Monday, May 26, 2025
Google search engine

Homeರಾಜ್ಯಬಾಗಲಕೋಟೆ: ಐಪೋನ್ ಕೊಡಿಸಲಿಲ್ಲವೆಂದು ಮನೆ ಬಿಟ್ಟು ಹೋದ ಬಾಲಕ​

ಬಾಗಲಕೋಟೆ: ಐಪೋನ್ ಕೊಡಿಸಲಿಲ್ಲವೆಂದು ಮನೆ ಬಿಟ್ಟು ಹೋದ ಬಾಲಕ​

ಬಾಗಲಕೋಟೆ: ರೀಲ್ಸ್, ಇನ್ಸ್ಟಾಗ್ರಾಮ್ ಹಾಗೂ ಗೇಮ್​ ಗೀಳಿಗೆ ಬಿದ್ದ ಬಾಲಕನೊಬ್ಬ ಪೋಷಕರು ಐಪೋನ್ ಕೊಡಿಸದ ಹಿನ್ನೆಲೆ ಮನೆ ಬಿಟ್ಟು ಹೋಗಿರುವ ಘಟನೆ ಬಾಗಲಕೋಟೆ  ತಾಲ್ಲೂಕಿನ ಗದ್ದನಕೇರಿ ಗ್ರಾಮದಲ್ಲಿ ನಡೆದಿದೆ.

ಶ್ರವಣಕುಮಾರ ಮನೆ ಬಿಟ್ಟು ಹೋದ ಬಾಲಕ. ಇತ ಒಂಬತ್ತನೇ ತರಗತಿ ಮುಗಿಸಿ ಇದೀಗ ಹತ್ತನೇ ತರಗತಿಗೆ ತೇರ್ಗಡೆಯಾಗಿದ್ದ. ಕಳೆದ ಶನಿವಾರ(ಏ.13) ಮನೆಯಲ್ಲಿದ್ದ 800 ರೂ. ತೆಗೆದುಕೊಂಡು ಮನೆಯಿಂದ ಹೋಗಿದ್ದಾನೆ.

ಇನ್ನು ಮನೆಯ ಹಿರಿಮಗ ಕಾಣೆಯಾಗಿದ್ದಕ್ಕೆ ಪೋಷಕರು ಕಂಗಾಲಾಗಿದ್ದು, ಶ್ರವಣಕುಮಾರನನ್ನ ನೆನೆದು ತಂದೆ-ತಾಯಿ, ಸಹೋದರ ಹಾಗೂ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಎಲ್ಲೇ ಇದ್ದರೂ ಮನೆಗೆ ಬಾ ಎಂದು ಪೋಷಕರು ಹಾಗೂ ಪ್ರೀತಿಯ ಅಜ್ಜ ಫೋಟೋ ಹಿಡಿದು ಕಣ್ಣೀರಿಡುತ್ತಿದ್ದಾರೆ.

RELATED ARTICLES
- Advertisment -
Google search engine

Most Popular