ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಯ ಅಕ್ರ:90/2016 ಕಲಂ 465,468,471,420,379 r/w 34 IPC ಪ್ರಕರಣದಲ್ಲಿ ಸುಮಾರು 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಅಸಾಮಿ ಕೇರಳದ ಎರ್ನಾಕುಲಂನ
ಪ್ರಿನ್ಸ್ ಟಿ ಜೆ ಜೋಶ್ (43) ಎಂಬಾತನನ್ನು ACJ &JMFC ನ್ಯಾಯಾಲಯ ಬಂಟ್ವಾಳ CC ನಂಬರ್ 1060/2019 ರಲ್ಲಿ ಕೇರಳ ರಾಜ್ಯದ ಕುಟ್ಟಂಪುಝ ಎಂಬಲ್ಲಿ ದಸ್ತಗಿರಿ ಮಾಡಿ ACJ &JMFC ನ್ಯಾಯಾಲಯ ಬಂಟ್ವಾಳ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದಾಗ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿ ಪತ್ತೆ ಕಾರ್ಯದಲ್ಲಿ ಬಂಟ್ವಾಳ
ASP ಯಶ್ ಕುಮಾರ್ ಶರ್ಮಾರ ನಿರ್ದೇಶನದಂತೆ ಪೊಲೀಸ್ ಉಪ ನಿರೀಕ್ಷಕರುಗಳಾದ ಮಂಜುನಾಥ ಟಿ ಮಾರ್ಗದರ್ಶನದಲ್ಲಿ ಪೊಲೀಸ್ ಉಪ ನಿರೀಕ್ಷಕ ಕೃಷ್ಣಕಾಂತ ಕೆ ಹಾಗೂ ಸಿಬ್ಬಂದಿಗಳಾದ ಹೆಚ್ ಸಿ 314 ಸಂತೋಷ್ ಪಿಸಿ 2462 ಶಿವಾನಂದ ಮಡ್ಡಿ ರವರು ಕಾರ್ಯನಿರ್ವಹಿಸಿದ್ದಾರೆ.



