Thursday, March 19, 2026
Google search engine

Homeಸ್ಥಳೀಯಚಾಮರಾಜನಗರದಲ್ಲಿ ಧಾರಾಕಾರ ಮಳೆಗೆ ನೆಲಕ್ಕುರುಳಿದ ಬಾಳೆ

ಚಾಮರಾಜನಗರದಲ್ಲಿ ಧಾರಾಕಾರ ಮಳೆಗೆ ನೆಲಕ್ಕುರುಳಿದ ಬಾಳೆ

ಚಾಮರಾಜನಗರ : ನಿನ್ನೆ ಸುರಿದ ಧಾರಾಕಾರ ಮಳೆಗೆ ರೈತರಿಗೆ ಅಪಾರ ನಷ್ಟ ಸಂಭವಿಸಿದೆ. 300 ಕ್ಕೂ ಹೆಚ್ಚು ಪ್ರದೇಶದ ರೈತರಿಗೆ ಬೆಳೆ ನಷ್ಟ ಆಗಿದೆ. ಪ್ರಮುಖವಾಗಿ ಬಾಳೆ, ಮೆಣಸಿನಕಾಯಿ, ಟೊಮ್ಯಾಟೊ ಸೇರಿದಂತೆ ತರಕಾರಿ ಬೆಳೆಗಳು ಹಾನಿಗೀಡಾಗಿವೆ.

ಚಾಮರಾಜನಗರ ತಾಲೂಕಿನ ಹಲವೆಡೆ ಬಾಳೆ ನೆಲಕ್ಕುರುಳಿದೆ. ಚಾಮರಾಜನಗರ ತಾಲೂಕಿನ ಅಮಚವಾಡಿ, ಕಡುವಿನಕಟ್ಟೆ ಹುಂಡಿ, ವೀರನಪುರ, ನಂಜೇದೇವನಪುರ ಸೇರಿದಂತೆ ಹಲವು ಭಾಗದಲ್ಲಿ ಅಪಾರ ಬಾಳೆ ನೆಲಕ್ಕೆ ಅಪ್ಪಳಿಸಿದೆ. ಅಧಿಕಾರಿಗಳು ಸೂಕ್ತ ಬೆಳೆ ನಷ್ಟ ಭರಿಸುವಂತೆ ರೈತರು ಆಗ್ರಹಿಸಿದ್ದಾರೆ. ರೈತರ ಯುಗಾದಿ ಸಂಭ್ರಮವನ್ನು ಮಳೆ ಕಸಿದುಕೊಂಡಿದೆ. 

ಅಮಚವಾಡಿ ಗ್ರಾಮದ ರೈತ ವೀರಭದ್ರನಾಯಕ ಎಂಬವರು ಎರಡು ಎಕರೆ ಪ್ರದೇಶದಲ್ಲಿ ಬಾಳೆ ಬೆಳೆದಿದ್ದರು. 300 ಕ್ಕೂ ಹೆಚ್ಚು ಮಳೆ, ಗಾಳಿಗೆ ಉರುಳಿ ಬಿದ್ದಿದೆ. ಇದರಿಂದ ಸಾವಿರಾರು ರೂಪಾಯಿ ನಷ್ಟವಾಗಿದೆ.

RELATED ARTICLES
- Advertisment -
Google search engine

Most Popular