Thursday, August 14, 2025
Google search engine

Homeರಾಜ್ಯಸುದ್ದಿಜಾಲಯುವ ರಾಜಕೀಯಗಾರಿಗೆ ಬಿ. ರಾಚಯ್ಯರ ಜೀವನ ಶ್ರೇಷ್ಠ ಮಾದರಿ: ಸಂಸ್ಕೃತಿ ಚಿಂತಕ ಸುರೇಶ್ ಋಗ್ವೇದಿ

ಯುವ ರಾಜಕೀಯಗಾರಿಗೆ ಬಿ. ರಾಚಯ್ಯರ ಜೀವನ ಶ್ರೇಷ್ಠ ಮಾದರಿ: ಸಂಸ್ಕೃತಿ ಚಿಂತಕ ಸುರೇಶ್ ಋಗ್ವೇದಿ

ಚಾಮರಾಜನಗರ: ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುವ ಯುವಕರು ಹಾಗು ನಾಗರಿಕರು ಮಾಜಿ ರಾಜ್ಯಪಾರರಾಗಿದ್ದ ಬಿ .ರಾಚಯ್ಯರಂತಹ ಆದರ್ಶ ರಾಜಕೀಯ ಸಂಸದೀಯ ಪಟುಗಳ ಸಮಗ್ರ ಇತಿಹಾಸವನ್ನು ಅಧ್ಯಯನ ಮಾಡಿದಾಗ ಶ್ರೇಷ್ಠ ರಾಜಕಾರಣಿಯಾಗಿ, ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ನೆರವೇರಿಸಲು ಸಾಧ್ಯವೆಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಕರ್ನಾಟಕ ಕಂಡ ಶ್ರೇಷ್ಠ ರಾಜಕೀಯ ಸಂಸದೀಯ ಪಟು ಬಿ ರಾಜಯ್ಯನವರ ಕೊಡುಗೆಗಳ ಹಾಗೂ ಜನ್ಮದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ ರಾಚಯ್ಯನವರು ಚಾಮರಾಜನಗರ ತಾಲ್ಲೂಕು ಆಲೂರು ಗ್ರಾಮದವರು. ಜಿಲ್ಲೆಯ ಇತಿಹಾಸ ಪ್ರಸಿದ್ಧ ಸಾಂಸ್ಕೃತಿಕ ನೆಲೆಗಟ್ಟಿನ ಶ್ರೇಷ್ಠ ಗ್ರಾಮವಾಗಿದೆ.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿವಿಧ ಇಲಾಖೆಗಳ ಮಂತ್ರಿಯಾಗಿ ಕ್ರಾಂತಿರಂಗ ಮತ್ತು ಜನತಾದಳದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ಕರ್ನಾಟಕ ಕಂಡ ಶ್ರೇಷ್ಠ ರಾಜಕೀಯ ದಿಗ್ಗಜರು. ಸುಮಾರು 40 ವರ್ಷಗಳ ನಿರಂತರ ಆಡಳಿತವನ್ನು ನಡೆಸಿದ ಮಾದರಿ ರಾಜಕಾರಣಿ ರಾಚಯ್ಯನವರು.

ಬಾಲ್ಯದಿಂದಲೂ ಜ್ಞಾನಿಗಳಾಗಿ, ಕ್ರೀಡಾಪಟುವಾಗಿ ಉತ್ತಮ ರೈತರಾಗಿ, ಪ್ರಗತಿಪರ ಚಿಂತನಾಶೀಲ ,ಅಭಿವೃದ್ಧಿ ಪರ ದೃಷ್ಟಿಕೋನವನ್ನು ಬೆಳೆಸಿಕೊಂಡ ರಾಚಯ್ಯನವರು ರಾಜಕಾರಣದಲ್ಲಿ ತಮ್ಮ ಜ್ಞಾನ ,ತಾಳ್ಮೆ, ಸಹನೆ ಅಭಿವೃದ್ಧಿ ಮತ್ತು ನಂಬಿಕೆಗೆ ಹೆಸರಾಗಿ ತಮ್ಮ ಪ್ರಖರತೆಯನ್ನು ಮೆರೆದ ಮೇಧಾವಿಗಳು. ರಾಚಯ್ಯನವರ ಆಡಳಿತದಲ್ಲಿ ಸಾಮಾಜಿಕ ನ್ಯಾಯದ ರಕ್ಷಕರಾಗಿ, ಅಭಿವೃದ್ಧಿಪರ ಚಿಂತಕರಾಗಿ, ಸೈದ್ದಾಂತಿಕ ರಾಜನೀತಿಗೆ ಹೆಸರಾಗಿರುವ ರಾಚಯ್ಯ ನವರ ಎಲ್ಲ ಭಾಷಣಗಳು ಅಪಾರ ಮೌಲ್ಯವನ್ನು ,ಚಿಂತನೆಯನ್ನು ಹಾಗೂ ಪ್ರಜಾಪ್ರಭುತ್ವದ ನೆಲಗಟ್ಟಿನಲ್ಲಿ ಕಾರ್ಯನಿರ್ವಹಿಸುವ ಸರ್ವರಿಗೂ ಆದರ್ಶವಾಗಿದೆ. ಪ್ರಪಂಚದ ವಿವಿಧ ರಾಷ್ಟ್ರಗಳನ್ನು ತಮ್ಮ ಅಧ್ಯಯನದ ಮೂಲಕ ಅಪಾರ ಅನುಭವ ಪಡೆದು ದೇಶದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದವರು. ರಾಚಯ್ಯನವರನ್ನು ಜಿಲ್ಲೆಯ ಜನ ಎಂದು ಮರೆಯರು ಸಾಧ್ಯವೇ ಇಲ್ಲ ಎಂದು ಋಗ್ವೇದಿ ತಿಳಿಸಿದರು.

ಮುಖ್ಯ ಅತಿಥಿಗಳಾಗಿದ್ದ ಕರ್ನಾಟಕ ಸೇನಾ ಪಡೆಯ ಅಧ್ಯಕ್ಷ ಶ್ರೀನಿವಾಸ್ ಗೌಡ ಮಾತನಾಡಿ ರಾಚಯ್ಯನವರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯೋಜನೆಯ ಮೂಲಕ ಶ್ರಮಿಸಿದ ಮಹಾನ್ ವ್ಯಕ್ತಿ. ಜಿಲ್ಲೆಯ ನೀರಾವರಿ ,ಕೈಗಾರಿಕೆ, ಶಿಕ್ಷಣ, ರಸ್ತೆ ಉದ್ಯೋಗ ಸೃಷ್ಟಿ, ರೇಷ್ಮೆ ಹಾಗೂ ಅಭಿವೃದ್ಧಿಯ ಹರಿಕಾರರಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ. ನೂರಾರು ಕಾರ್ಯಗಳು ಎಂದಿಗೂ ಅವರನ್ನು ಜೀವಂತವಾಗಿ ಇಡುತ್ತದೆ. ಸುವರ್ಣಾವತಿ ಜಲಾಶಯ, ನಗರದ ಸರ್ಕಾರಿ ಪಾಲಿಟೆಕ್ನಿಕ್ ,ಡಿಎಡ್ ಬಿಎಡ್ ಕಾಲೇಜುಗಳು ಇವರ ಕೊಡುಗೆಗಳು . ಸಾವಿರಾರು ಜನರಿಗೆ ಭೂಮಿಯನ್ನು , ಉದ್ಯೋಗ ವನ್ನುನೀಡಿದ ಮಹಾನ್ ವ್ಯಕ್ತಿ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಆದ ಶ್ರೀಮತಿ ಪದ್ಮ ಪುರುಷೋತ್ತಮ್ ಮಾತನಾಡಿ ರಾಚಯ್ಯ ರವರು ಸಜ್ಜನರು , ಸರಳ ಹಾಗು ಅಪಾರ ಗೌರವಾನ್ವಿತ ವ್ಯಕ್ತಿತ್ವ ದವರು. ಕನ್ನಡ ಸಾಹಿತ್ಯ ಪರಿಷತ್ತು ಇವರ ಕೊಡುಗೆಗಳನ್ನು ಕುರಿತು ಕಾರ್ಯಕ್ರಮ ರೂಪಿಸುವುದು ಬಹಳ ಒಳ್ಳೆಯ ಅರ್ಥಗರ್ಭಿತವಾದ ಕಾರ್ಯಕ್ರಮವಾಗಿದೆ. ಹಿಮಾಚಲ ಪ್ರದೇಶ, ಕೇರಳ, ಗೋವಾ ರಾಜ್ಯಗಳ ರಾಜ್ಯಪಾಲರಾಗಿ ಸೇವೆ ಸಲ್ಲಿಸಿ ಚಾಮರಾಜನಗರಕ್ಕೆ ಕೀರ್ತಿ ತಂದ ಮಹಾನ್ ವ್ಯಕ್ತಿ ಎಂದು ತಿಳಿಸಿದರು.

ಹಿರಿಯ ಕನ್ನಡ ಚಳುವಳಿಗಾರ ರಾಜಗೋಪಾಲ್ ರಾಜಯ್ಯನವರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಪಣ್ಯದಹುಂಡಿ ರಾಜು, ರವಿಚಂದ್ರಪ್ರಸಾದ್ ಕಹಳೆ, ಬಿಕೆ ಆರಾಧ್ಯ, ಶಿವಲಿಂಗ ಮೂರ್ತಿ, ಸರಸ್ವತಿ, ಹೊನ್ನೂರು ಪುಟ್ಟಸ್ವಾಮಿ, ರಾಮಸಮುದ್ರದ ಮಂಜುನಾಥ್, ನಂಜುಂಡ ಶೆಟ್ಟಿ, ಮಲ್ಲಣ್ಣ ಇತರರು ಇದ್ದರು.

RELATED ARTICLES
- Advertisment -
Google search engine

Most Popular