Sunday, August 24, 2025
Google search engine

Homeಸ್ಥಳೀಯದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ: ಪ್ರತಾಪ್ ಸಿಂಹ ಪ್ರತಿಕ್ರಿಯೆ

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ: ಪ್ರತಾಪ್ ಸಿಂಹ ಪ್ರತಿಕ್ರಿಯೆ

ಮೈಸೂರು : ಈ ಬಾರಿಯ ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಾನು ಮುಷ್ತಾಕ್ ಆಯ್ಕೆಯಾಗಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿದ್ದಾರೆ.ಬೂಕರ್ ಪ್ರಶಸ್ತಿ ಪಡೆದ ಬಾನು ಮುಷ್ತಾಕ್ ಅವರಿಗೆ ಅಭಿನಂದನೆ.ನಾಡ ಹಬ್ಬ ದಸರಾ ಉದ್ಘಾಟನೆಯ ಆಹ್ವಾನಕ್ಕೆ ಒಪ್ಪಿದ್ದೀರಿ‌.ಸಾಹಿತ್ಯಕ್ಕೆ ನೀಡಿರುವ ಕೊಡುಗೆಯ ಬಗ್ಗೆ ಬಹಳ ಅಭಿಮಾನ, ಗೌರವ ಇದೆ ಎಂದಿದ್ದಾರೆ.

ಇದೇ ವೇಳೆ ದಸರಾ ನಾಡ ಹಬ್ಬ ಜಾತ್ಯಾತೀತದ ಪ್ರತೀಕ ಅಲ್ಲ ಧಾರ್ಮಿಕ ಆಚರಣೆ.ಬಾನು ಮುಷ್ತಾಕ್ ರವರ ಧರ್ಮ ಆಚರಣೆ ನಿಮ್ಮ ವೈಯುಕ್ತಿಕ.ದಸರಾ ಧಾರ್ಮಿಕತೆಯ ಪ್ರತೀಕ,ನಮ್ಮ ಹಬ್ಬ , ದುರ್ಗಾ ಪೂಜೆ,ನವರಾತ್ರಿ,ಏನು ಬೇಕಾದರೂ ಕರೆಯಿರಿ.

ದಸರಾ ವಿಜಯನಗರ ಸಾಮ್ರಾಜ್ಯ ಪತನವಾದ ನಂತರ ಯದುವಂಶ ಮುಂದುವರೆಸಿಕೊಂಡು ಬಂದಿದೆ.ಇದು ಜಾತ್ಯಾತೀತ ಅಲ್ಲ ನಮ್ಮ ಧಾರ್ಮಿಕ ಆಚರಣೆ ಎಂದು ಪ್ರತಿಪಾದಿಸಿದ್ದಾರೆ.

ಇನ್ನು ಬಾನು ಮುಷ್ತಾಕ್ ಅವರಿಗೆ ತಾಯಿ ಚಾಮುಂಡಿಯ ಬಗ್ಗೆ ನಂಬಿಕೆ ಇದೆಯಾ?ನಾಡಿನ ಅಧಿದೇವತೆ ಚಾಮುಂಡಿ ತಾಯಿಯ ಪೂಜೆ, ನಾಡಹಬ್ಬ ದಸರಾವನ್ನು ಅತ್ಯಂತ ಭಕ್ತಿ ಭಾವದಿಂದ ಮಾಡಲಾಗುತ್ತದೆ. ಇದು ಸರ್ಕಾರಿ ಕಾರ್ಯಕ್ರಮವಲ್ಲ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.ಆದ್ರೆ ಇದಕ್ಕೆ ಬಾನು ಮುಷ್ತಾಕ್ ಸೂಕ್ತವಾದ ವ್ಯಕ್ತಿ ಆಗ್ತಾರಾ ? ಬಾನು ಮುಷ್ತಾಕ್ ಅವರನ್ನು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿ ಅಪಾರ ಗೌರವ ಕೊಡಿ.ಧಾರ್ಮಿಕ ಆಚರಣೆಗೂ ಬಾನು ಮುಷ್ತಾಕ್ ಅವರಿಗೆ ಏನು ಸಂಬಂಧ? ಎಂದು ಪ್ರಶ್ನಿಸಿದ್ದಾರೆ.

ಈ ಹಿಂದೆ ಬರಗೂರು ರಾಮಚಂದ್ರಪ್ಪ ಸಹ ದಸರಾ ಉದ್ಘಾಟನೆಯ ಸಮಯದಲ್ಲಿ ದೇವಸ್ಥಾನಕ್ಕೆ ಬರೋದಿಲ್ಲ ಅಂದರು.ಸದಾ ಹಿಂದೂ ಧರ್ಮದ ಬಗ್ಗೆ ಬೈಯುತ್ತಿದ್ದ ಗಿರೀಶ್ ಕಾರ್ನಾಡ್ ಅವರನ್ನೂ ಕರೆದಿದ್ದೀರ.ಸಿಎಂ ಸಿದ್ದರಾಮಯ್ಯನವರೇ ಇದು ಸರ್ಕಾರಿ ಕಾರ್ಯಕ್ರಮ ಅಲ್ಲ.ಹಿಂದೂಗಳ ಧಾರ್ಮಿಕ ಕಾರ್ಯಕ್ರಮ.ಬಾನು ಮುಷ್ತಾಕ್ ಮುಸ್ಲಿಂ ಧರ್ಮದವರು ಎಂದು ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಸ್ಲಿಂ ಧರ್ಮದವರಿಗೆ ಅಲ್ಲಾಹು ಅವರನ್ನು ಹೊರತುಪಡಿಸಿ ಬೇರೆ ಯಾರೂ ದೇವರಿಲ್ಲ ಎಂದು ಇಸ್ಲಾಂ ಧರ್ಮದಲ್ಲಿ ಹೇಳುತ್ತದೆ.ಹಾಗಾದರೆ ನೀವು ಚಾಮುಂಡಿ ದೇವರನ್ನು ನಂಬುತ್ತೀರಾ ? ಸಿದ್ದರಾಮಯ್ಯನವರೇ..ಅನಿಷ್ಠ ಮಹಿಷ ದಸರಾ ಉದ್ಘಾಟನೆ ಮಾಡಿದ ಪರಂಪರೆ ನಿಮ್ಮದು.ದಸರಾ ಉದ್ಘಾಟಕರ ಹೆಸರಿನ ಬಗ್ಗೆ ಮರು ಪರಿಶೀಲನೆ ಮಾಡಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.

RELATED ARTICLES
- Advertisment -
Google search engine

Most Popular