ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಡಾ.ಬಿ.ಅರ್. ಅಂಬೇಡ್ಕರ್ ಅವರು ಬರೆದ ಸಂವಿಧಾನ ಮೂಲಕ ಎಲ್ಲಾ ವರ್ಗದವರಿಗೂ ರಾಜಕೀಯದ ಜತಗೆ ಉದ್ಯೋಗ ಸ್ಥಾನಮಾನ ಪಡೆಯಲು ಸಾಧ್ಯವಾಗಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯಲ್ಲಿ ಅಶೋಕಪುರಂನ ಶ್ರೀ ದೊಡ್ಡಮ್ಮ ತಾಯಿ ದೇವಸ್ಥಾನ 8ನೇ ಕ್ರಾಸ್ ಮತ್ತು ಶ್ರೀ ದಂಡಮ್ಮ ತಾಯಿ ದೇವಸ್ಥಾನ 13ನೇ ಕ್ರಾಸ್ ನ ಬೀದಿಯವರು 90 ಲಕ್ಷ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಡಾ.ಬಿ.ಅರ್.ಅಂಬೇಡ್ಕರ್ ಸಮುದಾಯ ಭವನವನ್ನು ಉದ್ಘಾಟಿಸಿ ನಂತರ ಅವರು ಮಾತನಾಡಿದರು.
ಸಮಾಜದಲ್ಲಿ ತುಳಿತಕ್ಕೆ ಒಳಗಾದವರು ಕಾಂತ್ರಿಕಾರಿ ಬದಲಾವಣೆ ಆಗಬೇಕಾದರೆ ಜತಗೆ ಸಂವಿಧಾನದ ಹಕ್ಕು ಪಡೆಯಬೇಕಾದರೆ ಎಲ್ಲರು ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು ಈ ಮೂಲಕ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಿದಂತೆ ಅಗುತ್ತದೆ ಎಂದರು.
ಸಮುದಾಯಗಳು ನಿರ್ಮಿಸಿ ಅವುಗಳು ಎಲ್ಲಾ ಸಮುದಾಯಗಳಿಗೆ ಬಳಕೆಯಾಗುವ ಕೆಲಸ ಅಗಬೇಕು ಎಂದ ಅವರು ಈ ಸಮುಧಾನ ಭವನದ ನಿರ್ಮಾಣಕ್ಕೆ ತಾವು 5 ಲಕ್ಷ ಅನುಧಾನ ನೀಡಿದ್ದು ಮುಂದಿನ ದಿನಗಳಲ್ಲಿ ಸಹಕಾರ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಭವನ ಅಧ್ಯಕ್ಷ ಅಶೋಕಪುರಂ ಗೋಪಾಲ್, ಕಾರ್ಯದರ್ಶಿ ನಾಗರಾಜು, ಎಂ.ಎಸ್.ರೇವಣ್ಣ, ಎಂ.ಎ್ ಮಧುಸೂದನ್, ಉದ್ಯಮಿ ಬಂಗಾರಪ್ಪ, ವಿಜಯನಗರ ರಾಜಣ್ಣ, , ಸದಸ್ಯರಾದ ವೆಂಕಟೇಶ್, ಚಿಕ್ಕಯಾಲಕ್ಕಯ್ಯ, ಡಿ.ಪೃಥ್ವಿರಾಜ್, ಪಿ.ಪ್ರಸಾದ್, ಮ.ಚಿಕ್ಕಣ್ಣ, ಸಿದ್ದಲಿಂಗಯ್ಯ, ವಿ.ವೆಂಕಟಪ್ಪ, ದೊ॥ ಯಾಲಕ್ಕಯ್ಯ, ವಿ.ಬಸವರಾಜು, ಹೇಮಂತ್ ಕುಮಾರ್ , ಎಸ್.ಸಿದ್ದಪ್ಪ, ಬೋರಸಿದ್ದಯ್ಯ, ಗಂಗಾಧರ, ಎಂ.ಮಹದೇವಸ್ವಾಮಿ, ಕುಪ್ಪೆ ಗ್ರಾ.ಪಂ.ಅಧ್ಯಕ್ಷೆ ಎಚ್.ಬಿ.ಶಾರದಮ್ಮ, ಮಾಜಿ ಅಧ್ಯಕ್ಷೆ ಗೌರಮ್ಮ, ಸದಸ್ಯ ಮಹೇಂದ್ರ, ಹಳಿಯೂರು ಗ್ರಾ.ಪಂ.ಉಪಾಧ್ಯಕ್ಷ ನೂತನ್ ಗೌಡ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ದಮ್ಮನಹಳ್ಳಿ ಉದಯಶಂಕರ್, ಮುಖಂಡರಾದ ಎಲ್‌ಐಸಿ ಜಗದೀಶ್, ಹಳಿಯೂರು ಬಡಾವಣೆ ಮಹಲಿಂಗಣ್ಣ, ಶ್ರೀರಾಮಪುರ ಆನಂದ್, ಡಿ.ಕೆ.ಕೊಪ್ಪಲು ರಾಜಯ್ಯ, ಹೇಮಂತ್ಓಂ, ಸಲೀಂಅಡ್ಡು ಸೇರಿದಂತೆ ಮತ್ತಿತರರು ಹಾಜರಿದ್ದರು.