Thursday, May 22, 2025
Google search engine

Homeರಾಜಕೀಯಬಾಗಲಕೋಟೆಗೆ ಬಾಂಗ್ಲಾ ನುಸುಳುಕೋರರು ಪ್ರವೇಶ ಮಾಡ್ತಿದ್ದಾರೆ: ಪ್ರಮೋದ್ ಮುತಾಲಿಕ್ ಸ್ಫೋಟಕ ಹೇಳಿಕೆ

ಬಾಗಲಕೋಟೆಗೆ ಬಾಂಗ್ಲಾ ನುಸುಳುಕೋರರು ಪ್ರವೇಶ ಮಾಡ್ತಿದ್ದಾರೆ: ಪ್ರಮೋದ್ ಮುತಾಲಿಕ್ ಸ್ಫೋಟಕ ಹೇಳಿಕೆ

ಬಾಗಲಕೋಟೆ: ಬಾಗಲಕೋಟೆ  ಜಿಲ್ಲೆಗೆ ಬಾಂಗ್ಲಾ ನುಸುಳುಕೋರರು ಪ್ರವೇಶ ಮಾಡ್ತಿದ್ದಾರೆ. ಈಗಾಗಲೇ ಈ ನುಸುಳುಕೋರರ ಬಗ್ಗೆ ಹಲವು ಸಂಘಟನೆಗಳು ಎಸ್ಪಿ ಹಾಗೂ ಡಿಸಿ ಅವರ ಗಮನಕ್ಕೆ ತಂದಿದ್ದಾರೆ. ಆದರೆ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬಾಗಲಕೋಟೆಯಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಬಾಗಲಕೋಟೆಯಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್, ಮುಂದಿನ ದಿನಗಳಲ್ಲಿ ಬಾಂಗ್ಲಾ ದೇಶಿಯರನ್ನ ಹುಡುಕಿ, ಹುಡುಕಿ ನಾವು ಪೊಲೀಸರಿಗೆ ಒಪ್ಪಿಸಬೇಕಾಗುತ್ತೆ ಎಂಬ ಎಚ್ಚರಿಕೆ ಕೊಡ್ತಿದ್ದೇನೆ. ಇದು ಬಹಳ ಡೇಂಜರಸ್ಸ್. ಇದು ಕೇವಲ ಎಸ್ಪಿ ಹಾಗೂ ಡಿಸಿಗಳ ಅಥವಾ ಇನ್ಯಾವುದೋ ಎಂಎಲ್ ​ಎ, ಎಂಪಿಗಳ ಪ್ರಶ್ನೆ ಅಲ್ಲ. ಸಮಾಜದ ಪ್ರಶ್ನೆ ಇದೆ, ಅವ್ರು ಹೇಗೆ ಬರ್ತಾ ಇದ್ದಾರೆ, ಎಲ್ಲಿಂದ ಬರ್ತಿದ್ದಾರೆ? ಅವ್ರ ಐಡಿ, ಓಟರ್ ಕಾರ್ಡ್ ಏನು? ಎಲ್ಲಿ ವಸತಿ ಮಾಡ್ತಿದ್ದಾರೆ, ಅವ್ರಿಗೆ ಯಾರೂ ಆಶ್ರಯ ಕೊಡ್ತಿದ್ದಾರೆ ಎಂಬುದನ್ನ ತಪಾಸಣೆ ಮಾಡಿ ಅವ್ರನ್ನ ಒದ್ದು ಹೊರಗೆ ಹಾಕಬೇಕು. ನೀವು ಹೊರಹಾಕದೇ ಇದ್ರೆ, ನಾಮಗೆ ಗೊತ್ತಿದೆ ಅವ್ರನ್ನ ಹೇಗೆ ಹೊರಹಾಕಬೇಕು ಅನ್ನೋದು. ಬಾಂಗ್ಲಾ ಮುಸ್ಲೀಮರ ಪ್ರವೇಶ ಆಗಿದೆ. ಅವರನ್ನ ಹೊರಹಾಕಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನು ಇದೇ ವೇಳೆ ಮಂಡ್ಯ ಜಿಲ್ಲೆಯ ಕೆರಗೋಡಿನಲ್ಲಿ ಹುನುಮ ಧ್ವಜ ತೆರವು ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಕಾಂಗ್ರೆಸ್ ನವರಿಗೆ ಕೇಸರಿ ಕಂಡ್ರೆ ಆಗಲ್ಲ. ಹಿಂದೂ, ಹಿಂದುತ್ವ ಕಂಡ್ರೆ ಆಗಲ್ಲ. ಇಡೀ ದೇಶದಲ್ಲಿ ಶ್ರೀ ರಾಮನ ಅಲೆಯಲ್ಲ, ಸುನಾಮಿಯೇ ಎದ್ದಿದೆ. ಮನೆ ಮನೆ, ಹಳ್ಳಿ ಹಳ್ಳಿಗಳಲ್ಲಿ ಆ ವೈಭವ ನೋಡಲಾಗದೇ ಹೊಟ್ಟೆ ಉರಿತಾಯಿದೆ ಇವ್ರಿಗೆ. ಕೇಸರಿ ಯಾವುದೋ ವ್ಯಕ್ತಿ, ಧರ್ಮ ಪಕ್ಷದ್ದೋ ಅಲ್ಲ, ಸಾವಿರಾರು ವರ್ಷದಿಂದ ಬಂದ ಕೇಸರಿ ಪತಾಕೆ ನಿಮಗೇನು ತೊಂದರೆ ಕೊಡ್ತಿದೆ. ಮುಸ್ಲಿಂ ವ್ಯಕ್ತಿಗಳು ಅಡ್ಡಪಡಿಸಿದ್ರೆ, ಅವ್ರಿಗೆ ಹೇಳಿ. ಇದು ಪಾಕಿಸ್ತಾನ ಅಲ್ಲ, ಅಫ್ಘಾನಿಸ್ತಾನ ಅಲ್ಲ ಎಂದು. ಭಾರತ ಇದು, ಹಿಂದೂಸ್ತಾನ್ ನಲ್ಲಿ ಕೇಸರಿ ಧ್ವಜವೇ ಹಾರಾಡುತ್ತೆ. ಇದನ್ನ ಅವ್ರಿಗೆ ಹೇಳೋದು ಬಿಟ್ಟು, ಇವತ್ತು ಕೇಸರಿ ಧ್ವಜ ಇಳಿಸುವ ಧರ್ಮ ದ್ರೋಹಿಗಳು ನೀವು ಕಾಂಗ್ರೆಸ್ ನವ್ರು ಎಂದು ಹರಿಹಾಯ್ದರು.

ಎರಡು ದಿನಗಳ‌ ಹಿಂದೆ ಮಂಡ್ಯ ಜಿಲ್ಲೆಯ ಕೆರಗೋಡ್ ನಲ್ಲಿ, ಕೇಸರಿ ಬಣ್ಣದ ಹನುಮನ ಚಿತ್ರವಿರುವ ಧ್ವಜವನ್ನ ತೆಗೆದು ಹಾಕಿದ್ದಾರೆ. ಯಾರೂ ಕಂಪ್ಲೇಟ್ ಕೊಡದೇ, ಯಾವುದೇ ವಿವಾದ ಇಲ್ಲದೇ ಈಗ ಅದನ್ನ ಸಡನ್ ಆಗಿ ತೆಗೆಯುವ ಕಾರಣ ಏನು 108 ಅಡಿಯ ಧ್ವಜದ ಕಂಬ ಇದೆ, ಇದನ್ನ ನೋಡಿದ್ರೆ ಅಲ್ಲಿರುವ ನಾಗರಿಕರ, ಯುವಕರ ಉತ್ಸಾಹವನ್ನ ಮೆಚ್ಚಬೇಕು. ಶ್ರೀರಾಮನ ಮೇಲಿರುವ ಕಳಕಳಿ ಇಂದ ಜನವರಿ 22ರಂದು ಆ ಕಂಬವನ್ನ ಪ್ರತಿಷ್ಠಾಪನೆ ಮಾಡಿದ್ದಾರೆ. ಜನವರಿ 26 ರಂದು, ಹನುಮ ಧ್ವಜ ಇಳಿಸಿ ಆ ಕಂಬದ ಮೇಲೆ ರಾಷ್ಟ್ರಧ್ವಜ ಹಾರಿಸಿದ್ದಾರೆ. ಮಾರನೇಯ ದಿನ ಹನುಮ ಧ್ವಜ ಹಾಕಿದ್ದಾರೆ. ಅದೇ ಸ್ಥಳದಲ್ಲಿ ಮತ್ತೆ ಹನುಮಧ್ವಜ ಪ್ರತಿಷ್ಠಾಪನೆ ಆಗಬೇಕು ಎಂದು ಮುತಾಲಿಕ್ ತಿಳಿಸಿದರು.

RELATED ARTICLES
- Advertisment -
Google search engine

Most Popular