Friday, August 22, 2025
Google search engine

Homeರಾಜ್ಯಸುದ್ದಿಜಾಲಅನನ್ಯಾ ಭಟ್ ನಾಪತ್ತೆ ಪ್ರಕರಣ: ದೂರು ವಾಪಸ್ಸು ಪಡೆಯಲು ಮುಂದಾದ ಸುಜಾತ ಭಟ್‌

ಅನನ್ಯಾ ಭಟ್ ನಾಪತ್ತೆ ಪ್ರಕರಣ: ದೂರು ವಾಪಸ್ಸು ಪಡೆಯಲು ಮುಂದಾದ ಸುಜಾತ ಭಟ್‌

ಬೆಂಗಳೂರು: ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆಯಾದ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್ ಸಿಕ್ಕಿದ್ದು, ಸದ್ಯ ಎಸ್‌ಐಟಿಗೆ ನೀಡಿರುವ ದೂರನ್ನು ಸುಜಾತ ಭಟ್‌ ವಾಪಸ್ಸು ಪಡೆಯುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ಈ ನಡುವೆ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯ ಭಟ್ 2003ರಲ್ಲಿ ಧರ್ಮಸ್ಥಳದಿಂದ ನಾಪತ್ತೆಯಾಗಿರುವ ಬಗ್ಗೆ ಯುವತಿಯ ತಾಯಿ ಸುಜಾತಾ ಭಟ್ ಜುಲೈ 15ರಂದು ಧರ್ಮಸ್ಥಳ ಠಾಣೆಯಲ್ಲಿ ನೀಡಿದ್ದ ದೂರು ಅರ್ಜಿಯನ್ನು ಡಿಜಿ ಹಾಗೂ ಐಜಿಪಿ ಆದೇಶದಂತೆ ಆ.19ರಂದು ಎಸ್‌ಐಟಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಆದರೆ ಸುಜಾತ ಭಟ್‌ ದೂರನ್ನು ವಾಪಸ್ಸು ಪಡೆದುಕೊಳ್ಳದ ಹಿನ್ನಲೆಯಲ್ಲಿ, ಸದ್ಯ ಸುಜಾತ ಭಟ್‌ಗೆ ಎಸ್‌ಐಟಿ ಅಧಿಕಾರಿಗಳು ಬುಲಾವ್‌ ನೀಡಿದ್ದು, ತಮ್ಮ ಮಗಳು ಅಂತ ಹೇಳುತ್ತಿರುವ ಅನನ್ಯ ಬಟ್‌ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಒದಗಿಸುವಂತೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ. 2003ರಲ್ಲಿ ಧರ್ಮಸ್ಥಳ ದೇವಸ್ಥಾನದ ವಠಾರದಿಂದ ಅನನ್ಯ ಭಟ್ ಕಾಣೆಯಾಗಿದ್ದ ಬಗ್ಗೆ ತಾಯಿ ಸುಜಾತ ಭಟ್ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸದ್ಯ ದೂರು ಅರ್ಜಿಯ ತನಿಖೆಯನ್ನು ಎಸ್‌ಐಟಿಗೆ ಹಸ್ತಾಂತರಿಸಿ ಆದೇಶಿಸಲಾಗಿದೆ.

RELATED ARTICLES
- Advertisment -
Google search engine

Most Popular