ವರದಿ: ಎಡತೊರೆ ಮಹೇಶ್
ಹೆಚ್.ಡಿ.ಕೋಟೆ : ರೋಟರಿ ಕ್ಲಬ್ ಹೆಚ್.ಡಿ. ಕೋಟೆ ತಾಲೂಕಿನಲ್ಲಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಮುದಾಯಕ್ಕೆ ನಿರಂತರ ಸೇವೆಯನ್ನು ನೀಡುತ್ತಾ ಬರುತಿದ್ದು ಇಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯರಹಳ್ಳಿಕಾವಲ್ ಈ ಶಾಲೆಗೆ ಮಕ್ಕಳಿಗೆ ಅಗತ್ಯವಾಗಿ ಬೇಕಾಗಿರುವ ಬ್ಯಾಂಡ್ ಸೆಟ್ ನ್ನು ನೀಡಿದರು. ಈ ಶಾಲೆಗೆ ಬ್ಯಾಂಡ್ ಸೆಟ್ ಇಲ್ಲದೆ ಮಕ್ಕಳು ಮಾರ್ಚ್ ಪಾಸ್ಟ್ ಮಾಡಲು ತೊಂದರೆಯಾಗಿತ್ತು ಇದನ್ನು ಕೊಟ್ಟ ತಕ್ಷಣ ಮಕ್ಕಳು ಮತ್ತು ಶಿಕ್ಷಕರು ತುಂಬಾ ಸಂತೋಷ ಪಟ್ಟರು ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಬ್ಬಲಗುಪ್ಪೆ ಒಂದನೇ ತರಗತಿ ಮಕ್ಕಳಿಗೆ ಕುರ್ಚಿಗಳನ್ನು ನೀಡಿದರು.
ಈ ಸಂಧರ್ಭದಲ್ಲಿ ರೋಟರಿ ಅಧ್ಯಕ್ಷರಾದ ಎಸ್.ಎನ್. ನಿರಂಜನ್, ಕಾರ್ಯದರ್ಶಿ ಬಿ.ಎನ್. ಶಿವಣ್ಣ, ಸದಸ್ಯರಾದ ಸತೀಶ ಸುರಭಿ, ಡಾ. ಪಾಶ್ವನಾಥ್, ಪುರಸಭೆ ಸದಸ್ಯ ಪ್ರೇಮ್ ಸಾಗರ್, ಮುಖ್ಯ ಶಿಕ್ಷಕಿ ಮಂಜುಳ ಕೆ.ಪಿ. ಸಹ ಶಿಕ್ಷಕಿ ಜಗದಂಬಾ, ಅತಿಥಿ ಶಿಕ್ಷಕ ಗಣೇಶ್ ಹಾರ್ಟ್ ಸಂಸ್ಥೆ ಸಂಯೋಜಕ ಶಿವಲಿಂಗ, ಊರಿನ ಮುಖಂಡರು ಮಕ್ಕಳು ಇದ್ದರು.