Friday, May 23, 2025
Google search engine

Homeಸ್ಥಳೀಯಬನ್ನೂರು ರಾಜು ಅವರು ಎಲೆಮರೆ ಕಾಯಿಯಂತೆ ಕನ್ನಡ ಸಾಹಿತ್ಯ ಸೇವೆ ಮಾಡಿದ್ದಾರೆ: ಡಾ.ಎಸ್. ಶಿವರಾಜಪ್ಪ

ಬನ್ನೂರು ರಾಜು ಅವರು ಎಲೆಮರೆ ಕಾಯಿಯಂತೆ ಕನ್ನಡ ಸಾಹಿತ್ಯ ಸೇವೆ ಮಾಡಿದ್ದಾರೆ: ಡಾ.ಎಸ್. ಶಿವರಾಜಪ್ಪ

ಮೈಸೂರು: ಅಂಕಣಕಾರ, ಪತ್ರಕರ್ತ ಬನ್ನೂರು ಕೆ. ರಾಜು ಅವರು ಎಲೆ ಮರೆ ಕಾಯಿಯಂತೆ ಕನ್ನಡ ಸಾಹಿತ್ಯ ಸೇವೆ ಮಾಡಿದ್ದಾರೆ ಎಂದು ಶ್ರೀನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಡಾ.ಎಸ್‌‍. ಶಿವರಾಜಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಅರವತ್ತು ತುಂಬಿದ ಸಾಹಿತಿ ಬನ್ನೂರು ಕೆ. ರಾಜು ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಸಾಹಿತ್ಯದ ಅಭಿರುಚಿ ಇಲ್ಲದವರು, ಸಾಹಿತ್ಯ ಕೃಷಿ ಮಾಡಿದವರು ಸಾಹಿತ್ಯ ಸಂಸ್ಥೆಗಳ ಚುಕ್ಕಾಣಿ ಹಿಡಿದಿರುತ್ತಾರೆ. ಆದರೆ, ಬನ್ನೂರು ಕೆ. ರಾಜು ಅವರು ಎಲೆಮರೆ ಕಾಯಿಯಂತೆ ಕನ್ನಡ ಸಾರಸ್ವತ ಲೋಕಕ್ಕೆ ಸೇವೆ ಸಲ್ಲಿಸಿದ್ದಾರೆ ಎಂದು ನುಡಿದರು.

ಬನ್ನೂರು ರಾಜು ಸಮಾಜ ಮತ್ತು ಜನರ ನಡುವೆ ಬದುಕಿ ಪ್ರೀತಿ ವಿಶ್ವಾಸ ಸಂಪಾದಿಸಿದ್ದಾರೆ. ಅವರ ನಡೆ ನುಡಿಯಲ್ಲಿ ಸರಸ್ವತಿ ನಾಟ್ಯವಾಡುತ್ತಿದ್ದಾಳೆ. ಹೃದಯವೇ ಇಲ್ಲದ ಈ ಯುಗದಲ್ಲಿ ಹೃದಯವಂತ ಕೃತಿಯ ಮೂಲಕ ಬನ್ನೂರು ರಾಜು ಅವರು ತಮನ್ನು ಸಾಹಿತ್ಯ ಕ್ಷೇತ್ರಕ್ಕೆ ಸಮರ್ಪಿಸಿಕೊಂಡರು ಎಂದು ಹೇಳಿದರು. ಎಚ್‌ಎಸ್ಕೆ ನಂತರ ಬನ್ನೂರು ಕೆ.ರಾಜು ಅವರು ಹೆಚ್ಚು ಅಂಕಣಗಳನ್ನು ಬರೆದಿದ್ದಾರೆ. ಸಿನಿಮಾ, ಕಾವ್ಯ, ವಿಮರ್ಶೆ, ಕಥೆ, ರಂಗ ಕ್ಷೇತ್ರ, ದಾಸರು, ಶರಣರು ಎಲ್ಲರ ಬಗ್ಗೆಯೂ ಓದಿಕೊಂಡಿದ್ದು, ಬರೆಯುತ್ತಾರೆ. ಬರವಣಿಗೆಗೆ ಯಾವಾಗ ಸಮಯ ಸಿಗುತ್ತದೋ ತಿಳಿಯದು ಎಂದು ಪ್ರಶಂಸಿಸಿದರು.

ಸಾಹಿತಿ ಶಿವರಾಮ ಕಾರಂತರು ಲೇಖಕನಿಗೆ ಶಬ್ದಗಳು ತಾ ಮುಂದೆ ತಾಮುಂದೆ ಓಡಾಡುತ್ತಿರುತ್ತವೆ ಎಂದು ಹೇಳಿದ್ದಾರೆ. ಬನ್ನೂರು ರಾಜು ಅವರ ಓತಪ್ರೋತವಾಗಿ ಅಕ್ಷರಗಳನ್ನು ಜೋಡಿಸುತ್ತಾರೆ. ಆದರೆ, ಬರವಣಿಗೆ ಶೈಲಿ ಸರಳ ಸುಂದರ ಹೃದಯಸ್ಪರ್ಶಿ ಎಂದು ನುಡಿದರು.
ಸಾಹಿತಿಗಳು, ಹೋರಾಟಗಾರರು ವೈಯಕ್ತಿಕ ಬದುಕಿನಲ್ಲಿ ನಾನಾ ಕಷ್ಟಗಳು, ಸಂಕಟಗಳನ್ನು ಎದುರಿಸಿ ಕನ್ನಡಕ್ಕಾಗಿ ಸಾಕಷ್ಟು ದುಡಿದಿದ್ದಾರೆ. ಬನ್ನೂರು ಕೆ.ರಾಜು ಅವರ ಸಾಹಿತ್ಯ ಕೃಷಿ ನಡೆಸಲು ಪತ್ನಿಯವರಾದ ಮಹಾಲಕ್ಷ್ಮೀಯವರ ಉದಾರತೆ, ಕುಟುಂಬದ ಸಹಕಾರ ಬಹಳ ದೊಡ್ಡದು ಎಂದು ತಿಳಿಸಿದರು.

ಹೊಸಮಠದ ಚಿದಾನಂದಸ್ವಾಮಿ ಸಾನಿಧ್ಯ ವಹಿಸಿದ್ದರು. ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ ಅಧ್ಯಕ್ಷತೆ ವಹಿಸಿದ್ದರು. ನಟ ಸುಪ್ರೀತ್‌, ಸಂಸ್ಕೃತ ವಿದ್ವಾಂಸೆ ಡಾ.ಕೆ. ಲೀಲಾಪ್ರಕಾಶ್‌, ಉದ್ಯಮಿ ರವಿಕುಮಾರ್‌, ವಿದ್ಯಾ, ಭಾಗವಹಿಸಿದ್ದರು.

ನಟ ಅಂಬರೀಷ್‌ ಅಭಿಮಾನಿಗಳು ಬೆಂಗಳೂರುನಿಂದ ಆಗಮಿಸಿ ಶುಭಾ ಕೋರಿದ್ದು, ಸಂತಸ ತಂದಿದೆ. ಮನುಷ್ಯ ಸತ್ತ ನಂತರ ದೇವರಾಗುತ್ತಾನೆ ಎನ್ನುತ್ತಾರೆ. ಅಂತಹ ಸಾಲಿಗೆ ಅಂಬರೀಷ್‌ ಸೇರುತ್ತಾರೆ. ಸತ್ತು ದೇವರಾದವರು ಅಂಬರೀಷ್‌‍. ಪ್ರಸ್ತುತ ಕನ್ನಡದ ಕಡೆಗಣನೆ ಹೆಚ್ಚಾಗಿದೆ. ವಿಧಾನಸೌಧದಲ್ಲಿ ಕನ್ನಡ ಪರವಾಗಿ ಧ್ವನಿ ಎತ್ತುವವರು ಇಲ್ಲ. ಯಾಕೇ ಹೀಗಾಗಿದೆ ಎಂದರೆ ಹಣ ಮತ್ತು ಜಾತಿ. ಇವರೆಡು ಇಲ್ಲದಿದ್ದರೆ ವಿಧಾನ ಸೌಧ ಮೆಟ್ಟಿಲನ್ನು ಹತ್ತಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. -ಬನ್ನೂರು ಕೆ.ರಾಜು


RELATED ARTICLES
- Advertisment -
Google search engine

Most Popular