Tuesday, May 20, 2025
Google search engine

Homeರಾಜ್ಯಸುದ್ದಿಜಾಲಚಿರತೆ ಸೆರೆ ಹಿಡಿದ ಬೆನ್ನಲ್ಲೇ ಮತ್ತೊಂದು ಚಿರತೆ ಎಂಟ್ರಿ: ಜಾನುವಾರುಗಳ ಬಲಿ

ಚಿರತೆ ಸೆರೆ ಹಿಡಿದ ಬೆನ್ನಲ್ಲೇ ಮತ್ತೊಂದು ಚಿರತೆ ಎಂಟ್ರಿ: ಜಾನುವಾರುಗಳ ಬಲಿ

ಹನೂರು‌:  ಚಿರತೆ ಸೆರೆ ಹಿಡಿದ ಬೆನ್ನಲ್ಲೇ  ಮತ್ತೊಂದು ಚಿರತೆ ಜಾನುವಾರುಗಳನ್ನು ಬಲಿ ತೆಗೆದುಕೊಂಡ ಘಟನೆ  ಗುಂಡಾಲ್ ಜಲಾಶಯ ವ್ಯಾಪ್ತಿಯಲ್ಲಿ ನಡೆದಿದೆ.

ಮೊನ್ನೆ ತಾನೆ ಬಾಲಕಿಯನ್ನು ಬಲಿ ತೆಗೆದುಕೊಂಡಿದ್ದ ಚಿರತೆಯನ್ನು ಅರಣ್ಯ ಇಲಾಖೆಯವರು ಸೆರೆ ಹಿಡಿದಿದ್ದರು. ಆದರೆ ಗುಂಡಾಲ್ ಜಲಾಶಯ ವ್ಯಾಪ್ತಿಯಲ್ಲೇ ಇಂದು ಮತ್ತೊಂದು ಚಿರತೆ ಎಂಟ್ರಿಯಾಗಿ ಕೊಂಗರಹಳ್ಳಿ ಗ್ರಾಮದ ಭರತ್ ಕೆ.ಎಸ್. ಜಮೀನಿನಲ್ಲಿ ಎರಡು ಹಸುವನ್ನು ಕೊಂದು ಹಾಕಿದೆ.

ಈ ಚಿರತೆ ಉಪಟಳದಿಂದ ಬೇಸತ್ತಿರುವ  ಗ್ರಾಮಸ್ಥರು ತೀವ್ರ ಆತಂಕದಲ್ಲಿದ್ದಾರೆ.

ಅಲ್ಲದೆ ಬಲಿ ತೆಗೆದಕೂಂಡಿರುವ ಚಿರತೆಯನ್ನು ಸೆರೆ ಹಿಡಿದಾಯ್ತೂ ಅರಣ್ಯಾಧಿಕಾರಿಗಳು ಎಂದು ಈ ಭಾಗದದ ಜನತೆ ನಿಟ್ಟಿಸಿರು ಬಿಟ್ಟಿದ್ದರು ಆದರೆ  ಚಿರತೆ ಧಾಳಿ ಮಾಡಿ ಎರಡು ಹಸುಗಳನ್ನು ಬಲಿ ತೆಗೆದುಕೂಂಡ ಸುದ್ದಿ ತಿಳಿದ ಸಾರ್ವಜನಿಕರು

ಭೋನಿಗೆ ಬಿದ್ದ ಚಿರತೆ ಬಾಲಕಿಯನ್ನು ಬಲಿ ತೆಗೆದುಕೂಂಡ ಚಿರತೆಯಾ  ಅಥವಾ ಬೇರೇ ಚಿರತೆಯಾ  ಎಂಬ ಅನುಮಾನ‌ ಮಾತಿಗಳನ್ನು ಅಲ್ಲಲ್ಲಿ ಚರ್ಚಿಸುತ್ತಿದ್ದು ಅರಣ್ಯಾಧಿಕಾರಿಗಳು ಈ ಬಗ್ಗೆ ನಿಖರವಾಗಿ ಸ್ಪಷ್ಟ ಪಡಿಸುವ ಜೊತೆಗೆ ಕಾಡಂಚಿನ ಗ್ರಾಮದಲ್ಲಿರುವ ಜಮೀನಿಗಳಿಗೆ ಚಿರತೆ ಸೇರಿದಂತೆ ಇನ್ನಿತರ ಕಾಡು ಪ್ರಾಣಿಗಳು ನುಸಳದಂತೆ ಕ್ರಮ ವಹಿಸುವಂತೆ ಆಗ್ರಹಿಸಿದ್ದಾರೆ.

RELATED ARTICLES
- Advertisment -
Google search engine

Most Popular