ಹೊಸಪೇಟೆ: ಹಂಪಿ ವೃತ್ತದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಸರ್ವೇ (ASI) 1 ಕೋಟಿ ರೂ. ಹಗರಣ ಮಾಡಿದ್ದಾರೆ ಎಂದು ಹಂಪಿಯಲ್ಲಿರುವ ಸಾಮಾಜಿಕ ಕಾರ್ಯಕರ್ತರೊಬ್ಬರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಆರೋಪಿಸಿದ್ದು, 2013 ಮತ್ತು 2023 ರ ನಡುವಿನ ಅವಧಿಯಲ್ಲಿ ASI ಅಧಿಕಾರಿಗಳು ಟೆಂಡರ್ ಕರೆಯದೆ ಸಂರಕ್ಷಿತ ಪ್ರದೇಶದಿಂದ ತೆಂಗಿನಕಾಯಿ ಮತ್ತು ಇತರ ಹಣ್ಣುಗಳನ್ನು ಮಾರಾಟ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಈ ಕುರಿತು ತೆಂಗು ಮತ್ತು ಇತರ ಹಣ್ಣುಗಳ ಮಾರಾಟಕ್ಕಾಗಿ ಟೆಂಡರ್ ಗಾಗಿ ಸ್ಥಳೀಯ ನಿವಾಸಿಯೊಬ್ಬರು ಇತ್ತೀಚೆಗೆ ಮಾಹಿತಿ ಕೋರಿದಾಗ ಹಗರಣ ಬೆಳಕಿಗೆ ಬಂದಿತು. ಈ ವಿಚಾರವಾಗಿ ASI ಪ್ರತಿಕ್ರಿಯಿಸಿ, 10 ವರ್ಷಗಳ ಅವಧಿಗೆ ಯಾವುದೇ ಡೇಟಾ ಲಭ್ಯವಿಲ್ಲ ಎಂದು ಹೇಳಿದ್ದಾರೆ. ASI ನಿಯಂತ್ರಣದಲ್ಲಿರುವ ಭೂಮಿಯಲ್ಲಿ ಸುಮಾರು 2,000 ತೆಂಗಿನ ಮರಗಳು ಮತ್ತು ಹೆಚ್ಚಿನ ಸಂಖ್ಯೆಯ ಇತರ ಹಣ್ಣುಗಳನ್ನು ಹೊಂದಿರುವ ಮರಗಳಿವೆ ಎಂದು ಸಾಮಾಜಿಕ ಕಾರ್ಯಕರ್ತರು ತಿಳಿಸಿದ್ದಾರೆ. ಆದಾಗೀಯೂ, ASI ದತ್ತಾಂಶವು ಕೇವಲ 894 ತೆಂಗಿನ ಮರಗಳು, 56 ಮಾವಿನ ಮರಗಳು, 43 ಸಪೋಟ ಮರಗಳು ಮತ್ತು 39 ಹುಣಸೆ ಮರಗಳಿವೆ ಎಂದು ತೋರಿಸುತ್ತದೆ ಎನ್ನಲಾಗಿದೆ.
ಅಲ್ಲದೆ ಕಳೆದ ವರ್ಷ ನಡೆದ ಟೆಂಡರ್‌ನಿಂದ ಸರ್ಕಾರಕ್ಕೆ 3.75 ಲಕ್ಷ ರೂ.ಗಳು ಬಂದಿವೆ ಎಂದು ದಾಖಲೆಗಳು ಬಹಿರಂಗಪಡಿಸುತ್ತಿದ್ದು, 2013 ಮತ್ತು 2023 ರ ನಡುವೆ ಅಂತಹ ಯಾವುದೇ ಪ್ರಕ್ರಿಯೆಯನ್ನು ಅನುಸರಿಸಲಾಗಿಲ್ಲ, ಇದರಿಂದಾಗಿ ಬೊಕ್ಕಸಕ್ಕೆ ಸುಮಾರು 1 ಕೋಟಿ ರೂ.ಗಳ ನಷ್ಟವಾಗಿದೆ ಎಂದು ಆರೋಪಿಸಿದ್ದಾರೆ.
ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ, ಎಎಸ್‌ಐ ಮಹಾನಿರ್ದೇಶಕರು ಮತ್ತು ಸಂಸ್ಕೃತಿ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಅವರ ಪತ್ರಕ್ಕೆ ಪ್ರತಿಕ್ರಿಯಿಸಿದ ಎಎಸ್‌ಐ ಹಂಪಿ ವೃತ್ತವು 2023 ರಲ್ಲಿ ಟೆಂಡರ್ ಕರೆಯಲಾಗಿತ್ತು ಆದರೆ ಯಾವುದೇ ಬಿಡ್ ದಾರರು ಈ ಪ್ರಕ್ರಿಯೆಯಲ್ಲಿ ಭಾಗವಹಿಸಲಿಲ್ಲ ಎಂದು ತಿಳಿಸಿದರು.
ಬಳಿಕ ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿ ಅರ್ಜಿಯ ಮೂಲಕ ಮಾಹಿತಿ ಕೇಳಿದ ಸಾಮಾಜಿಕ ಕಾರ್ಯಕರ್ತ ಡಿ.ಧನಂಜಯ ಮಾತನಾಡಿ ನಾನು ಅರ್ಜಿ ಸಲ್ಲಿಸಿದ ನಂತರ, 2013 ಮತ್ತು 2023 ರ ನಡುವೆ ಯಾವುದೇ ಹರಾಜು ನಡೆಸಲಾಗಿಲ್ಲ ಎಂದು ನನಗೆ ತಿಳಿಸಲಾಯಿತು. ಆ 10 ವರ್ಷಗಳಲ್ಲಿ, ಹಂಪಿ ವೃತ್ತದ ಎಎಸ್‌ಐ ಅಧಿಕಾರಿಗಳು ಅಕ್ರಮವಾಗಿ ಉತ್ಪನ್ನಗಳನ್ನು ಮಾರಾಟ ಮಾಡಿ ಸುಮಾರು 1 ಕೋಟಿ ರೂ.ಗಳ ಆದಾಯವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದಿದ್ದಾರೆ.
ನಾನು 2023 ರಲ್ಲಿ ನರೇಂದ್ರ ಮೋದಿ ಮತ್ತು ಇತರ ಹಿರಿಯ ಅಧಿಕಾರಿಗಳಿಗೆ ಪತ್ರ ಕಳುಹಿಸಿದ ನಂತರ, ಎಎಸ್ಐ ಅಧಿಕಾರಿಗಳು ಆ ವರ್ಷ ಟೆಂಡರ್ ಕರೆದಿದ್ದೇವೆ ಎಂದು ಹೇಳಿದರು ಆದರೆ ಯಾರೂ ಭಾಗವಹಿಸಲಿಲ್ಲ. 2013 ಮತ್ತು 2023 ರ ನಡುವೆ ಹಣ್ಣುಗಳ ಮಾರಾಟದಿಂದ ಬಂದ ಆದಾಯ ಏನಾಯಿತು ಎಂದು ಸಾರ್ವಜನಿಕರಿಗೆ ತಿಳಿದಿರಬೇಕು.
ಪ್ರಸ್ತುತ ಎಎಸ್ಐ ದತ್ತಾಂಶವು ಕೇವಲ 894 ತೆಂಗಿನ ಮರಗಳಿವೆ ಎಂದು ತೋರಿಸುತ್ತದೆ, ಆದರೆ ಕೆಲವು ವರ್ಷಗಳ ಹಿಂದೆ ಈ ಸಂಖ್ಯೆ ಸುಮಾರು 2,200 ಆಗಿತ್ತು. ಹಂಪಿಯಲ್ಲಿ ಎಎಸ್ಐ ಮಿತಿಯಲ್ಲಿ ಮತ್ತು ಸುತ್ತಮುತ್ತಲಿನ ರೈತರಿಂದ ಸರ್ಕಾರ 234 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಸರ್ಕಾರ ಹಗರಣದ ತನಿಖೆ ನಡೆಸಬೇಕು ಎಂದು ಧನಂಜಯ ಒತ್ತಾಯಿಸಿದ್ದಾರೆ.



