Thursday, September 18, 2025
Google search engine

Homeರಾಜ್ಯಸುದ್ದಿಜಾಲಸಾಲೇಕೊಪ್ಪಲು ಕಾಲೋನಿಗೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಭೇಟಿ, ಭರವಸೆ

ಸಾಲೇಕೊಪ್ಪಲು ಕಾಲೋನಿಗೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಭೇಟಿ, ಭರವಸೆ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ನಿವೇಶನ ಇದ್ದರು ಸೂರಿಗಾಗಿ ಪರಿತಪಿಸುತ್ತಿರುವ ಸಾಲಿಗ್ರಾಮ ತಾಲೂಕಿನ ಸಾಲೇಕೊಪ್ಪಲು ಗ್ರಾಮದ ಮಾದಿಗ ಸಮುದಾಯದ ಕಾಲೋನಿಗೆ ಕೆ.ಅರ್.ನಗರ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಎಲ್. ಶಂಕರ್ ಮೂರ್ತಿ ಭೇಟಿ ನೀಡಿ ಫಲಾನುಭವಿಗಳ ದುಮಾನ ಅಲಿಸಿದರು.


ಮನೆ ಮಂಜೂರು ಅಗದ ಬಗ್ಗೆ ಈ ಸಮುದಾಯವದರು ನೀಡಿರುವ ಮನವಿಯ ಹಿನ್ನಲೆಯಲ್ಲಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಸೂಚನೆಯ ಮೇರೆಗೆ ಇಲ್ಲಿಗೆ ಬೇಟಿ ನೀಡಿದ ಅವರು ಇಲ್ಲಿನ ವಾಸ್ತವತೆಯನ್ನು ವೀಕ್ಷಿಸಿ ಮಾದಿಗ ಸಮುದಾಯದವರಿಂದ ಮಾಹಿತಿ ಪಡೆದರು.

ಇವರಿಗೆ 14-09-2012 ರಲ್ಲಿ ಗ್ರಾಮದ ಸಮೀಪ ಇರುವ ಅದಿರು ಬೆಟ್ಟದ ಬಳಿ ಸರ್ವೆ ನಂ 454 ರಲ್ಲಿ 40*30 ನೀವೇಶವನ್ನ 80 ಮಂದಿ ಕುಟುಂಬಗಳಿಗೆ ಮಂಜೂರು ಮಾಡಲಾಗಿದ್ದು ಅಲ್ಲಿಂದ ಇಲ್ಲಿಯ ತನಕ ಇವರಿಗೆ ಮನೆಗಳು ಮಂಜೂರು ಅಗದ ಬಗ್ಗೆ ಸಮುದಾಯದವರು ಮಾಹಿತಿ ನೀಡಿದರು
ಹಳಿಯೂರು ಗ್ರಾ.ಪಂ.ಗೆ ಮನೆಗಳನ್ನು ಮಂಜೂರು ಮಾಡುವಂತೆ ನೀವು ಯಾಕೆ ಮನವಿಗಳನ್ನು ಕೊಟ್ಟಿಲ್ಲ ಎಂದು ಶಂಕರ್ ಮೂರ್ತಿ ಪ್ರಶ್ನಿಸಿದಾಗ ಪಂಚಾತಿಯಿಗೆ ಹತ್ತಾರು ಬಾರಿ ಮನವಿ ಕೊಟ್ಟಿವಿ ಅದರೆ ನಿವೇಶನ ಕೊಟ್ಟರಿಗೆ ಒಂದು ಮನೆಯು ಕೊಟ್ಟಿಲ್ಲ ನೀವೇಶನಗಳು ಗಿಡಗಂಟೆಗಳು ಬೆಳೆದು ಪಾಳು ಬಿದ್ದಿರುವರನ್ನು ಈ ಸಂದರ್ಭದಲ್ಲಿ ಫಲಾನುಭವಿಗಳು ಗಮನಕ್ಕೆ ತಂದರು.

ಸದ್ಯ ಇರುವ ಕಿರಿದಾದ ಮನೆಯಲ್ಲಿ‌ 5-6 ಮಂದಿ ವಾಸ ಮಾಡುತ್ತಿದ್ದೆವೆ ಇರೋ ಬರೋ ಮನೆಗಳು ಶಿಥಿಲ ಗೊಂಡಿದ್ದು ಮಳೆ ಬಂದರೆ ನಮ್ಮ ಪಾಡು ಯಾರಿಗೂ ಬೇಡ ನಮ್ಮ ನೋವ ಕೇಳುವರು ಯಾರು ಇಲ್ಲ ಸಾಹೇಬರೇ ಎಂದು ಮುಖಂಡ ಸುಬ್ರಹ್ಮಣ್ಯ ತಮ್ಮ ಅಳನ್ನ ತೋಡಿಕೊಂಡು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಸ್ಪಂದಿಸಿದ ಶಂಕರ್ ಮೂರ್ತಿ ಅವರು ಮನೆಗಳ ಇಲ್ಲದೇ ಅಗಿರುವ ಸಮಸ್ಯೆಯನ್ನು ಶಾಸಕ ಡಿ.ರವಿಶಂಕರ್ ಮತ್ತು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಗಮನಕ್ಕೆ ತರಲಾಗುವುದು ಅಲ್ಲದೇ ನೀವು ನಿವೇನ ಮಂಜೂರಾತಿ ಪತ್ರ ಜತಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿ ಕೊಟ್ಟರೆ ಅವರಗಳನ್ನು ನಮ್ಮ ಇಲಾಖೆಯಿಂದ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಕಳಿಸಿ ಕೊಡಲಾಗುವುದು ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಾದಿಗ ಸಮಾಜದ ಶಿವರಾಜ್, ಮನು, ಸುನೀಲ್, ಗೋವಿಂದ, ಮಂಜ, ಅಶೋಕ, ಕುಮಾರ, ಪ್ರಜು, ಪುನಿತ್, ದಾಸಣ್ಣ,ಹನುಮಂತ, ಬೈರಬುಡಿಯಾ, ಅಕಾಶ್,ಅಜಯ್,ರಾಜೇಶ್, ನವೀನ , ಸುನೀತಾ, ಅಮ್ಮಕ್ಕ, ರಾಜೇಶ್ವರಿ, ಪುಟ್ಟಮ್ಮ, ಶಕುಂತಳಾ, ತಾಯಮ್ಮ, ಕವೀತಾ, ಪುಟ್ಟಕ್ಕ , ಶಾಂತ, ದೇವಮ್ಮ ಸೇರಿದಂತೆ ಮತ್ತಿರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular