Tuesday, May 20, 2025
Google search engine

Homeಅಪರಾಧನಿಂತ ಲಾರಿಗೆ ಅಂಬ್ಯುಲೆನ್ಸ್ ಢಿಕ್ಕಿ; ಮೂವರ ದುರ್ಮರಣ

ನಿಂತ ಲಾರಿಗೆ ಅಂಬ್ಯುಲೆನ್ಸ್ ಢಿಕ್ಕಿ; ಮೂವರ ದುರ್ಮರಣ

ಚಿತ್ರದುರ್ಗ: ನಗರದ ಹೊರವಲಯದ ಮಲ್ಲಾಪುರ ಬಳಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿಂತಿದ್ದ ಲಾರಿಗೆ ಅಂಬ್ಯುಲೆನ್ಸ್ ಢಿಕ್ಕಿಯಾಗಿ ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿರುವ ಘಟನೆ ಇಂದು ನಸುಕಿನಲ್ಲಿ ನಡೆದಿದೆ.

ಅಂಬುಲೆನ್ಸ್ ನಲ್ಲಿದ್ದ ತಮಿಳುನಾಡಿನ ತಿರುನಲ್ವೇಲಿಯ ಕನಕಮಣಿ(72), ಆಕಾಶ್ (17) ಮತ್ತು ಅಂಬುಲೆನ್ಸ್ ಚಾಲಕ ಮೃತಪಟ್ಟವರು.

ಗುಜರಾತಿನ ಅಹಮದಾಬಾದ್ ನಿಂದ ತಮಿಳುನಾಡಿಗೆ ಅಂಬ್ಯುಲೆನ್ಸ್ ನಲ್ಲಿ ಶವ ಸಾಗಿಸುತ್ತಿದ್ದ ವೇಳೆ, ಶವದ‌ ಜೊತೆಗಿದ್ದವರು ಶವವಾಗಿದ್ದಾರೆ.

ಅಂಬುಲೆನ್ಸ್ ನಲ್ಲಿದ್ದ ಇನ್ನಿಬ್ಬರಿಗೆ ಗಾಯಗಳಾಗಿದ್ದು, ಚಿಕಿತ್ಸೆಗೆ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾತ್ರಿಯಿಡೀ ಅಂಬ್ಯುಲೆನ್ಸ್ ಚಲಾಯಿಸಿದ್ದು, ಬೆಳಗಿನ ಜಾವದ ನಿದ್ದೆಯ ಮಂಪರಿನಲ್ಲಿ ಅಂಬ್ಯುಲೆನ್ಸ್ ಚಾಲಕ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆಸಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಮಾಹಿತಿ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular