ದೆಹಲಿ: ೨೦೨೩ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕರ್ನಾಟಕದ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ೬,೦೧೮ ಮಂದಿಯ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲು ಪ್ರಯತ್ನ ನಡೆದಿತ್ತು ಎಂದು ಕಾಂಗ್ರೆಸ್ ವರಿಷ್ಠ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಗಂಭೀರ ಅರೋಪ ಮಾಡಿದ್ದಾರೆ.
ನವದೆಹಲಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಅವರು ಮತ ಕಳ್ಳತನ ಹೇಗೆ ನಡೆಯುತ್ತಿದೆ ಎಂದು ವಿವರಿಸಿದರು.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಆಳಂದ ಕ್ಷೇತ್ರದಲ್ಲಿ ೬,೦೧೮ ಮಂದಿಯ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕುವ ಪ್ರಯತ್ನ ನಡೆದಿದೆ. ಇದಕ್ಕಾಗಿ ಬೇರೆ ರಾಜ್ಯಗಳ ಮೊಬೈಲ್ ನಂಬರ್ ಬಳಕೆ ಮಾಡಲಾಗಿದೆ. ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಮತಗಳನ್ನೇ ಗುರಿಯಾಗಿಸಿಕೊಳ್ಳಲಾಗಿದೆ. ವೋಟ್ ಗೋದಾಬಾಯಿ ಎಂಬುವವರ ಮತ ಡಿಲೀಟ್ ಮಾಡಲಾಗಿದೆ. ಆದರೆ ಅವರು ನನ್ನ ಮತವನ್ನು ಪಟ್ಟಿಯಿಂದ ತೆಗೆದು ಹಾಕಲು ಅರ್ಜಿಯನ್ನೇ ಹಾಕಿಲ್ಲ ಎಂದಿದ್ದಾರೆ ಎಂದರು.
ಬಲ್ಲ ಮೂಲಗಳ ಪ್ರಕಾರ ೬,೦೧೮ ಮಂದಿಯ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕುವ ಪ್ರಯತ್ನ ನಡೆದಿದೆ. ಆದರೆ ಪಟ್ಟಿಯಿಂದ ತೆಗೆದು ಹಾಕಲಾದ ನೈಜ ಮತದಾರರ ಸಂಖ್ಯೆ ತಿಳಿದು ಬಂದಿಲ್ಲ. ಬಹುಶಃ ಆ ಸಂಖ್ಯೆ ಇನ್ನೂ ಹೆಚ್ಚಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಗೆ ಮತ ಬೀಳುವ ಬೂತ್ ಗಳನೇ ಗುರಿಯಾಗಿಸಿಕೊಳ್ಳಲಾಗಿದೆ. ಸೂರ್ಯಕಾಂತ್ ಎಂಬಾತ ವೋಟ್ ಡಿಲೀಟ್ ಮಾಡಿಸಿದ್ದಾನೆ. ೧೪ ನಿಮಿಷಗಳಲ್ಲಿ ೧೨ ಮತದಾರರ ಹೆಸರುಗಳನ್ನು ತೆಗಸಿ ಹಾಕಿದ್ದಾನೆ. ಮತಗಳ್ಳತನಕ್ಕೆ ಕೆಲವರು ಕ್ರಿಮಿನಲ್ ಆಪರೇಷನ್ ನಡೆಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬೂತ್ ನಂ.೩೭ರಲ್ಲಿ ಗೋದಾಬಾಯಿ ಹೆಸರು ಅಳಿಸಿ ಹಾಕಲಾಗಿದೆ. ಆದರೆ ಗೋದಾಬಾಯಿ ಹೆಸರಲ್ಲಿ ೧೨ ನಕಲಿ ಮತದಾರರು ಮತ ಚಲಾಯಿಸಿದ್ದಾರೆ. ಇಂತಹ ಹಲವು ಪ್ರಕರಣಗಳು ದೇಶಾದ್ಯಂತ ನಡೆದಿವೆ. ಹೀಗೆ ಅಕ್ರಮ ಎಸಗುವವರನ್ನು ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಕ್ಷಣೆ ಮಾಡುತ್ತಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಸಂಪೂರ್ಣ ಮಾಹಿತಿ ಇದೆ. ಆದರೂ ಆಯುಕ್ತರು ಪ್ರಜಾಪ್ರಭುತ್ವದ ಹಂತಕರ ರಕ್ಷಣೆಯಲ್ಲಿ ನಿರತರಾಗಿದ್ದಾರೆ ಎಂದು ಟೀಕಿಸಿದರು.
ಮತ್ತೊಂದು ಪ್ರಕರಣದಲ್ಲಿ ತಮ್ಮ ಚಿಕ್ಕಪ್ಪನ ಹೆಸರನ್ನು ಮತದಾರರ ಪಟ್ಟಿಯಿಂದ ತೆಗದು ಹಾಕಿರುವುದನ್ನು ಬೂತ್ ಮಟ್ಟದ ಅಧಿಕಾರಿಯೊಬ್ಬರು ಪತ್ತೆ ಹಚ್ಚಿದ್ದಾರೆ. ಹೆಸರನ್ನು ತೆಗೆದು ಹಾಕಿದ್ದು ಯಾರು ಎಂದು ಪರಿಶೀಲಿಸಿದಾಗ, ನೆರೆಮನೆಯವರೆಂದು ಗೊತ್ತಾಗಿದೆ. ಆದರೆ ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲ್ಪಟ್ಟವರಿರೂ, ತೆಗೆದು ಹಾಕಿದವರಿಗೂ ಈ ವಿಷಯ ತಿಳಿದೇ ಇಲ್ಲ. ಯಾವುದೋ ಅದೃಶ್ಯ ಶಕ್ತಿ ಇಡೀ ಈ ಕೆಲಸ ಮಾಡಿದೆ ಎಂದೂ ಹೇಳಿದ್ದಾರೆ.
ಕೇಂದ್ರ ಚುನಾವಣಾ ಆಯೋಗಕ್ಕೆ ಕರ್ನಾಟಕದ ಸಿಐಡಿ ೧೮ ನೋಟಿಸ್ ಕಳುಹಿಸಿದೆ. ಆದರೆ ಆಯೋಗ ಇದುವರೆಗೂ ಉತ್ತರ ನೀಡಿಲ್ಲ ಎಂದರು.
ಚುನಾವಣಾ ಆಯೋಗ ಸಿಐಡಿಗೆ ಮಾಹಿತಿ ನೀಡುತ್ತಿಲ್ಲ. ಇಂತಾ ಹಲವು ಪ್ರಕರಣಗಳು ದೇಶದ ಹಲವೆಡೆ ಇವೆ. ಮಹಾರಾಷ್ಟ್ರದಲ್ಲೂ ಮತಗಳನ್ನು ಡಿಲೀಟ್ ಮಾಡಲಾಗಿದೆ. ಹೀಗೆ ಮಾಡುವವರನ್ನು ಗ್ಯಾನೇಶ್ ಕುಮಾರ್ ರಕ್ಷಣೆ ಮಾಡ್ತಿದ್ದಾರೆ. ಇವೆಲ್ಲವನ್ನೂ ಒಂದೇ ಕಡೆಯಿಂದ ನಡೆಸಲಾಗಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಸಂಪೂರ್ಣ ಮಾಹಿತಿ ಇದೆ. ಅವರು ಪ್ರಜಾಪ್ರಭುತ್ವದ ಹಂತಕರ ರಕ್ಷಣೆಯಲ್ಲಿ ನಿರತರಾಗಿದ್ದಾರೆ.