ಏಷ್ಯಾಕಪ್ ಸನಿಹವಾಗುತ್ತಿದ್ದಂತೆ ಬಾಂಗ್ಲಾದೇಶ ತಂಡದ ಸಂಕಷ್ಟಗಳು ಹೆಚ್ಚಾಗುತ್ತಿವೆ. ತಿಂಗಳ ಹಿಂದೆ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದ ತಮೀಮ್ ಇಕ್ಬಾಲ್, ವೃತ್ತಿಜೀವನಕ್ಕೆ ಹಠಾತ್ ನಿವೃತ್ತಿ ಘೋಷಿಸಿದ್ದರು. ಆ ಬಳಿಕ ಪ್ರಧಾನಿಯವರ ಆದೇಶದ ಮೇರೆಗೆ ಮತ್ತೆ ತಂಡಕ್ಕೆ ಎಂಟ್ರಿಕೊಟ್ಟಿದ್ದರು.

ತಮೀಮ್ ನಾಯಕತ್ವದಿಂದ ಕೆಳಗಿಳಿದಿದ್ದರಿಂದ ಶಾಕಿಬ್ ಅಲ್ ಹಸನ್‌ಗೆ ಏಕದಿನ ತಂಡದ ನಾಯಕತ್ವವನ್ನು ಹಸ್ತಾಂತರಿಸಲಾಯಿತು. ಆ ಬಳಿಕ ಇಂಜುರಿಯಿಂದ ಬಳಲುತ್ತಿದ್ದ ಮಾಜಿ ನಾಯಕ ತಮೀಮ್ ಇಕ್ಬಾಲ್ ಏಷ್ಯಾಕಪ್ ಪಂದ್ಯಾವಳಿಯಿಂದ ಹೊರಗುಳಿಯಲು ನಿರ್ಧರಿಸಿದರು. ನಂತರ ಬಾಂಗ್ಲಾ ಮಂಡಳಿ ೧೭ ಸದಸ್ಯರ ತಂಡವನ್ನು ಏಷ್ಯಾಕಪ್‌ಗೆ ಪ್ರಕಟಿಸಿತ್ತು.