ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಕೋಳೂರು ನೀರು ಬಳಕೆದಾರರ ಸಂಘದ ನೂತನ ಅಧ್ಯಕ್ಷರಾಗಿ ಕೆ.ಆರ್.ನಗರ ಎಪಿಎಂಸಿ ಮಾಜಿ ನಿರ್ದೇಶಕ ಬಂಡಹಳ್ಳಿ ಬಿ.ಆರ್.ಕುಚೇಲ್ ಮತ್ತು ಉಪಾಧ್ಯಕ್ಷರಾಗಿ ಜಯಮ್ಮಕುಂಟಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿ.ಆರ್.ಕುಚೇಲ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಜಯಮ್ಮಕುಂಟಪ್ಪ ಅವರನ್ನು ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಮೈಸೂರು ಸಹಕಾರ ಇಲಾಖೆಯ ಭಾಗಿರಥಿ ಪ್ರಕಟಿಸಿದರು.
ನಂತರ ಮಾತನಾಡಿದ ನೂತನ ಅಧ್ಯಕ್ಷ ಬಿ.ಅರ್.ಕುಚೇಲ್ ರೈತರಿಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡು ಹಾರಂಗಿ ನಾಲಾ ವ್ಯಾಪ್ತಿಯ ಅಚ್ಚುಕಟ್ಟು ರೈತರಿಗೆ ಸರ್ಮಪಕ ನಾಲೆಯ ನೀರಿನ ಸೌಲಭ್ಯ ಕಲ್ಪಿಸಿ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಒದಗಿಸಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಸಿಇಓ ಕೆ.ಸಿ.ರೇವಣ್ಣ, ನಿರ್ದೇಶಕ ಎನ್.ಪಿ.ಚಂದ್ರಶೇಖರಯ್ಯ, ಅಶ್ವತ್, ಮಹೇಂದ್ರ, ರಾಜೇಗೌಡ, ಅಣ್ಣೇಗೌಡ, ದ್ರಾಕ್ಷಾಣಿಯಮ್ಮ, ಕೆ.ಎ.ರಮೇಶ್, ನಿಂಗರಾಜು, ಚನ್ನೇಗೌಡ ಮುಖಂಡರಾದ ಕೋಳೂರು ರಮೇಶ್,ಬಂಡಹಳ್ಳಿ ಅಣ್ಣೇಗೌಡ ಸೇರಿದಂತೆ ಸಂಘದ ವ್ಯಾಪ್ತಿಯ ರೈತರು ಹಾಜರಿದ್ದರು.



