Tuesday, August 26, 2025
Google search engine

Homeರಾಜ್ಯದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ: ವಿರೋಧಕ್ಕೆ ಸಚಿವ ಮಹದೇವಪ್ಪ ಪ್ರತಿಕ್ರಿಯೆ

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ: ವಿರೋಧಕ್ಕೆ ಸಚಿವ ಮಹದೇವಪ್ಪ ಪ್ರತಿಕ್ರಿಯೆ

ಬೆಂಗಳೂರು: ಮೈಸೂರು ದಸರಾ ಉದ್ಘಾಟನೆಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ವಿಜೇತೆ ಮತ್ತು ಹಲವು ಜನಪರ ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದರ ಬಗ್ಗೆ ಬಿಜೆಪಿಗರು ಆಕ್ಷೇಪ ವ್ಯಕ್ತಪಡಿಸಿರುವುದು ಅತ್ಯಂತ ಬೇಸರದ ಸಂಗತಿ ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಕಳವಳ ವ್ಯಕ್ತಪಡಿಸಿದ್ದಾರೆ.

ಬೂಕರ್ ಪ್ರಶಸ್ತಿಯ ಮೂಲಕ ಕನ್ನಡ ನಾಡಿನ ಕಂಪನ್ನು ವಿಶ್ವದೆಲ್ಲೆಡೆ ಹಬ್ಬುವ ಕೆಲಸ ಮಾಡಿರುವ ಬಾನು ಮುಷ್ತಾಕ್ ಅವರನ್ನು ಈ ನಾಡಿನ ಪ್ರಜೆಗಳಾಗಿ ಬಿಜೆಪಿಗರು ಮುಕ್ತ ಮನಸ್ಸಿನಿಂದ ಒಪ್ಪಿಕೊಂಡು ಗೌರವಿಸಬೇಕಿತ್ತು. ಆದರೆ ತಲೆಯಲ್ಲಿ ಮನುವಾದಿಗಳ ವಿಷ ತುಂಬಿಕೊಂಡಿರುವ ಬಿಜೆಪಿಗರು ಮುಸ್ಲಿಮರ ಹೆಸರು ಕಂಡರೆ ಸಾಕು, ಅವರನ್ನು ಕಾರಣವಿಲ್ಲದೆಯೇ ದ್ವೇಷ ಮಾಡುವ ತಮ್ಮ ಕೆಟ್ಟ ನೀತಿಯನ್ನು ಮುಂದುವರೆಸಿದ್ದಾರೆ ಎಂದು ಟೀಕಿಸಿದ್ದಾರೆ.

ದಸರಾ ಎಂಬುದು ನಾಡಹಬ್ಬ ಎಂಬ ಸಣ್ಣ ಸಂಗತಿಯನ್ನು ಮರೆತು, ಸ್ಥಿಮಿತ ಕಳೆದುಕೊಂಡಂತೆ ವರ್ತಿಸುತ್ತಿರುವ ಬಿಜೆಪಿಗರು ನಾಡು ನುಡಿಗೆ ಕೊಡುಗೆ ನೀಡಿದವರನ್ನು ಅವಮಾನಿಸುವ ಕೆಲಸವನ್ನು ಮೊದಲು ನಿಲ್ಲಿಸಬೇಕು.

ಧರ್ಮವನ್ನು ರಾಜಕೀಯದಲ್ಲಿ ಬೆರೆಸಬಾರದೆಂಬ ಸಣ್ಣ ಅರಿವನ್ನು ಬಿಜೆಪಿಯೊಳಗೆ ಅಳಿದುಳಿದಿರುವ ಕೆಲವರಾದರೂ ವಿಚಾರವಂತರು ತಮ್ಮ ಪಕ್ಷದ ಮುಖಂಡರಿಗೆ ತಿಳಿಸಲಿ. ಭಾರತೀಯ ಜನಗಳಾದ ನಾವು ಐಕ್ಯತೆಯಿಂದ ಇರಬೇಕೆಂಬ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ವರ್ತಿಸುತ್ತಿರುವ ಬಿಜೆಪಿಗರು ತಮ್ಮ ಈ ಮುಸ್ಲಿಂ ದ್ವೇಷದ ಮನಸ್ಥಿತಿಯನ್ನು ಬದಿಗಿಟ್ಟು ಸಂವಿಧಾನದ ಆಶಯವನ್ನು ಅರ್ಥ ಮಾಡಿಕೊಳ್ಳಲಿ ಎಂದು ಸಚಿವ ಮಹದೇವಪ್ಪ ತಿರುಗೇಟು ನೀಡಿದ್ದಾರೆ.

RELATED ARTICLES
- Advertisment -
Google search engine

Most Popular