ಮೈಸೂರು : ಮೈಸೂರು ಜಿಲ್ಲಾ ಬಿ.ಸಿ.ಎಂ. ಹಿರಿಯ ವಿದ್ಯಾರ್ಥಿಗಳ ಒಕ್ಕೂಟ ರಾಜ್ಯಕ್ಕೆ ಮಾದರಿ ಒಕ್ಕೂಟವಾಗಿ ಬೆಳೆಯಲಿ ಎಂದು ಮುಖ್ಯಮಂತ್ರಿಗಳ ಜಂಟಿಕಾರ್ಯದರ್ಶಿ ಎಂ. ರಾಮಯ್ಯ ಕರೆ ನೀಡಿದರು.
ಮೈಸೂರಿನ ಸಿ.ಸಿ. ಕ್ಲಬ್ ಸಭಾಂಗಣದಲ್ಲಿ ನಡೆದ ಮೈಸೂರು ಜಿಲ್ಲಾ ಬಿ.ಸಿ.ಎಂ. ವಿದ್ಯಾರ್ಥಿನಿಲಯಗಳ ಹಿರಿಯ ವಿದ್ಯಾರ್ಥಿಗಳ ಒಕ್ಕೂಟದ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿ.ಸಿ.ಎಂ. ಹಾಸ್ಟೆಲ್‌ನಿಂದ ಅನ್ನದಾಸೋಹ ಶಿಕ್ಷಣದಾಸೋಹ ಪಡೆದು ತಮ್ಮ ಬದುಕನ್ನು ಕಟ್ಟಿಕೊಂಡಿರುವ ಸಾವಿರಾರು ಜನರು ಸರ್ಕಾರಕ್ಕೆ ಏನಾದರು ಕಾಣಿಕೆ ನೀಡಿ ಋಣವನ್ನು ತೀರಿಸಬೇಕು.
ಈ ಹಾಸ್ಟೆಲ್‌ಗಳ ನಿರ್ಮಾಣಕ್ಕೆ ಕಾರಣವಾದ ಡಾ.ಬಿ.ಆರ್. ಅಂಬೇಡ್ಕರ್ ಡಿ. ದೇವರಾಜ ಅರಸ್ ಎಲ್.ಜಿ. ಹಾವನೂರು, ಸಿದ್ದರಾಮಯ್ಯ ರವರನ್ನು ನಾವು ನೆನೆಯಲೇ ಬೇಕು ೧೯೭೭ ರಲ್ಲಿ ಹಿಂದುಳಿದವರ್ಗಗಳ ಇಲಾಖೆ ಸ್ಥಾಪನೆಯಾದರೂ ೧೯೯೪ ರವರೆಗೆ ಮೈಸೂರಿನಲ್ಲಿ ಒಂದು ಹಾಸ್ಟೆಲ್ ಮಾತ್ರ ಇತ್ತು. ನಾವು ಓದುವಾಗ ಬಿ.ಸಿ.ಎಂ. ಹಾಸ್ಟೆಲ್‌ಗಳು ಇರಲಿಲ್ಲ. ಬೆಂಗಳೂರಿನ ಖಾಸಗಿ ಹಾಸ್ಟೆಲ್‌ನಲ್ಲಿ ನನ್ನನ್ನು ರಾತ್ರೋರಾತ್ರಿ ಹೊರಗೆ ಹಾಕಿದರು. ಊಟ ಇರಲಿಲ್ಲ ಹಣ ಇರಲಿಲ್ಲ. ಇವೆಲ್ಲದರ ಪರಿಣಾಮವಾಗಿ ನಾನು ಸಿದ್ದರಾಮಯ್ಯರವರ ಗಮನಕ್ಕೆ ತಂದು ಮೈಸೂರು ಚಾಮರಾಜನಗರ ಜಿಲ್ಲೆಯಲ್ಲಿ ಸುಮಾರು ೨೦ ಬಿ.ಸಿ.ಎಂ. ಹಾಸ್ಟೆಲ್‌ಗಳನ್ನು ನಿರ್ಮಾಣಮಾಡಿದೆವು ಈಗ ರಾಜ್ಯದಲ್ಲಿ ೮೩೩ ಮುರಾರ್ಜಿ ವಸತಿ ಶಾಲೆಗಳಿವೆ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ನಾನು ಕೆಲಸ ಮಾಡಿದ್ದು ಸಾರ್ಥಕವಾಗಿದೆ, ನನ್ನ ವೃತ್ತಿ ನನಗೆ ತೃಪ್ತ ತಂದಿದೆ. ಈ ಸಂಘ ಜಾತ್ಯಾತೀ ಸಂಘವಾಗಿ ಬೆಳೆಯಲಿ ಇಲ್ಲಿ ಎಲ್ಲರೂ ಸಮಾನರು ಈ ಮುಖಾಂತರ ಸಮಾಜಮುಖಿ ಕೆಲಸಗಳನ್ನು ಮಾಡಿರಿ ಎಂದರು.
ಮುಖ್ಯಮಂತ್ರಿಗಳ ಜಂಟಿಕಾರ್ಯದರ್ಶಿ ಹಾಗೂ ಸಂಘದ ನೂತನ ಅಧ್ಯಕ್ಷ ಬಿ. ಗುರುಸ್ವಾಮಿ ಮಾತನಾಡಿ ಸಂಘಕ್ಕೆ ಈಗಾಗಲೇ ೬೩೦ ಜನರು ನೊಂದಣಿಯಾಗಿದ್ದಾರೆ. ದೇಶವಿದೇಶಗಳಲ್ಲಿ ಬಿ.ಸಿ.ಎಂ. ಹಳೆಯ ವಿದ್ಯಾರ್ಥಿಗಳು ಕೆಲಸ ಮಾಡುತ್ತಿದ್ದಾರೆ. ಈ ಸಂಘ ಧರ್ಮರಹಿತ, ಜಾತಿ ರಹಿತ, ರಾಜಕೀಯರಹಿತ ಸಂಘವಾಗಿದೆ. ಸೌಹಾರ್ಧವಾದ ಸಮಾಜ ನಿರ್ಮಾಣ ಮಾಡುವುದೇ ಸಂಘದ ಗುರಿಯಾಗಿದೆ. ಈ ಸಂಘ ಬಡಮಕ್ಕಳು ಹಳ್ಳಿಯಿಂದ ಬರುವ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ಮಾರ್ಗ ದರ್ಶನ, ಪರೀಕ್ಷೆ ಉದ್ಯೋಗ ವಿದ್ಯಾಭ್ಯಾಸದ ಬಗ್ಗೆ ಮಾರ್ಗದರ್ಶನ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಪ್ರೋತ್ಸಾಹ ತರಬೇತಿ ನೀಡುವುದು ನಮ್ಮ ಸಂಘದ ಉದ್ದೇಶವಾಗಿದ್ದು, ಬಿ.ಸಿ.ಎಂ. ಇಲಾಖೆಯ ಹಿರಿಯ ಅಧಿಕಾರಿಗಳಾದ ಎಂ. ರಾಮಯ್ಯರವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯೋಣ ಎಂದರು.
ಸಭೆಯಲ್ಲಿ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಆರ್. ಮಹಾದೇವ್, ಹಿರಿಯ ಕೆ.ಎ.ಎಸ್. ಅಧಿಕಾರಿ, ಬಸವರಾಜು, ಹಳೆಯ ವಿದ್ಯಾರ್ಥಿಗಳಾದ ಪ್ರಕಾಶ್ ಡಾ. ಮಾಲೇಗೌಡ, ಶ್ರೀನಿವಾಸ್, ಮುತ್ತ, ರಮೇಶ್‌ಗೌಡ, ರುಕ್ಮಾಂಗದ, ಡಾ. ಲೋಹಿತ್ ಹುಣಸೂರು, ತಹಸೀಲ್ದಾರ್ ಮಂಜುನಾಥ್, ರೇವಣ್ಣ, ಅಹಿಂದ ಜವರಪ್ಪ ಹಾಜರಿದ್ದರು.