Monday, August 11, 2025
Google search engine

Homeಸಿನಿಮಾಕಾಂತಾರ ಸಿನಿಮಾಗೆ ಹೆಸರು ತಂದ ಅಪ್ಪು ಕೋಣ ಇನ್ನಿಲ್ಲ

ಕಾಂತಾರ ಸಿನಿಮಾಗೆ ಹೆಸರು ತಂದ ಅಪ್ಪು ಕೋಣ ಇನ್ನಿಲ್ಲ

ಬೆಂಗಳೂರು : ಕಾಂತಾರ’ ಚಿತ್ರದಲ್ಲಿ ರಿಷಬ್ ಶೆಟ್ಟಿ ಹೀರೋ ಆಗಿ ಮಿಂಚಿದ್ದರು. ಈ ಚಿತ್ರದ ನಿರ್ದೇಶನ ಕೂಡ ಅವರದ್ದೇ. ಅವರು ಈ ಸಿನಿಮಾಗಾಗಿ ಕಷ್ಟಪಟ್ಟು ಕಂಬಳ ಓಡಿಸೋದನ್ನು ಕಲಿತಿದ್ದರು. ಇದಕ್ಕಾಗಿ ಬೈಂದೂರು ಬೊಳಂಬಳ್ಳಿಯ ಕಂಬಳ ಪ್ರೇಮಿ ಪರಮೇಶ್ವರ ಭಟ್ ಅವರು ಸಾಕಿದ್ದ ಕೋಣ ಬಳಕೆ ಆಗಿತ್ತು. ಈ ಕೋಣಗಳಿಗೆ ಅಪ್ಪು ಹಾಗೂ ಕಾಲಾ ಎಂದು ಹೆಸರು ಇಡಲಾಗಿತ್ತು. ಈ ಪೈಕಿ ಅಪ್ಪು ಕೋಣ ನಿಧನ ಹೊಂದಿದೆ.

2022 ರಲ್ಲಿ ತೆರೆಗೆ ಬಂದಿದ್ದ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರದಲ್ಲಿ ನಟಿಸಿದ್ದ ಕೋಣ ಸಾವನ್ನಪ್ಪಿದೆ. ಚಿತ್ರದ ಪ್ರಾರಂಭದಲ್ಲಿ ಕಂಬಳದ ದೃಶ್ಯದಲ್ಲಿ ಕಾಣಿಸಿಕೊಂಡಿದ್ದ ಅಪ್ಪು ಕೋಣ ಸಾವನ್ನಪ್ಪಿದೆ. ಈ ಕೋಣ ಎಲ್ಲರಿಗ ಬಹಳ ಅಚ್ಚುಮೆಚ್ಚಾಗಿತ್ತು.ಅಪ್ಪು ಕೋಣ ಬೈಂದೂರ ಬೊಳಂಬಳ್ಳಿಯ ಕಂಬಳ ಪ್ರೇಮಿ ಪರಮೇಶ್ವರ್ ಭಟ್ ಅವರು ಸಾಕಿದ್ದ ಕೋಣ ಆಗಿದೆ. ಅವರು ಅಪ್ಪು ಹಾಗೂ ಕಾಲಾ ಕೋಣಗಳನ್ನ ಸಾಕಿದ್ದರು.

ಇದೀಗ ಅಪ್ಪು ಕೋಣಾ ನಿಧನ ಹೊಂದಿದೆ. ಕಂಬಳ ಶೂಟಿಂಗ್ ನಲ್ಲಿ ಹಲವು ಪರಿಣಿತ ಕೋಣಗಳನ್ನು ಬಳಸಲಾಗಿತ್ತು. ಈ ಪೈಕಿ ರಿಷಬ್ ಶೆಟ್ಟಿ ಓಡಿಸಿದ್ದ ಕೋಣ ಮೃತಪಟ್ಟಿದೆ.ಚಿತ್ರೀಕರಣಕ್ಕೂ ಮೊದಲಿನಿಂದಲೇ ಅಪ್ಪು ಮತ್ತು ಕಾಲಾ ಕೋಣಗಳ ಮೂಲಕ ರಿಷಬ್ ತಬೇತಿ ಪಡೆದಿದ್ದರು. ಇವುಗಳ ಜೊತೆ ರಿಷಬ್​ಗೆ ಆಪ್ತತೆ ಬೆಳೆದಿತ್ತು. ಆ ಬಳಿಕ ಸಿನಿಮಾಗಳಲ್ಲೂ ಕೋಣಗಳು ಕಾಣಿಸಿಕೊಂಡಿದ್ದವು. ಈ ಪೈಕಿ ಒಂದು ಕೋಣ ನಿಧನ ಹೊಂದಿದ್ದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

RELATED ARTICLES
- Advertisment -
Google search engine

Most Popular