರೆಗೆ ಕ್ಷೇತ್ರಕ್ಕೆ 600 ಕೋಟಿ ರೂಪಾಯಿಗಳಿಗು ಹೆಚ್ಚು ಅನುದಾನ ತಂದು ಕೆಲಸ ಮಾಡಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನ ತಂದು ಉಳಿದ ಕಾಮಗಾರಿಗಳನ್ನು ಹಂತ ಹಂತವಾಗಿ ಪೂರ್ಣಗೊಳಿಸುವುದಲ್ಲದೆ ಶೀಘ್ರವಾಗಿ ಪಟ್ಟಣದಲ್ಲಿ ಬಾಬಾ ಸಾಹೇಬರ ನೂತನ ಪುತ್ಥಳಿಗೆ ಭೂಮಿ ಪೂಜೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಅಲ್ಲದೆ ಕ್ಷೇತ್ರದ ಎಲ್ಲಾ ಸಮುದಾಯ ಭವನಗಳಲ್ಲಿ ಗ್ರಂಥಾಲಯಗಳನ್ನು ತೆರೆಯಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮವನ್ನು ಕುರಿತು ಬಂತೆಜಿ, ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ, ಮುಖಂಡ ವೆಂಕಟೇಶ್, ಸ್ವಾಮಿ ಮಾತನಾಡಿದರು. ಈ ಸಂದರ್ಭದಲ್ಲಿ ಮುಸ್ಲಿಂ ಧರ್ಮ ಗುರುಗಳಾದ ಸೂಪಿ ಮಹಮ್ಮದ್, ತಹಸಿಲ್ದಾರ್ ಜಿ.ಸುರೇಂದ್ರಮೂರ್ತಿ, TSW ಹೆಚ್.ಎಲ್.ಶಂಕರಮೂರ್ತಿ, ಜಿ.ಪಂ ಮಾಜಿ ಸದಸ್ಯ ವೆಂಕಟಸ್ವಾಮಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಸ್.ಮಹದೇವ, ಕಾಂಗ್ರೆಸ್ ವಕ್ತಾರ ಸೈಯದ್ ಜಾಬೀರ್, ಮುಖಂಡರಾದ ಗಂಧನಹಳ್ಳಿ ವೆಂಕಟೇಶ್, ಕಲ್ಲಹಳ್ಳಿ ಶ್ರೀನಿವಾಸ್, ಗಂದನಳ್ಳಿ ಹೇಮಂತ್, ನಿರ್ಮಿತಿ ಕೇಂದ್ರದ AEM ಚೇತನ್ ಕುಮಾರ್ ಸೇರಿದಂತೆ ಇನ್ನಿತರರು ಇದ್ದರು.

RELATED ARTICLES
- Advertisment -
Google search engine

Most Popular