Wednesday, May 21, 2025
Google search engine

Homeರಾಜ್ಯಕಲೆ ಮಾನವನ ಅಂತರ್ಜ್ಞಾನದ ಪ್ರತಿಬಿಂಬ: ಸುರೇಶ್ ಎನ್ ಋಗ್ವೇದಿ

ಕಲೆ ಮಾನವನ ಅಂತರ್ಜ್ಞಾನದ ಪ್ರತಿಬಿಂಬ: ಸುರೇಶ್ ಎನ್ ಋಗ್ವೇದಿ

ಚಾಮರಾಜನಗರ: ಕಲೆ ಮಾನವನ ಅಂತರ್ಜ್ಞಾನದ ಪ್ರತಿಬಿಂಬ. ಕಲೆಯ ಮೂಲಕ ತನ್ನ ಭಾವನೆಗಳನ್ನು ಮತ್ತು ಚಿಂತನೆಯ ಸ್ವರೂಪವನ್ನು ರೇಖೆ ಮತ್ತು ಬಣ್ಣಗಳಲ್ಲಿ ತುಂಬ ಮೂಲಕ ಸಮಾಜಕ್ಕೆ ಅರ್ಪಿಸುವ ಗುಣಾತ್ಮಕ ಶಕ್ತಿಯ ಕಲಾವಿದರನ್ನು ಗೌರವಿಸಬೇಕು. ಕಲೆ ಭಗವಂತ ನೀಡಿರುವ ಅಪರೂಪದ ಶಕ್ತಿಯಾಗಿದೆ. ಚಿತ್ರಕಲೆ, ರಂಗ ಕಲೆ , ಚಲನಚಿತ್ರ ,ನೃತ್ಯ, ರಂಗೋಲಿಯ ಚಿತ್ತಾರಗಳು ,ವಿವಿಧ ಸ್ವರೂಪದ ರೇಖಾ ಚಿತ್ರಗಳ ಮೂಲಕ ಸಾಮಾಜಿಕ ಹಾಗೂ ಪ್ರಕೃತಿಯ ಸಂಪೂರ್ಣವಾದ ಪರಿಚಯವನ್ನು ಅರಿಯಬಹುದೆಂದು ಸಂಸ್ಕೃತಿ ಚಿಂತಕ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ಜೈ ಹಿಂದ್ ಕಟ್ಟೆಯಲ್ಲಿ ಜೈ ಹಿಂದ್ ಪ್ರತಿಷ್ಠಾನ ಮತ್ತು ಋಗ್ವೇದಿ  ಯೂತ್ ಕ್ಲಬ್ ಹಮ್ಮಿಕೊಂಡಿದ್ದ ವಿಶ್ವಕಲಾ ದಿನಾಚರಣೆಯಲ್ಲಿ ಮಾತನಾಡುತ್ತಾ ಏಪ್ರಿಲ್ 15 ವಿಶ್ವಕಲಾ ದಿನವಾಗಿ ಆಚರಿಸಲಾಗುತ್ತಿದೆ .ವಿಶ್ವದ ಸುಪ್ರಸಿದ್ಧ ಚಿತ್ರಕಾರ ಲಿಯೋನಾರ್ಡೊ  ದಾವಿಂಚಿ ಜನ್ಮದಿನದಂದು ಆಚರಿಸಲಾಗುವುದು. ಚಿತ್ರ ಕಲಾವಿದರಿಗೆ ಗೌರವ ಹಾಗೂ ಅಭಿರುಚಿಯ ಸ್ಪೂರ್ತಿಯನ್ನು ತುಂಬುವ ಸಾಮಾಜಿಕ ಜವಾಬ್ದಾರಿಯ ದಿನವಾಗಿದೆ .ಕಲೆ ಮಾನವನ ಅಂತರಣದ ಚಿಂತನೆಯ ಅನಾವರಣವಾಗಿದೆ. ಶಬ್ದಗಳು ಹೇಳಲಾಗದು ಚಿತ್ರಗಳಿಂದ ತಿಳಿಯಬಹುದು ಚಿತ್ರಗಳು ಸಾಮಾಜಿಕ ,ಶೈಕ್ಷಣಿಕ, ರಾಜಕೀಯ, ಧಾರ್ಮಿಕ ,ಆಧ್ಯಾತ್ಮಿಕ ,ಪ್ರಕೃತಿ ,ಪ್ರಾಣಿ ಪಕ್ಷಿಗಳ ಸಂದೇಶಗಳನ್ನು ಪರಿಣಾಮಕಾರಿಯಾಗಿ ತಿಳಿಸುತ್ತದೆ, ವಿಶ್ವದಲ್ಲಿ ಲಕ್ಷಾಂತರ ಕಲಾವಿದರಿದ್ದು, ಕಲಾವಿದರನ್ನು ಗೌರವಿಸುವ ಹಾಗೂ ಅವರ ಹವ್ಯಾಸಗಳಿಗೆ ಸ್ಪೂರ್ತಿ, ಚೈತನ್ಯ, ಪ್ರೋತ್ಸಾಹ ತುಂಬುವ ಕಾರ್ಯವಾಗಬೇಕಿದೆ ಎಂದರು.

ಸಂಜೀವಿನಿ ಟ್ರಸ್ಟಿನ ಅಧ್ಯಕ್ಷರಾದ ಸತೀಶ್ ರವರು ಮಾತನಾಡಿ ಕಲೆ ಮಾನವನ ವಿಕಾಸದ ಕಾಲದಿಂದಲೂ ರಚನಾತ್ಮಕವಾಗಿ ಮೂಡಿಬಂದಿದೆ . ಕಲೆಯು ದಿವ್ಯ ಶಕ್ತಿಯಾಗಿದ್ದು ಪ್ರತಿಯೊಬ್ಬರಲ್ಲೂ ಬೇರೆ ಬೇರೆ ರೂಪದ ಪ್ರತಿಬಿಂಬವನ್ನು ಕಾಣಬಹುದು. ಋಗ್ವೇದಿ ಯೂಥ್ ಕ್ಲಬ್ ಕಲಾ ದಿನಾಚರಣೆಯ ಮೂಲಕ ಮಕ್ಕಳ ಕಲೆಯ ಅಭಿವೃದ್ಧಿಯನ್ನು ಪ್ರೋತ್ಸಾಹಿಸಿರುವುದು ಹೆಮ್ಮೆಯ ವಿಷಯವಾಗಿದೆ. ಮಕ್ಕಳು ಬರದಿರುವ ಅಪರೂಪದ ಚಿತ್ರಗಳ ಪ್ರದರ್ಶನ ಮಾಡಿರುವುದು ಕಲಾ ದಿನಾಚರಣೆಯ ಮಹತ್ವವನ್ನು ತಿಳಿಸುತ್ತದೆ ಎಂದರು.

ಜಾನ್ಸಿ ಮಕ್ಕಳ ಪರಿಷತ್ತಿನ ಶ್ರಾವ್ಯ ರಚಿಸಿರುವ ಅನೇಕ ರೂಪದ ಚಿತ್ರಪಟಗಳನ್ನು ಪ್ರದರ್ಶಿಸಲಾಯಿತು.

ಕಾರ್ಯಕ್ರಮದಲ್ಲಿ ಜೈ ಹಿಂದ್ ಪ್ರತಿಷ್ಠಾನದ ಕುಸುಮ, ಓಂ ಶಾಂತಿ ನ್ಯೂಸ್ ಬಿಕೆ  ಮಂಜುನಾಥ ಆರಾಧ್ಯ ,ಧನುಷ್,  ಇದ್ದರು.

RELATED ARTICLES
- Advertisment -
Google search engine

Most Popular