Thursday, September 4, 2025
Google search engine

Homeರಾಜ್ಯಸುದ್ದಿಜಾಲಗುರುತರ ಸೇವೆಗೆ ಪ್ರಶಸ್ತಿ – ಶಿಕ್ಷಕರ ಜವಾಬ್ದಾರಿ ಇನ್ನಷ್ಟು ಹೆಚ್ಚುತ್ತದೆ: ಟಿ.ಪಿ. ನಂದೀಶ್ ಅಭಿಪ್ರಾಯ

ಗುರುತರ ಸೇವೆಗೆ ಪ್ರಶಸ್ತಿ – ಶಿಕ್ಷಕರ ಜವಾಬ್ದಾರಿ ಇನ್ನಷ್ಟು ಹೆಚ್ಚುತ್ತದೆ: ಟಿ.ಪಿ. ನಂದೀಶ್ ಅಭಿಪ್ರಾಯ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್ ನಗರ : ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಗುರುತರ ಮತ್ತು ಪ್ರಾಮಾಣಿಕ ಸೇವೆಯಿಂದ ಬರುವ ಪ್ರಶಸ್ತಿ ಸ್ವೀಕರಿಸಿದರೆ ನಮ್ಮಗಳ ಮೇಲೆ ಈ ಕ್ಷೇತ್ರದಲ್ಲಿ ಜವಾಬ್ದಾರಿ ಹೆಚ್ಚಾಗಲಿದೆ ಎಂದು ಮೈಸೂರು ಜಿಲ್ಲಾ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಟಿ ಪಿ ನಂದೀಶ್ ಹೇಳಿದರು.

ಕೆ.ಅರ್.ನಗರ ಪಟ್ಟಣದ ಕುವೆಂಪು ಬಡಾವಣೆಯಲ್ಲಿ ನಿವಾಸಿ ಎಂ.ಸಿ ಕಾವೇರಿಈ ಬಾರಿಯ ರಾಜ್ಯಮಟ್ಟದ ಅನುದಾನಿತ ಶಾಲಾ ಶಿಕ್ಷಕ 2025 ಪ್ರಶಸ್ತಿ ಭಾಜನಾಗಿರುವ ಹಿನ್ನಲೆಯಲ್ಲಿ ಅವರ ನಿವಾಸದಲ್ಲಿ ಅವರನ್ನು ಅಭಿನಂದಿಸಿ ಮಾತನಾಡಿದವರು ದೇಶಕ್ಕೆ ಉತ್ತಮ ಪ್ರಜೆಯನ್ನು ಕೊಡುವ ಜವಾಬ್ದಾರಿ ಶಿಕ್ಷಕ ಸೇವೆಯಲ್ಲಿದ್ದು ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾದದ್ದು, ಅದನ್ನು ನಿರ್ವಹಣೆ ಮಾಡುವ ಜವಾಬ್ದಾರಿಯುತ ವಾಗಿದ್ದು ವಿದ್ಯಾರ್ಥಿಗಳನ್ನು ಅಕ್ಕರೆಯಿಂದ ಒಪ್ಪಿ ಅಪ್ಪಿಕೊಂಡು ಮುನ್ನಡೆದಾಗ ಸುಶ್ಷಿಕ್ಷಿತ ಸಮಾಜ ನಿರ್ಮಾಣವಾಗಿದೆ, ಅದರ ನಿಟ್ಟಿನಲ್ಲಿ ನಮ್ಮ ಕೆ ಆರ್ ನಗರ ತಾಲೂಕಿನ ಹೆಬ್ಬಾಳು ಗ್ರಾಮದ ಕಾವೇರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಕಾವೇರಿ ಎಂ ಸಿ 2025 ನೇ ಸಾಲಿನ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕಿಯ ಪ್ರಶಸ್ತಿ ಆಯ್ಕೆಯಾಗಿರುವುದು ಅವರು ಶಿಕ್ಷಣ ಇಲಾಖೆಯಲ್ಲಿ ಅವರ ಸೇವೆಗೆ ತಂದ ಗೌರವ ಇಂದಿನ ದಿನಗಳಲ್ಲಿ ಇಂತಹ ಶಿಕ್ಷಕರ ಅವಶ್ಯಕತೆ ಇಂದಿನ ಮಕ್ಕಳಿಗೆ ಬೇಕಾಗಿದೆ ಅವರು ಶಾಲೆಯಲ್ಲಿ ಮಕ್ಕಳೊಡನೆ ಮಕ್ಕಳಾಗಿ ಅವರ ಭೊಧನೆಗೆ, ಕ್ರೀಡೆಗೆ ಮತ್ತು ವಿದ್ಯಾಭ್ಯಾಸದಲ್ಲಿ ಹೆಚ್ಚು ತೊಡಿಸಿಕೊಂಡು ಮಕ್ಕಳ ಎಲ್ಲಾ ರೀತಿಯ ಕಷ್ಟ ಸುಖಗಳಲ್ಲಿ ಪಾಲ್ಗೊಂಡು ಇಂದಿಗೂ ಹಲವಾರು ಬಡ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸಹಕಾರದಿಂದ ಬರುತ್ತಿರುವುದು ಶ್ಲಾಘನೀಯ ಇಂತಹ ಶಿಕ್ಷಣ ಸೇವೆಯಲ್ಲಿ ತೊಡಗಿರುವ ಕಾವೇರಿ ಎಂ ಸಿ ಇವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಬಂದಿರುವುದು ನಮ್ಮ ಎಲ್ಲಾ ಅನುದಾನಿತ ಶಿಕ್ಷಕರ ಪರವಾಗಿ ಅಭಿನಂದಿಸುತ್ತೇವೆ.

ಸೆಪ್ಟೆಂಬರ್ 14 ರಂದು ಹಾವೇರಿ ಜಿಲ್ಲೆಯ ರಾಣಿ ಬೆನ್ನೂರಿನಲ್ಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಮಾನ್ಯ ಶಿಕ್ಷಣ ಸಚಿವರು ಹಾಗೂ ವಿಧಾನಪರಿಷತ್ ಸಭಾಪತಿಗಳ ಸಮಕ್ಷಮದಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿರುವುದು ನಮ್ಮ ಭತ್ತದ ನಾಡಿನ ಜನತೆಗೆ ಸಂತೋಷವಾಗಿದೆ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ವಕ್ತಾರ ಕೆ ಎಲ್. ರಮೇಶ್, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಲಕ್ಕಿಕುಪ್ಪೆ ಶಂಕರೇಗೌಡ, ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಸಂಗರಶೆಟ್ಟಹಳ್ಳಿ ಸುರೇಶ್
ಜಿಲ್ಲಾ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಸುರೇಶ್, ವಕೀಲ ತಿಮ್ಮಪ್ಪ, ಶಿಕ್ಷಕ ಗಂಗಾಧರ್ ನಿವೃತ್ತ ಶಿಕ್ಷಕ ದೇವೇಂದ್ರ, ಅನುದಾನಿತ ಶಿಕ್ಷಕರುಗಳಾದ ಲೋಕೇಶ್, ಯೋಗೇಶ್, ಎಚ್ ಎನ್ ದಿವಾಕರ್, ಚೆಲುವರಾಜು, ಮೋಹನ್, ನಂಜುಂಡ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular