Tuesday, May 20, 2025
Google search engine

Homeರಾಜ್ಯಬಂಡೀಪುರ ಅರಣ್ಯ ಪ್ರದೇಶದಲ್ಲಿ ರಾತ್ರಿ ವೇಳೆ ವಾಹನಗಳ ನಿಷೇಧ ತೆಗೆಯಬಾರದು: ವಾಟಾಳ್ ನಾಗರಾಜ್ ಆಗ್ರಹ

ಬಂಡೀಪುರ ಅರಣ್ಯ ಪ್ರದೇಶದಲ್ಲಿ ರಾತ್ರಿ ವೇಳೆ ವಾಹನಗಳ ನಿಷೇಧ ತೆಗೆಯಬಾರದು: ವಾಟಾಳ್ ನಾಗರಾಜ್ ಆಗ್ರಹ

ಬೆಂಗಳೂರು: ಯಾವುದೇ ಕಾರಣಕ್ಕೂ ಬಂಡೀಪುರ ಅರಣ್ಯ ಪ್ರದೇಶದಲ್ಲಿ ರಾತ್ರಿ ವೇಳೆ ವಾಹನಗಳ ನಿಷೇಧ ತೆಗೆಯಬಾರದು. ಒಂದು ವೇಳೆ ತೆಗೆದಿದ್ದೇ ಆದ್ರೆ ರಾಜ್ಯಾಧ್ಯಂತ ಭಾರೀ ಪ್ರತಿಭಟನೆಯನ್ನು ನಡೆಸುವುದಾಗಿ ಕನ್ನಡ ಚಳುವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಅವರು, ಹಿಂದುಳಿದ ಗಡಿ ಪ್ರದೇಶದ ಚಾಮರಾಜನಗರ ಜಿಲ್ಲೆಯ ಐತಿಹಾಸಿ ಬಂಡೀಪುರದ ಅರಣ್ಯ ಪ್ರದೇಶದಲ್ಲಿ ರಾತ್ರಿ ವಾಹನಗಳ ನಿಷೇಧವನ್ನು ಯಾವುದೇ ಕಾರಣಕ್ಕೂ ತೆಗೆಯಬಾರದು ಅಂತ ಆಗ್ರಹಿಸಿ, ಪ್ರತಿಭಟನೆ ನಡೆಸಲಿದ್ದಾರೆ.

ಒಂದು ವೇಳೆ ನಿಷೇಧವನ್ನು ತೆಗೆದಿದ್ದೇ ಆದರೇ ರಾಜ್ಯಾಧ್ಯಂತ ಭಾರೀ ಹೋರಾಟ ನಡೆಸಲಾಗುವುದು. ಈ ಬಗ್ಗೆ ಇಂದು ಸಂಜೆ 4.30ಕ್ಕೆ ಬೆಂಗಳೂರಿನ 18ನೇ ಮಲ್ಲೇಶ್ವರಂ ಕ್ರಾಸ್ ನಲ್ಲಿರುವಂತ ಅರಣ್ಯ ಭವನದ ಮುಂದೆ ಪ್ರತಿಭಟನೆ ಕೂಡ ನಡೆಸಲಾಗುವುದು ಅಂತ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular