Saturday, September 6, 2025
Google search engine

Homeರಾಜ್ಯಸುದ್ದಿಜಾಲಪ್ರಶಸ್ತಿಗಳು ಗೌರವವಷ್ಟೇ ಅಲ್ಲ, ಜವಾಬ್ದಾರಿಯನ್ನೂ ಹೆಚ್ಚಿಸುತ್ತವೆ: ಟಿ. ಪುರುಷೋತ್ತಮ

ಪ್ರಶಸ್ತಿಗಳು ಗೌರವವಷ್ಟೇ ಅಲ್ಲ, ಜವಾಬ್ದಾರಿಯನ್ನೂ ಹೆಚ್ಚಿಸುತ್ತವೆ: ಟಿ. ಪುರುಷೋತ್ತಮ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಪ್ರಶಸ್ತಿಗಳು ವ್ಯಕ್ತಿಯ ಮೌಲ್ಯ ಹೆಚ್ಚಿಸುವುದರ ಜತೆಗೆ ಜವವ್ದಾರಿಯನ್ನು ಇಮ್ಮಡಿಗೊಳಿಸುತ್ತವೆ ಎಂದು ಪಟ್ಟಣದ ಸಾಮರಸ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರು ಆದ ಮೈಸೂರಿನ ಪರಸ್ಪರ ಸ್ನೇಹ ಬಳಗದ ಸಂಸ್ಥಾಪಕ ಅಧ್ಯಕ್ಷ ಟಿ.ಪುರುಷೋತ್ತಮ ಹೇಳಿದರು.

ಜಿಲ್ಲಾ ಅತ್ತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಮೈಸೂರು ತಾಲೂಕಿನ ಕೂಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಂ.ಶಿವಪ್ಪ ಮತ್ತು ಹುಣಸೂರು ತಾಲೂಕಿನ ಗೆರಸನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಟಿ.ಬಲರಾಮ ಅವರಿಗೆ ಪರಸ್ಪರ ಬಳಗದ ವತಿಯಿಂದ ಅಭಿನಂದಿಸಿ ಮಾತನಾಡಿದರು‌.

ಸಮಾಜದಲ್ಲಿ ಶಿಕ್ಷಕರಿಗೆ ಅಪಾರವಾದ ಗೌರವವಿದ್ದು ಅದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾವೂ ಕೆಲಸ ಮಾಡಬೇಕಿದ್ದು ಇದನ್ನು ಅರಿಯುವುದರ ಜತೆಗೆ ಮಕ್ಕಳ ಮನಸ್ಸನ್ನು ಅರಿತು ಬೋಧನೆ ಮಾಡಬೇಕೆಂದು ಸಲಹೆ ನೀಡಿದರು. ಪ್ರತಿಭಾವಂತ ಮತ್ತು ಮೇಧಾವಿ ಶಿಕ್ಷಕರನ್ನು ಗುರುತಿಸಿ ಗೌರವಿಸು ವುದು ಉತ್ತಮವಾದ ಕೆಲಸವಾಗಿದ್ದು ಇಂತಹ ಕೆಲಸಗಳು ಇತರರಿಗೆ ಸ್ಪೂರ್ತಿದಾಯಕವಾಗುತ್ತವೆ ಎಂದು ಅರ್ಜಿ ಸಲ್ಲಿಸಿ ಪ್ರಶಸ್ತಿ ಪಡೆಯುವ ಸಂಪ್ರದಾಯಕ್ಕೆ ತಿಲಾಂಜಲಿ ಹಾಡಿ ಗುರುತಿಸಿ ನೀಡುವ ಕಾರ್ಯಕ್ಕೆ ಶಿಕ್ಷಣ ಇಲಾಖೆ ಮುಂದಾಗಬೇಕೆಂದರು.

ನಿವೃತ್ತ ಶಿಕ್ಷಕರು ಮತ್ರು ಪ್ರಶಸ್ತಿ ಪುತಸ್ಕೃತರು ತಮ್ಮ ಅನುಭವ ಹಾಗೂ ಪ್ರತಿಭೆಯನ್ನು ಬೇರೆ ಶಿಕ್ಷಕರಿಗೆ ಧಾರೆ ಎರೆಯುವ ಮೂಲಕ ಸುಶಿಕ್ಷಿತ ಮತ್ತು ಸಾಕ್ಷರತಾ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಮೈಸೂರಿನ ಪರಸ್ಪರ ಸ್ನೇಹ ಬಳಗದ ವತಿಯಿಂದ ಜಿಲ್ಲಾ ಪ್ರಶಸ್ತಿ ಪುರಸ್ಕೃತರ ಶಿಕ್ಷಕರಾದ ಎಂ.ಶಿವಪ್ಪ ಮತ್ತು ಟಿ.ಬಲರಾಮ ಅವರನ್ನು ಅಭಿನಂದಿಸಲಾಯಿತು.

ಪರಸ್ಪರ ಬಳಗದ ಕೆ.ಆರ್.ಭಗವಾನ್, ಧನಂಜಯ, ಮದುಸೂದನ, ಸರ್ಮಾಧಿಖಾನಂ, ಭಾಗ್ಯಲಕ್ಷ್ಮಿ, ಸುಮತಿ,ರಾಧಾ, ಹೇಮಲತಾ, ಮಂಜುಳ, ಪ್ರೇಮ, ರಾಣಿ, ಸುನಂದ, ಶ್ರೀಧರ್, ಸೈಯದ್ ರಿಜ್ವಾನ್, ಅಶೋಕ್, ಕೆಂಚೇಗೌಡ, ಕಿತಣ್, ಮಧು, ಮಂಜುನಾಥ್, ಪ್ರಕಾಶ್, ಶಂಕರೇಗೌಡ, ಶಿವಕುಮಾರ್, ವಾಸು ಮತ್ತಿತರರು ಇದ್ದರು.

RELATED ARTICLES
- Advertisment -
Google search engine

Most Popular