Thursday, March 19, 2026
Google search engine

Homeರಾಜಕೀಯಬಸನಗೌಡ ಪಾಟೀಲ್ ಯತ್ನಾಳ್ ಟಿಕೆಟ್ ಬದಲಾವಣೆ ಬಾಂಬ್ : ಸಿದ್ದೇಶ್ವರ ಆಪ್ತರಿಗೆ ಟಿಕೆಟ್ ತಾತ್ಕಾಲಿಕವೇ?

ಬಸನಗೌಡ ಪಾಟೀಲ್ ಯತ್ನಾಳ್ ಟಿಕೆಟ್ ಬದಲಾವಣೆ ಬಾಂಬ್ : ಸಿದ್ದೇಶ್ವರ ಆಪ್ತರಿಗೆ ಟಿಕೆಟ್ ತಾತ್ಕಾಲಿಕವೇ?

ವಿಜಯಪುರ : ದಾವಣಗೆರೆ ದಕ್ಷಿಣ ಕ್ಷೇತ್ರದ ಬಿಜೆಪಿ ಟಿಕೆಟ್ ಸಿದ್ದೇಶ್ವರ ಆಪ್ತಗೆ ನೀಡಿದ್ದಾರೆ. ಆದರೆ, ಇದು ಪಕ್ಕಾ ಅಲ್ಲ, ಕೊನೆ ಕ್ಷಣದಲ್ಲಿ ಟಿಕೆಟ್ ಬದಲಾದ್ರೂ ಆಶ್ಚರ್ಯ ಪಡಬೇಡಿ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೊಸ ಬಾಂಬ್‌ ಸಿಡಿಸಿದ್ದಾರೆ.

ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ಮುಗಿಯುವ ವರೆಗೂ ಇದನ್ನ ನಂಬುವ ಹಾಗಿಲ್ಲ. ಕಾಂಗ್ರೆಸ್ ಟಿಕೆಟ್ ಮುಸ್ಲಿಮರಿಗೆ ಕೊಟ್ಟರೆ ಇದು ಬದಲಾಗುತ್ತೆ ಎಂದು ಯತ್ನಾಳ್‌ ತಿಳಿಸಿದ್ದಾರೆ.

ಶಾಮನೂರು ಶಿವಶಂಕರಪ್ಪ ಅವರ ಕುಟುಂಬಕ್ಕೆ ಬಿಜೆಪಿ ಟಿಕೆಟ್ ಸಿಗುತ್ತೆ. ಶಾಮನೂರು ಅವರ ಉಪಕಾರ ಪೂಜ್ಯ ತಂದೆ ಯಡ್ಡಿಯೂರಪ್ಪ, ಪುತ್ರರಾದ ರಾಘವೇಂದ್ರ, ವಿಜಯೇಂದ್ರ ಮೇಲೆ ತುಂಬಾ ಇದೆ. ರಾಘವೇಂದ್ರ ಹಾಗೂ ವಿಜಯೇಂದ್ರ ಗೆಲ್ಲಲು ಶಾಮನೂರು ಅವರ ಸಹಾಯ ಇದೆ. ಟಿಕೆಟ್ ಈಗ ಕೊಟ್ಟಿರೋದು ತಾತ್ಕಾಲಿಕ ಎಂದು ಯತ್ನಾಳ್‌ ಮಾತನಾಡಿದ್ದಾರೆ.

ಸಿದ್ದೇಶ್ವರ ಆಪ್ತಗೆ ಟಿಕೆಟ್ ಕೊಟ್ಟರೂ ಪೂಜ್ಯ ತಂದೆ ಹಾಗೂ ಮಕ್ಕಳು ಬಿಜೆಪಿ ಅಭ್ಯರ್ಥಿಯನ್ನ ಸೋಲಿಸುತ್ತಾರೆ. ಶಾಮನೂರು ಅವರ ಉಪಕಾರ ತೀರಿಸಲು ಕೊನೆ ಕ್ಷಣದಲ್ಲಿ ಏನು ಬೇಕಾದ್ರೂ ಮಾಡ್ತಾರೆ. ಬಾಗಲಕೋಟೆ ಅಭ್ಯರ್ಥಿ ಚರಂತಿಮಠ ಅವರು ಸೂಕ್ತ ಅಭ್ಯರ್ಥಿ ಇದ್ದಾರೆ ಎಂದು ಯತ್ನಾಳ್‌ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular