Tuesday, July 29, 2025
Google search engine

Homeಅಪರಾಧಕಾನೂನುಬಿಬಿಎಂಪಿ ಚುನಾವಣೆ: ನವೆಂಬರ್‌ನಲ್ಲಿ ಮರುವಿಂಗಡಣೆ ಪೂರ್ಣ, ಮುಂದಿನ ಹಂತಗಳ ಬಗ್ಗೆ ಮಾಹಿತಿ ನೀಡಲು ಸುಪ್ರೀಂ ಕೋರ್ಟ್...

ಬಿಬಿಎಂಪಿ ಚುನಾವಣೆ: ನವೆಂಬರ್‌ನಲ್ಲಿ ಮರುವಿಂಗಡಣೆ ಪೂರ್ಣ, ಮುಂದಿನ ಹಂತಗಳ ಬಗ್ಗೆ ಮಾಹಿತಿ ನೀಡಲು ಸುಪ್ರೀಂ ಕೋರ್ಟ್ ಸೂಚನೆ

ನವದೆಹಲಿ : ಇಂದು ಸುಪ್ರೀಂ ಕೋರ್ಟ್ ನಲ್ಲಿ ಬಿಬಿಎಂಪಿ ಚುನಾವಣೆ ಕುರಿತಂತೆ ಅರ್ಜಿ ವಿಚಾರಣೆ ನಡೆಯಿತು. ಬಿಬಿಎಂಪಿ ವಾರ್ಡ್ ಗಳ ಕ್ಷೇತ್ರ ಮರು ವಿಂಗಡಣೆ ಪ್ರಕ್ರಿಯೆ ಮುಗಿಸುತ್ತೇವೆ. ವಾರ್ಡ್ ಗಳ ಕ್ಷೇತ್ರ ಮರು ವಿಂಗಡಣೆ ಬಗ್ಗೆ ಆಫೀಡಿವೇಟ್ ಸಲ್ಲಿಸಿದ್ದೇವೆ. ನವೆಂಬರ್ ತಿಂಗಳ ಒಳಗೆ ಎಲ್ಲಾ ಪ್ರಕ್ರಿಯೆ ಮುಗಿಸುತ್ತೇವೆ ಎಂದು ಸುಪ್ರೀಂ ಕೋರ್ಟ್ ನಲ್ಲಿ ಸರ್ಕಾರದ ಪರ ವಕೀಲ ಅಭಿಷೇಕ್ ಮನುಸಿಂಗ್ವಿ ವಾದಿಸಿದರು.

ಪ್ರಕ್ರಿಯೆ ಮುಗಿಯೋದರಿಂದ ಬಿಬಿಎಂಪಿ ಚುನಾವಣೆ ವಿಳಂಬ ಆಗಿಲ್ಲ. ಬಿಬಿಎಂಪಿ ಚುನಾವಣೆ ಮಾಡಲು ನಾವು ತಯಾರಿದ್ದೇವೆ ಎಂದು ಅಭಿಷೇಕ್ ಮನುಸಿಂಗ್ವಿ ತಿಳಿಸಿದರು. ನವೆಂಬರಲ್ಲಿ ವಾರ್ಡ್ ಪುನರ್ ವಿಂಗಡಣೆ ಮುಗಿದರೂ ಬಿಬಿಎಂಪಿ ವ್ಯಾಪ್ತಿ ಮತದಾರರ ಪಟ್ಟಿ ತಯಾರಿಕೆಗೆ ಸಮಯ ಬೇಕು ಎಂದು ಚುನಾವಣಾ ಆಯೋಗದ ಪರವಾಗಿ ವಕೀಲ ಫಣಿಂದ್ರ ವಾದ ಮಂಡಿಸಿದರು. 10 ವರ್ಷದಿಂದ ಚುನಾವಣೆ ನಡೆದಿಲ್ಲ ಎಂದು ಶಿವರಾಜು ಪರ ವಕೀಲರು ವಾದ ಮಂಡಿಸಿದರು.

ವಾದ ಪ್ರತಿವಾದ ಆಲಿಸಿದ ಬಳಿಕ ಅಫಿಡಿಟ್ ಸಲ್ಲಿಕೆಗೆ ಸುಪ್ರೀಂ ಕೋರ್ಟ್ ಇದೆ ವೇಳೆ ಸೂಚನೆ ನೀಡಿತು. ಎಷ್ಟು ಸಮಯ ಬೇಕು ಹೇಗೆ ಚುನಾವಣಾ ತಯಾರಿ ನಡೆಸಲಾಗುವುದು ಬಿಬಿಎಂಪಿ ಚುನಾವಣೆ ಸಿದ್ಧತೆಯ ಪ್ರತಿಯೊಂದು ಮಾಹಿತಿ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಇದೆ ಬೆಳೆ ಸೂಚನೆ ನೀಡಿತು. ಬಳಿಕ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಅಗಸ್ಟ್ 4ಕ್ಕೆ ಮಂದೂಡಿತು.

RELATED ARTICLES
- Advertisment -
Google search engine

Most Popular